More

    ಸಂಸತ್ ಭವನದ ಶಂಕುಸ್ಥಾಪನೆ ನೆರವೇರಿಸಲು ಸುಪ್ರೀಂ ಅನುಮತಿ- ಆದರೂ ಕೇಂದ್ರಕ್ಕೆ ಹಿನ್ನಡೆ…

    ನವದೆಹಲಿ: ಇದೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ನಡೆಸುತ್ತಿರುವ ನೂತನ ಸಂಸತ್​ ಭವನದ ಶಂಕುಸ್ಥಾಪನೆಗೆ ಸುಪ್ರೀಂಕೋರ್ಟ್​ ಅನುಮತಿ ನೀಡಿದೆ.

    971 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಸಂಸತ್ ಭವನ ನಿರ್ಮಾಣದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಇಂದು ಆದೇಶ ನೀಡಿರುವ ಕೋರ್ಟ್​, ಶಂಕುಸ್ಥಾಪನೆಗೆ ಅನುಮತಿ ನೀಡಿದೆ.

    ಭವನ ನಿರ್ಮಾಣಕ್ಕೆ ಪರಿಸರ ಇಲಾಖೆಯ ಅನುಮತಿ ಪಡೆದಿಲ್ಲ ಎಂದು ಆರೋಪಿಸಿ ಕೆಲವರು ಅರ್ಜಿ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾ.ಎ.ಎಂ.ಕಾನ್ವಿಲ್‍ಕರ್ ನೇತೃತ್ವದ ಪೀಠ ಶಂಕುಸ್ಥಾಪನೆಗೆ ಅನುಮತಿ ನೀಡಿದೆ. ಆದರೆ ಇದಕ್ಕೆ ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ತಾತ್ಕಾಲಿಕ ಹಿನ್ನಡೆಯಾದಂತಾಗಿದೆ.

    ಇದನ್ನೂ ಓದಿ: ಯೋಗಿ ನಂತರ ಚೌಹಾಣ್​- ಲವ್​ ಜಿಹಾದಿಗಳಿಗೆ ಇಲ್ಲೂ ಶುರಾಗಲಿದೆ ನಡುಕ: 10 ವರ್ಷ ಜೈಲು!

    ಅದೇನೆಂದರೆ, ಶಂಕುಸ್ಥಾಪನೆ ನೆರವೇರಿಸಬಹುದು, ಆದರೆ ಈ ಅರ್ಜಿಯ ವಿಚಾರಣೆ ಮುಗಿದು ತೀರ್ಪು ಹೊರಬರುವವರೆಗೆ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ಪರ ವಕೀಲರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಶಂಕುಸ್ಥಾಪನೆಗೆ ಅನುಮತಿ ನೀಡಲಾಗಿದೆ. ಆದ್ದರಿಂದ ಕಟ್ಟಡ ನಿರ್ಮಾಣದ ಭವಿಷ್ಯ ಸುಪ್ರೀಂಕೋರ್ಟ್​ ಭವಿಷ್ಯದಲ್ಲಿ ನೀಡುವ ತೀರ್ಪಿಗೆ ಬದ್ಧವಾಗಿರುತ್ತದೆ.

    ಇದು 900 ರಿಂದ 1200 ಸಂಸದರು ಕೂರುವ ಸಾಮರ್ಥ್ಯವಿರುವ ಸಂಸತ್ ಭವನವಾಗಿದೆ. 75ನೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ 2024ರ ವೇಳೆಗೆ ಭವನ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಆದರೆ ಸದ್ಯ ಕೋರ್ಟ್​ ತೀರ್ಪಿನ ಹಿನ್ನೆಲೆಯಲ್ಲಿ ಪ್ರಧಾನಿಯವರ ಕನಸು ನನಸಾಗುವುದೋ ಕಾದು ನೋಡಬೇಕಿದೆ.

    ಕಾಂಗ್ರೆಸ್​ ಪ್ರಣಾಳಿಕೆಯಲ್ಲೂ ಇದೇ ಕೃಷಿ ಕಾನೂನು- ಗುಡುಗುತ್ತಿರೋ ಕೈ ಮುಖಂಡರು ಸುಸ್ತೋ ಸುಸ್ತು!

    ಭಾರತದತ್ತ ವಿದೇಶಿಗರ ಕಣ್ಣು! ಕೆನಡಾ, ಅಮೆರಿಕ ನಂತರ ಲಂಡನ್​ನಲ್ಲಿ ಶುರುವಾಗಿದೆ ಪ್ರತಿಭಟನೆ

    ಸಿಬಿಐ ವಶದಲ್ಲಿರುವ ಬಿಜೆಪಿ ಕೌನ್ಸಲರ್​ ಅಮಾನತು- ಭ್ರಷ್ಟಾಚಾರಿಗಳನ್ನು ಸಹಿಸಲ್ಲ ಎಂದ ಪಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts