More

    VIDEO: ಪ್ರತಿಭಟನೆಯ ರಹಸ್ಯ ಬಿಚ್ಚಿಟ್ಟ ಟಿಕಾಯತ್‌! ಅವರ ಬಾಯಿಯಿಂದ್ಲೇ ‘ಸತ್ಯ’ ಕೇಳಿ ಅಭಿಮಾನಿಗಳಿಗೂ ಮುಜುಗರ

    ಲಖನೌ: ದೆಹಲಿಯ ಗಡಿಯಲ್ಲಿ 13 ತಿಂಗಳು ರೈತರ ಹೆಸರಿನಲ್ಲಿ ರಾಕೇಶ್‌ ಟಿಕಾಯಕ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಹಿಂದಿನ ಉದ್ದೇಶ ಎಲ್ಲವೂ ತಿಳಿಯುವವರಿಗೆ, ತಿಳಿದುಕೊಳ್ಳುವ ಮನಸ್ಸು ಇದ್ದವರಿಗೆ ಸ್ಪಷ್ಟವಾಗಿದ್ದು, ಇದರ ಕುರಿತಂತೆ ಸಾಕಷ್ಟು ಸಾಕ್ಷ್ಯಾಧಾರಗಳೂ ಸಿಕ್ಕಿವೆ. 13 ತಿಂಗಳು ಪ್ರತಿಭಟನೆಯ ಹೆಸರಿನಲ್ಲಿ ನಡೆದ ಹಿಂಸಾಚಾರ, ಅನಾಚಾರಕ್ಕೆ ಲೆಕ್ಕವೇ ಇಲ್ಲ. ರೈತರನ್ನು ಉದ್ಧಾರ ಮಾಡುವ ಉದ್ದೇಶದಿಂದ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳುವ ಮೂಲಕ ನಿಜವಾದ ಮುಗ್ಧ ರೈತರೂ ಪ್ರತಿಭಟನೆಯ ಹಿಂದಿನ ಉದ್ದೇಶ ಅರಿಯದೇ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದರು ಎಂಬ ಮಾತುಗಳೂ ಸಾಕಷ್ಟು ಕೇಳಿಬಂದಿದ್ದವು.

    ಆದರೆ ಇದೀಗ ಅರಿತೋ ಅರಿಯದೆಯೋ ಖುದ್ದು ರಾಕೇಶ್‌ ಟಿಕಾಯತ್‌ ಅವರೇ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ಒಂದು ಪಕ್ಷದಲ್ಲಿ ಕೋಲಾಹಲ ಸೃಷ್ಟಿ ಮಾಡಿರುವುದಂತೂ ನಿಜ. ಈ ಪ್ರತಿಭಟನೆಯ ಹಿಂದಿನ ಉದ್ದೇಶವೇನಿತ್ತು? ಇದನ್ನು ಮಾಡಿಸಿದವರು ಯಾರು ಎಂಬ ಬಗ್ಗೆ ಟಿಕಾಯತ್‌ ಅವರ ಈ ಮಾತು ಚಿಂತನೆಗೆ ಹಚ್ಚಿಸಿದೆ. ಖುದ್ದು ಟಿಕಾಯತ್‌ ಅವರನ್ನು ಬೆಂಬಲಿಸುತ್ತಿದ್ದವರು ಕೂಡ ಮುಖ ಕೆಳಕ್ಕೆ ಮಾಡುವಂತಾಗಿದೆ.

    ಅಷ್ಟಕ್ಕೂ ಟಿಕಾಯತ್‌ ಹೇಳಿದ್ದೇನು? ಇಲ್ಲಿದೆ ನೋಡಿ ಅದರ ವಿಡಿಯೋ…

    ಅಲಿಘರ್‌ನ ಇಗಲಾಸ್ ಪ್ರದೇಶದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಆಗಮಿಸಿದ ರಾಕೇಶ್ ಟಿಕಾಯತ್‌ ಬಂದಿದ್ದ ಸಂದರ್ಭದಲ್ಲಿ ಚುನಾವಣೆಯ ಕುರಿತಂತೆ ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರದ ವಿಡಿಯೋ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಟಿಕಾಯತ್‌ ಹೇಳಿದ್ದೇನೆಂದರೆ, ‘ದೆಹಲಿಯ ಬಾರ್ಡರ್‌ನಲ್ಲಿ 13 ತಿಂಗಳು ನಾವು ನಡೆಸಿದ್ದ ಆಂದೋಲನ ಒಂದು ತರಬೇತಿ (ಟ್ರೇನಿಂಗ್‌) ಅಷ್ಟೇ. ಈ ತರಬೇತಿ ಕೊಟ್ಟ ಮೇಲೆ ಅಲ್ಲಿ ಬಂದವರಿಗೆ ಅವರು ಯಾರಿಗೆ ಮತ ಹಾಕಬೇಕು, ಯಾರಿಗೆ ಮತ ಹಾಕಬಾರದು ಅಂತ ತಿಳಿದಿದೆ ಎಂದುಕೊಂಡಿದ್ದೇನೆ. ಆಂದೋಲನದ ಹೆಸರಿನಲ್ಲಿ ಕೊಟ್ಟಿರುವ ಈ ತರಬೇತಿಯ ನಂತರವೂ ಅಲ್ಲಿ ಬಂದವರಿಗೆ ಯಾರಿಗೆ ವೋಟು ಹಾಕಬಾರದು ಎಂದು ಗೊತ್ತಾಗದೇ ಹೋದರೆ ನಾವು ಇಷ್ಟೆಲ್ಲಾ ಕಷ್ಟಪಟ್ಟಿದ್ದರ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

    ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯಿಂದ ರೈತರಿಗೆ ಸಮಸ್ಯೆ ಆಗುತ್ತಿದೆ ಎನ್ನುವ ಹೆಸರಿನಲ್ಲಿ ನಿಜವಾಗಿಯೂ ಟಿಕಾಯತ್‌ ಅಲ್ಲಿಗೆ ಬಂದಿರುವ ಉದ್ದೇಶವನ್ನು ಈ ಮೂಲಕ ಸ್ಪಷ್ಟಪಡಿಸಿದ್ದಾರೆ ಎಂದೇ ಬಣ್ಣಿಸಲಾಗುತ್ತಿದೆ. ಈಗ ರಾಜ್ಯದಲ್ಲಿ ಎರಡೂವರೆ ತಿಂಗಳ ಕಾಲ ಹಿಂದೂ ಮುಸ್ಲಿಂ ಮತ್ತು ಜಿನ್ನಾ ಎಂಬ ಭೂತ ಇರಲಿದೆ. ಹಾಗಾಗಿ ರೈತರು ಹಿಂದೂ-ಮುಸ್ಲಿಂ ಅನ್ನೋ ಈ ಮಾತುಗಳ ಬಲೆಗೆ ಬೀಳಬಾರದು ಎಂದಿದ್ದಾರೆ.

    ಅಲ್ಲಿ (ಉತ್ತರ ಪ್ರದೇಶದಲ್ಲಿ) ಯಾರ ಸರ್ಕಾರ ರಚನೆಯಾಗುತ್ತೋ ಗೊತ್ತಿಲ್ಲ. ಆದರೆ ಸಾರ್ವಜನಿಕರು ಮಾತ್ರ ‘ಇವರಿಗೆ’ ಮತ ಹಾಕುವುದಿಲ್ಲ. ಯಾರಿಗೆ ಹಾಕಬೇಕು ಎಂದು 13 ತಿಂಗಳು ಟ್ರೇನಿಂಗ್‌ ಕೊಟ್ಟಾಗಿದೆ ಎಂದರು. ಇವರ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು ಥಹರೇವಾರಿ ಕಮೆಂಟ್‌ಗಳು ಬರುತ್ತಿವೆ. ತಮ್ಮ ಮಾತಿನಿಂದ ಜನರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಟಿಕಾಯತ್‌ ಹೇಳಲು ಹೊರಟಿದ್ದರೂ ಪರೋಕ್ಷವಾಗಿ ಪ್ರತಿಭಟನೆಯ ನಿಜವಾದ ಕಾರಣವನ್ನು ಅರಿವಿಲ್ಲದೇ ಬಾಯಿಬಿಟ್ಟಿದ್ದಾರೆ ಎಂದಿದ್ದಾರೆ. ಅವರ ಹೇಳಿಕೆಯಿಂದ ಅವರು ಬೆಂಬಲಿಸುವ ಪಕ್ಷಕ್ಕೂ ಮುಜುಗರ ಆದಂತಾಗಿದೆ ಪಾಪ ಎಂದು ಇನ್ನು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

    ಸಮಾಜಸೇವೆ ಚುನಾವಣಾ ಗಿಮಿಕ್‌ ಅಲ್ಲ ಎಂದಿದ್ದ ಸೋನು ಸೂದ್‌ ಮಾತು ತಪ್ಪಿದ್ರಾ? ‘ದೇವರು’ ಎಂದವರೇ ತಿರುಗಿಬಿದ್ದರು!

    ಪಂಜಾಬ್‌ ರಾಜಕೀಯದಲ್ಲಿ ಪಾಕ್‌ ಪ್ರವೇಶ: ಮಾಜಿ ಸಿಎಂ ಅಮರೀಂದರ್‌ ಸಿಂಗ್‌ ಸ್ಫೋಟಕ ಮಾಹಿತಿ- ಸೋನಿಯಾ ಮೌನ, ಪ್ರಿಯಾಂಕಾ ಗರಂ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts