More

    ಹೊಸ ತಲೆಮಾರಿನ 400 ವಂದೇ ಭಾರತ್ ರೈಲುಗಳ ಸಂಚಾರ: ನಿರ್ಮಲಾ ಸೀತಾರಾಮನ್‌

    ನವದೆಹಲಿ: ಕಳೆದ ವರ್ಷ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿಯವರು ಭಾರತದ 75 ನಗರಗಳನ್ನು ಸಂಪರ್ಕಿಸಲು ಹೊಸ ವಂದೇ ಭಾರತ್ ರೈಲುಗಳನ್ನು ಓಡಿಸುವುದಾಗಿ ಘೋಷಿಸಿದ್ದರು. ಅದರಂತೆಯೇ ಈ ಬಾರಿಯ ಬಜೆಟ್‌ನಲ್ಲಿ 400 ವಂದೇ ಭಾರತ್‌ ರೈಲುಗಳನ್ನು ಘೋಷಿಸಲಾಗಿದೆ.

    ವಂದೇ ಭಾರತ್ ರೈಲುಗಳನ್ನು ಶತಾಬ್ದಿಯನ್ನು ಹೊರತುಪಡಿಸಿ ಅನೇಕ ಪ್ರಮುಖ ಮಾರ್ಗಗಳಲ್ಲಿ ಇಂಟರ್‌ಸಿಟಿ ರೈಲುಗಳಂತೆ ಪ್ರಾರಂಭಿಸಲಾಗುವುದು. ಇವು ಜರ್ಮನ್ ವಿನ್ಯಾಸದ ಕೋಚ್‌ಗಳಾಗಿರುತ್ತವೆ.

    ದೇಶದಲ್ಲಿ ಒಟ್ಟು 400 ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗಲಿದೆ. ಸಮಯಪಾಲನೆ ಮತ್ತು ಪ್ರಯಾಣಿಕರಿಗೆ ಅತ್ಯಾಧುನಿಕ ಸೌಕರ್ಯಗಳನ್ನು ಈ ರೈಲುಗಳು ಒದಗಿಸುತ್ತವೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿ ಮಾಡುತ್ತೇವೆ. ಮುಂದಿನ 3 ವರ್ಷಗಳಲ್ಲಿ ಉತ್ತಮ ದಕ್ಷತೆಯೊಂದಿಗೆ ಈ ರೈಲುಗಳನ್ನು ತರಲಾಗುವುದು.

    100 ಪಿಎಂ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಮುಂದಿನ 3 ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಮೆಟ್ರೋ ವ್ಯವಸ್ಥೆಯನ್ನು ನಿರ್ಮಿಸಲು ನವೀನ ಮಾರ್ಗಗಳ ಅನುಷ್ಠಾನ ಮಾಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಕೇಂದ್ರ ಬಜೆಟ್​ 2022: 60 ಲಕ್ಷ ಉದ್ಯೋಗ ಸೃಷ್ಟಿಸುವುದೇ ಸರ್ಕಾರದ ಮುಂದಿನ ಗುರಿ: ನಿರ್ಮಲಾ ಸೀತಾರಾಮನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts