More

    ದೆಹಲಿ ಬಾಲಕಿಯ ರೇಪ್‌ಕೇಸ್‌: ವಿವಾದ: ರಾಹುಲ್ ಗಾಂಧಿ ಟ್ವಿಟರ್‌ ಖಾತೆ ಸ್ಥಗಿತ

    ನವದೆಹಲಿ: ಇಡೀ ದೇಶವನ್ನೇ ತಲ್ಲಣಗೊಳಿಸಿರುವ ನೈರುತ್ಯ ದೆಹಲಿಯ ಬಾಲಕಿಯ ರೇಪ್‌, ಮರ್ಡರ್ ಕೇಸ್‌ಗೆ ಸಂಬಂಧಿಸಿದಂತೆ ಸಂಸದ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಟ್ವಿಟರ್‌ ಖಾತೆಯನ್ನು ಟ್ವಿಟರ್‌ ಸ್ಥಗಿತಗೊಳಿಸಿದೆ.

    ಇದಕ್ಕೆ ಕಾರಣ, ಬಾಲಕಿಯ ಕುಟುಂಬದ ಚಿತ್ರವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಕಾನೂನು ಬಾಹಿರವಾಗಿ ರಾಹುಲ್‌ ಹಂಚಿಕೊಂಡಿದ್ದರು.

    ಪೋಕ್ಸೊ ಕಾಯ್ದೆ ಅನ್ವಯ ಅತ್ಯಾಚಾರಕ್ಕೆ ಒಳಗಾಗುವ ಬಾಲಕಿ ಅಥವಾ ಅವರ ಕುಟುಂಬದವರ ಫೋಟೋಗಳನ್ನು ಹಂಚಿಕೊಳ್ಳುವುದು ಅಪರಾಧ. ಆದರೆ ಬಾಲಕಿಯ ಮನೆಗೆ ತಾವು ಹೋಗಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡುವ ಮೂಲಕ ರಾಹುಲ್‌ ಗಾಂಧಿ ಈ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಟ್ವಿಟರ್‌ಗೆ ನೋಟಿಸ್ ನೀಡಿತ್ತು.

    ಜತೆಗೆ ಈ ಟ್ವೀಟ್‌ನ್ನು ತೆಗೆದು ಹಾಕುವಂತೆ ಟ್ವಿಟರ್‌ಗೆ ಆಯೋಗ ಹೇಳಿತ್ತು. ಇದರ ಆಧಾರದ ಮೇಲೆ ಟ್ವಿಟರ್‌ ತಾತ್ಕಾಲಿಕವಾಗಿ ರಾಹುಲ್ ಗಾಂಧಿಯವರ ಖಾತೆಯನ್ನು ಸ್ಥಗಿತಗೊಳಿಸಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕರು ಆಕೆಯನ್ನು ಸುಟ್ಟುಹಾಕಿದ್ದಾರೆ. ಈ ಕುಟುಂಬದವರಿಗೆ ಸಾಂತ್ವನ ಹೇಳಲು ರಾಹುಲ್‌ ಗಾಂಧಿ ಅವರ ಮನೆಗೆ ಹೋಗಿದ್ದರು. ಈ ವೇಳೆ ಬಾಲಕಿಯ ಕುಟುಂಬದ ಜೊತೆ ಇರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿ, ‘ಬಾಲಕಿಗೆ ನ್ಯಾಯ ಸಿಗುವವರೆಗೂ ಹಿಂದೆ ಸರಿಯುವುದಿಲ್ಲ’ ಎಂದು ಬರೆದುಕೊಂಡಿದ್ದರು. ಆದರೆ ಇದು ಕಾನೂನು ಉಲ್ಲಂಘನೆಯಾಗಿದೆ.

    ಖಾತೆ ಸ್ಥಗಿತಗೊಳಿಸಿರುವ ಕುರಿತು ಟ್ವೀಟ್‌ ಮೂಲಕ ಮಾಹಿತಿ ನೀಡಿರುವ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್‌ ಕೆಲವೊಂದು ಕಾರಣಗಳಿಂದಾಗಿ ರಾಹುಲ್‌ ಗಾಂಧಿಯವರ ಟ್ವಿಟರ್‌ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಅದು ಸರಿಯಾಗುವವರೆಗೆ ಅವರು ಬೇರೆ ಬೇರೆ ಜಾಲತಾಣಗಳಲ್ಲಿ ಲಭ್ಯ ಇರಲಿದ್ದಾರೆ. ಜನರಿಗಾಗಿ ಮತ್ತು ಅವರ ಹಕ್ಕುಗಳಿಗಾಗಿ ದನಿಯೆತ್ತುವುದನ್ನು ಮುಂದುವರೆಸುತ್ತಾರೆ. ಜೈ ಹಿಂದ್’ ಎಂದಿದೆ.
    ಬಳಿಕ ಮತ್ತೊಂದು ಟ್ವೀಟ್​ ಮೂಲಕ ರಾಹುಲ್​ ಅವರ ಖಾತೆಯು ಲಾಕ್​ ಆಗಿದೆ ಎಂದು ಕಾಂಗ್ರೆಸ್​ ತಿಳಿಸಿದೆ.

    ಇಲ್ಲಿದೆ ನೋಡಿ ಕಾಂಗ್ರೆಸ್‌ ಟ್ವೀಟ್‌:

    ತೊಡೆಗಳ ಸಂಧಿಯಲ್ಲಿ ಖಾಸಗಿ ಅಂಗ ತೂರಿಸಿದರೂ ಅತ್ಯಾಚಾರವೇ- ಹೈಕೋರ್ಟ್​ನಿಂದ ಜೀವಾವಧಿ ಶಿಕ್ಷೆ

    ಅಪ್ಪ-ಅಮ್ಮನ ಕಿತ್ತಾಟದಿಂದಾಗಿ ಮುಸ್ಲಿಂ ಧರ್ಮಕ್ಕೆ ವಾಲಿ ಉಗ್ರನಾದ ಮಗ ಮಾದೇಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts