More

    ಜನ ಬದಲಾವಣೆ ಬಯಸ್ತಿದ್ದಾರೆ, ನನ್ನ ಮಗ ಇದಾಗಲೇ ಸಿಎಂ ಆಗಿಬಿಟ್ಟ ಎಂದ ಭಗವಂತ್ ಮಾನ್ ತಾಯಿ

    ಚಂಡೀಗಢ: ಆಡಳಿತಾರೂಢ ಕಾಂಗ್ರೆಸ್ ಜತೆಗೆ ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷಕ್ಕೆ (ಆಪ್‌) ಪಂಜಾಬ್‌ ಪ್ರತಿಷ್ಠೆಯ ಕಣವಾಗಿದ್ದು, ಇವುಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯಂತೆಯೇ ಆಮ್‌ ಆದ್ಮಿ ಪಕ್ಷ ಕೂಡ ತನ್ನದೇ ಸರ್ಕಾರ ತರಲು ಶತಾಯುಗತಾಯು ಪ್ರಯತ್ನಿಸುತ್ತಿದ್ದು, ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಪ್‌ ಭಗವಂತ್ ಮಾನ್ ಘೋಷಣೆಯಾಗಿದೆ.

    ಇನ್ನೂ ಚುನಾವಣೆ ಮೊದಲ ಹಂತ ನಡೆಯುತ್ತಿದ್ದಂತೆಯೇ ಭಗವಂತ್ ಮಾನ್ ಅವರ ತಾಯಿ ಹರ್ಪಾಲ್ ಕೌರ್ ಮಾತನಾಡಿದ್ದು, ನನ್ನ ಮಗ ಇದಾಗಲೇ ಮುಖ್ಯಮಂತ್ರಿ ಆಗಿದ್ದಾನೆ. ದೇವರ ದಯೆಯಿಂದ, ಎಲ್ಲರೂ ಅವನನ್ನು ಪ್ರೀತಿಸುತ್ತಾರೆ. ಪಂಜಾಬ್‌ನಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ನನ್ನ ಮಗನ ಮೇಲೆ ಇಲ್ಲಿಯ ಜನರು ಇಟ್ಟಿರುವ ಪ್ರೀತಿ ವಿಶ್ವಾಸ ನೋಡಿದರೆ ಆತ ಇದಾಗಲೇ ಮುಖ್ಯಮಂತ್ರಿಯಾಗಿದ್ದಾನೆ. ಇದಕ್ಕಿಂತ ಬೇರೆ ಸಂತೋಷ ಏನು ಬೇಕಿದೆ ಎಂದು ಪ್ರಶ್ನಿಸಿದ್ದಾರೆ.

    2014 ರಲ್ಲಿ ರಾಜಕೀಯಕ್ಕೆ ಸೇರಿದ ಮಾನ್‌ ಅವರು ಒಬ್ಬ ಹಾಸ್ಯ ನಟ. ಇವರು ಪಂಜಾಬ್‌ನ ಸಂಗ್ರೂರ್ ಸಂಸದೀಯ ಕ್ಷೇತ್ರದಿಂದ ಎರಡು ಅವಧಿಗೆ ಸಂಸದರೂ ಆಗಿದ್ದಾರೆ. ಸದ್ಯ ಇವರು 2012 ರಿಂದ ಕಾಂಗ್ರೆಸ್ಸಿನ ಭದ್ರಕೋಟೆಯಾಗಿರುವ ಧುರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ನಾಟಕೀಯ ಬೆಳವಣಿಗೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಳೆದ ತಿಂಗಳು ಇವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರು.

    ಪಂಜಾಬ್‌ನ ತಮ್ಮ ಅಪೇಕ್ಷಿತ ಮುಖ್ಯಮಂತ್ರಿಯ ಹೆಸರನ್ನು ಸೂಚಿಸಿ ಎಂದು ಜನತೆಗೆ ಹೇಳಿದ್ದ ಕೇಜ್ರಿವಾಲ್‌, ನಮ್ಮ ನವಿಗೆ ಮನವಿಗೆ 2.3 ಮಿಲಿಯನ್ ಜನರು ಪ್ರತಿಕ್ರಿಯೆ ಕಳುಹಿಸಿದ್ದು, ಅದರಲ್ಲಿ ಶೇ 93.3 ಮಾನ್‌ ಪರವಾಗಿದೆ ಎಂದು ಹೇಳಿದರು.

    ‘12ನೇ ತರಗತಿ ಮೂರು ಸಲ ಬರೆದ ಕುಡುಕ, ಅನಕ್ಷರಸ್ಥನ ಕೈಯಲ್ಲಿ ನಮ್ಮ ರಾಜ್ಯ ಕೊಡೋದು ಹೇಗೆ’ ಎಂದ ಚನ್ನಿ!

    ಮಾರಾಟ ಮಾಡಿದ್ದ ಜಮೀನನ್ನೇ ಕಬಳಿಸಿದ ಶಾಸಕ ಜಮೀರ್‌? ಕೋರ್ಟ್‌ ಆದೇಶದ ಮೇರೆಗೆ ಎಫ್‌ಐಆರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts