More

    ‘60-65 ವಯಸ್ಸಿಗೆ ನಾನು ಹೀರೋ ಪಾರ್ಟ್‌ ಮಾಡಲ್ಲ… ಅಪ್ಪನ ಪಾರ್ಟ್‌ ಬೇಕಿದ್ರೆ ಮಾಡ್ತೇನೆ…’ ಅಪ್ಪುವಿನ ಸಂದರ್ಶನ ವೈರಲ್‌

    ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ವಾರ ಕಳೆದರೂ ಅವರು ಮಾಡಿದ ಸಮಾಜಸೇವೆ, ಅವರ ಮಾತು, ಸದಾ ಎಲ್ಲರೊಡನೆ ಬೆರೆಯುತ್ತಾ ಚಟುವಟಿಕೆಯಿಂದ ಇರುತ್ತಿದ್ದ ಘಟನೆಗಳನ್ನು ಅವರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಅಂಥ ಘಟನೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

    ತಮ್ಮ ಬದುಕಿನ ಕೆಲವು ರೋಚಕ ಕ್ಷಣಗಳನ್ನು ಅವರು ಕಳೆದ ವರ್ಷ ಮಾರ್ಚ್‌ 17ರಂದು ನಡೆಸಿದ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಆ್ಯಂಕರ್‌ ಅನುಶ್ರೀ ಅವರು ಈ ಸಂದರ್ಶನ ಮಾಡಿದ್ದು, ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಅದನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಸಂದರ್ಶನ ಪುನಃ ಈಗ ವೈರಲ್‌ ಆಗುತ್ತಿದೆ.

    ಬಾಲನಟನಾಗಿ 13 ವರ್ಷದವರೆಗೆ ಹಲವು ಚಿತ್ರಗಳಲ್ಲಿ ನಟಿಸಿದ ನಂತರ ‘ಪರಶುರಾಮ’ ಚಿತ್ರವೇ ಕೊನೆಯಾಯ್ತು. ಅದಾದ ಮೇಲೆ ಅನೇಕ ವರ್ಷ ನೀವು ಚಿತ್ರರಂಗಕ್ಕೆ ಬರಲೇ ಇಲ್ಲ, ಏಕೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಪ್ಪು, ನನಗೆ ಸಿನಿಮಾ ಸಾಕು ಎನ್ನಿಸಿತ್ತು. ಯಾಕೋ ಗೊತ್ತಿಲ್ಲ. ಮತ್ತೆ ಸಿನಿಮಾ ಪ್ರಪಂಚದಿಂದ ದೂರನೇ ಉಳಿಯೋಣ ಎಂದುಕೊಂಡೆ. ಬಿಜಿನೆಸ್‌ ಹುಚ್ಚು ತುಂಬಾ ಇತ್ತು. ಬಿಜಿನೆಸ್‌ ಮಾಡೋಣ ಎಂದುಕೊಂಡೆ. ಆದರೆ ಅದು ಸಕ್ಸಸ್‌ ಆಗಲಿಲ್ಲ. ಅದಕ್ಕೇ ಸಿನಿಮಾ ಕಡೆ ಮತ್ತೆ ವಾಲಿದೆ. ಹೀರೋನೇ ಆಗ್ಬೇಕು ಅಂತ ಆಸೆ ಇರಲಿಲ್ಲ. ಅದರ ಬಗ್ಗೆ ಇಂಟರೆಸ್ಟೂ ಇರಲಿಲ್ಲ. ಸಿನಿಮಾ ಪ್ರೊಡ್ಯೂಸೋ ಇನ್ನೇನೋ ಮಾಡೋಣ ಅಂದುಕೊಂಡೆ. ಆಗಲೇ ‘ಅಪ್ಪು’ ರಿಲೀಸ್‌ ಆಗಿ, ನನಗೇ ಅಚ್ಚರಿ ಎನಿಸುವಷ್ಟು ಸಕ್ಸಸ್‌ ಆಗೋಯ್ತು ಎಂದರು.

    ನಂತರ ಮುಂದೆ ನಿಮ್ಮ ಆಸೆ ಏನು ಎಂದು ಕೇಳಿದಾಗ, ‘ಕಲಿಯಲು ಇನ್ನೂ ಬಹಳಷ್ಟು ಇದೆ. ಅಪ್ಪಾಜಿ ಹೇಳೋರು, ಕಲಿಯಲು ವಯಸ್ಸೇ ಇಲ್ಲ ಅಂತ. ನಾನೇನು 60-65 ವಯಸ್ಸಿನ ತನಕ ಹೀರೋ ಪಾರ್ಟ್‌ ಮಾಡಲ್ಲಪ್ಪ. ಬೇಕಾದ್ರೆ ಅಪ್ಪನ ರೋಲ್‌ ಮಾಡ್ಬೋದು. ಆದರೆ ಆಗಲೂ ಕಲಿಯೋದು ಇದ್ದೇ ಇರತ್ತಲ್ವಾ? ನಟನೆ ಬೇಡ ಎಂದು ಪ್ರೊಡಕ್ಷನ್ನೋ ಇನ್ನೇನೋ ಮಾಡಿದ್ರೂ ಅಲ್ಲೂ ಕಲಿಯಲೇಬೇಕಲ್ವಾ ಎಂದು ಉತ್ತರಿಸಿದರು.

    ‘ಕಾಡಿನಲ್ಲೂ ಡಾ.ರಾಜ್‌ಗೆ ಪುನೀತ್‌ದ್ದೇ ಚಿಂತೆಯಾಗಿತ್ತು, ನಾನ್‌ ಸತ್ರೂ ಪರವಾಗಿಲ್ಲ, ಅವ್ನು ನಟ ಆಗ್ಬೇಕು ಅಂತ ಹೇಳ್ಕೊಂಡಿದ್ರು’

    ಬರ್ತ್‌ಡೇ ಪಾರ್ಟಿಯಲ್ಲಿ ನಡೆದಿದೆ ನಿಗೂಢ? ಪುನೀತ್‌ ಸಾವಿನ ರಹಸ್ಯ ಸಿಬಿಐ ತನಿಖೆಗೆ ವಹಿಸಲು ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts