More

    ಜಮೀನಿನ ಮೂಲ ಮಾಲೀಕರಿಗೆ ವಾರಸುದಾರರು ಇಲ್ಲದಿದ್ದರೆ ಅದು ಯಾರ ಸ್ವತ್ತಾಗುತ್ತದೆ? ಕಾನೂನು ಹೀಗೆ ಹೇಳಿದೆ ನೋಡಿ…

    ಜಮೀನಿನ ಮೂಲ ಮಾಲೀಕರಿಗೆ ವಾರಸುದಾರರು ಇಲ್ಲದಿದ್ದರೆ ಅದು ಯಾರ ಸ್ವತ್ತಾಗುತ್ತದೆ? ಕಾನೂನು ಹೀಗೆ ಹೇಳಿದೆ ನೋಡಿ...ಪ್ರಶ್ನೆ: ನಮ್ಮ ಅಜ್ಜನ ಕಾಲದಲ್ಲಿ ಖರೀದಿಸಿದ್ದ ಜಮೀನು (ನಲವತ್ತು ವರ್ಷಗಳ ಹಿಂದೆ) ರಿಜಿಸ್ಟರ್ ಆಗದೇ ಇದ್ದದ್ದರಿಂದ ಪಹಣಿ /ಆರ್.ಟಿ.ಸಿ ಬೇರೆಯವರ ಹೆಸರಲ್ಲಿ ಇದೆ. ಜಮೀನು ಕೊಂಡ ಬಗ್ಗೆ ನಮ್ಮಲ್ಲಿ ಯಾವ ದಾಖಲೆಗಳೂ ಇಲ್ಲ. ಮೂಲ ಮಾಲೀಕರಿಗೆ ಸಂಬಂಧಿಸಿದ ವಾರಸುದಾರರು ಯಾರೂ ಇಲ್ಲ. ಕಳೆದ ನಲವತ್ತು ವರ್ಷಗಳಿಂದ ನಾವೇ ಬೆಳೆ ಬೆಳೆಯುತ್ತಿದ್ದೇವೆ. ಪಹಣಿ ನಮ್ಮ ಹೆಸರಿಗೆ ಬರಲು ಏನು ಮಾಡಬೇಕು?

    ಉತ್ತರ: ಮೂಲ ದಾಖಲೆಗಳು ಇಲ್ಲದಿದ್ದರೆ ಬಹಳ ಕಷ್ಟವಾಗುತ್ತದೆ. ಯಾವುದೇ ಆಸ್ತಿ ನೂರು ರೂಪಾಯಿಗಿಂತ ಹೆಚ್ಚಿನ ಬೆಲೆ ಬಾಳುವುದಾದರೆ, ಅದನ್ನು ನೋಂದಾಯಿತ ಪತ್ರದ ಮೂಲಕವೇ ಕ್ರಯಕ್ಕೆ ತೆಗೆದುಕೊಳ್ಳಬೇಕು. ಮೂಲ ಮಾಲೀಕರ ವಾರಸುದಾರರು ಇದ್ದರೆ ಅವರನ್ನು ಪತ್ತೆ ಹಚ್ಚಿಸಿ ಅವರಿಂದ ಏನಾದರೂ ಪತ್ರ ಮಾಡಿಕೊಳ್ಳಲು ಪ್ರಯತ್ನಿಸಿ.

    ರಿಜಿಸ್ಟರ್ ಆಗದಿದ್ದರೂ ಬರಿಯ ಬರಹದ ಪತ್ರವಾದರೂ ಇದ್ದಿದ್ದರೆ ಒಂದು ಎಳೆಯಾದರೂ ಸಿಗುತ್ತಿತ್ತು. ನಿಮಗೆ ಇರುವ ಮತ್ತೊಂದು ದಾರಿ ಎಂದರೆ ಪಹಣಿ ಈಗ ಯಾರ ಹೆಸರಿಗೆ ಬರುತ್ತಿದೆಯೋ ಅವರ ವಿರುದ್ಧ ಮತ್ತು ಮೂಲ ಮಾಲೀಕರ ಯಾರಾದರೂ ಹತ್ತಿರದ ಸಂಬಂಧಿಯ ವಿರುದ್ಧ “ ಪ್ರತಿಕೂಲ ಸ್ವಾಧೀನದ” ಆಧಾರದ ಮೇಲೆ ಹಕ್ಕು ಘೋಷಣೆಯ ದಾವೆ ಹಾಕಿ. ಅಕ್ಕ ಪಕ್ಕದ ಜಮೀನಿನವರು, ಮತ್ತು ಇತರರು ಮೌಖಿಕ ಸಾಕ್ಷ್ಯವನ್ನು ನಿಮ್ಮ ಪರಕೊಟ್ಟರೆ , ನೀವು ದಾವೆಯಲ್ಲಿ ಗೆದ್ದರೆ ಆ ನಂತರ ರೆವೆನ್ಯೂ ಅಧಿಕಾರಿಗಳು ನಿಮ್ಮ ಹೆಸರಿಗೆ ರೆವೆನ್ಯೂ ದಾಖಲೆ /ಪಹಣಿ ಮಾಡಬಹುದು.

    ಹಾಗೆಯೇ ಮಾಡಲು ಸಾಧ್ಯವಿಲ್ಲ. ವಕೀಲರ ಹತ್ತಿರ ನೇರ ಸಲಹೆ ಪಡೆದು ಮುಂದುವರೆಸಿ. ನೀವು ಕಾನೂನಿನ ಹೊರಾಟದಲ್ಲಿ ಗೆಲ್ಲಲು ಕಷ್ಟವಿದೆ. ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳದೇ ದಾವೆ ಹಾಕ ಬೇಡಿ.

    (ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ದಾನ ಮಾಡಿಕೊಟ್ಟ ಆಸ್ತಿಯನ್ನು ಹಿಂದೆ ಪಡೆಯಬಹುದೇ?

    ವಿಲ್​ ಬರೆಯದೇ ಪಾಲಕರು ತೀರಿಕೊಂಡರೆ ಹೆಣ್ಣುಮಕ್ಕಳಿಗೆ ಆಸ್ತಿ ಸಿಗತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts