More

    ಪ್ರಿಯಾಂಕಾ ಗಾಂಧಿಯ ‘ಬಿಕಿನಿ’ ಹೇಳಿಕೆಗೆ ರೇಣುಕಾಚಾರ್ಯ ‘ಅತ್ಯಾಚಾರ’ದ ಉತ್ತರ- ಅವ್ರು ಬಿಡಿ ‘ಮುತ್ತುರಾಜ’ ಎಂದ ಡಿಕೆಶಿ!

    ನವದೆಹಲಿ: ಬಿಕಿನಿ, ಜೀನ್ಸ್ ಅಥವಾ ಹಿಜಾಬ್… ಬೇಕಾದ್ದನ್ನು ಧರಿಸುವುದು ಮಹಿಳೆಯರ ಹಕ್ಕು ಎಂದು ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್‌ ಮೂಲಕ ಹೇಳಿದ್ದರು. ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್‌ ಘರ್ಷಣೆಗೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿದ್ದ ಅವರು, ಮುಸ್ಲಿಂ ಮಹಿಳೆಯರ ಹಕ್ಕು ಕಸಿದುಕೊಳ್ಳುವುದು ಸರಿಯಲ್ಲ, ಬಟ್ಟೆ ಆಯ್ಕೆ ಅವರವರಿಗೆ ಬಿಟ್ಟಿದ್ದು ಎಂದಿದ್ದರು.

    ಇದಕ್ಕೆ ದೆಹಲಿಯಲ್ಲಿ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿಕಿನಿ ಕುರಿತು ಪ್ರಿಯಾಂಕಾ ಗಾಂಧಿ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ದೇಶದ ಕ್ಷಮೆ ಕೇಳಬೇಕು. ಮಹಿಳೆಯರ ಬಟ್ಟೆ ನೋಡಿ ಪುರುಷರು ಪ್ರಚೋದನೆಗೆ ಒಳಗಾಗುತ್ತಾರೆ. ಇದರಿಂದ ಉದ್ವೇಗಗೊಂಡು ಅತ್ಯಾಚಾರ ಮಾಡುತ್ತಾರೆ ಎಂದರು.

    ಪ್ರಿಯಾಂಕಾ ಗಾಂಧಿ ತಾಯಿ ಹೇಳಿ ಕೇಳಿ ಇಟಲಿಯವರು. ಅವರು ಯಾರನ್ನು ಮದುವೆಯಾಗಿದ್ದಾರೆ ಎನ್ನುವುದು ವೈಯಕ್ತಿಕ ವಿಷಯ. ಆ ಬಗ್ಗೆ ನಾನು ಹೇಳುವುದಿಲ್ಲ. ಆದರೆ ಮಹಿಳೆಯರ ಬಟ್ಟೆಯ ಬಗ್ಗೆ ಈ ರೀತಿ ಕೀಳು ಮಟ್ಟದ ಹೇಳಿಕೆ ನೀಡಿರುವುದು ಸರಿಯಲ್ಲ. ಮಹಿಳೆಯರನ್ನು ಗೌರವದಿಂದ ಕಾಣಬೇಕು. ಮಹಿಳೆಯರು ಮೈತುಂಬ ಬಟ್ಟೆ ಹಾಕಬೇಕು. ನಾನು ಮಹಿಳೆಯರನ್ನು ಅವಮಾನಿಸಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದರೇ ನಾನು ಕ್ಷಮೆ ಕೇಳುತ್ತೇನೆ’ ಎಂದು ಹೇಳಿದರು.

    ರೇಣುಕಾಚಾರ್ಯ ಅವರ ಈ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರೇಣುಕಾಚಾರ್ಯ ಬಿಡಿ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ‘ಮುತ್ತುರಾಜ’, ರೇಣುಕಾಚಾರ್ಯ ಪಕ್ಕದ ಮನೆಯ ರಾಜಕುಮಾರ್ ಅಲ್ಲ. ರೇಣುಕಾಚಾರ್ಯ ಬೇರೆ ರಾಜಕುಮಾರ್ ಎಂದು ಹೇಳಿದರು.

    VIDEO: ಹಿಜಾಬ್‌ ವಿವಾದ- ಗಲಾಟೆ ಮಾಡ್ಬೇಡಿ ಎಂದು ಶಿಕ್ಷಕಿ ಮನವಿ ಮಾಡಿದ್ರೆ, ಈ ವಿದ್ಯಾರ್ಥಿನಿ ಹೇಳಿದ್ದು…

    VIDEO: ಹಿಜಾಬ್‌ ವಿವಾದ- ಗಲಾಟೆ ಮಾಡ್ಬೇಡಿ ಎಂದು ಶಿಕ್ಷಕಿ ಮನವಿ ಮಾಡಿದ್ರೆ, ಈ ವಿದ್ಯಾರ್ಥಿನಿ ಹೇಳಿದ್ದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts