More

    ಕಳ್ಳತನ ಕಲಿಯಲು ಯೂಟ್ಯೂಬ್​ ನೋಡಿದ- ಚಿನ್ನದಂಗಡಿಗೆ ಕನ್ನ ಹಾಕಿ ಸಿಕ್ಕಿಬಿದ್ದ ಷೇರುದಾರ!

    ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಕೊಂಚ ಮುನ್ನೆಚ್ಚರಿಕೆ ವಹಿಸುವುದು ಒಳಿತು. ಇಲ್ಲೊಬ್ಬ ಖಾಸಗಿ ಕಂಪನಿ ಉದ್ಯೋಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ನಷ್ಟ ಹೊಂದಿ ಆ ನಷ್ಟವನ್ನು ಸರಿದೂಗಿಸಲು ಜುವೆಲ್ಲರ್ಸ್‌ನಲ್ಲಿ ಚಿನ್ನ ಕದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಕೆಂಪಾಪುರ ಅಗ್ರಹಾರದ ನಿವಾಸಿ ಸಂತೋಷ್ (23) ಜುವೆಲ್ಲರ್ಸ್‌ನಲ್ಲಿ ಚಿನ್ನ ಕದ್ದು ಪೊಲೀಸರ ಬಲೆಗೆ ಬಿದ್ದ ಆರೋಪಿಯಾಗಿದ್ದಾನೆ. ನಾರ್ದನ್ ಟ್ರಸ್ಟ್ ಫೈನ್ಯಾನ್ಸ್ ಸರ್ವೀಸ್ ಆೃಂಡ್ ಇನ್‌ವೆಸ್ಟ್‌ಮೆಂಟ್‌ನಲ್ಲಿ ನೌಕರನಾಗಿ ಕುಟುಂಬಸ್ಥರೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತಿದ್ದ. ಆದರೆ, ಬೇಗ ಶ್ರೀಮಂತನಾಗುವ ಕನಸು ಕಂಡು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಲಕ್ಷಾಂತರ ರೂ. ನಷ್ಟ ಹೊಂದಿದ್ದ.

    ಮನೆಯ ಜವಾಬ್ದಾರಿ ನಿರ್ವಹಿಸಬೇಕಾಗಿರುವುದರಿಂದ ಜೀವನೋಪಾಯಕ್ಕೆ ವೇತನ ಸಾಲುತ್ತಿರಲಿಲ್ಲ. ಇತ್ತ ಷೇರು ಮಾರುಕಟ್ಟೆಯಲ್ಲಿ ಹೊಂದಿರುವ ನಷ್ಟವನ್ನು ಸರಿದೂಗಿಸಲು ಜುವೆಲ್ಲರ್ಸ್‌ ಶಾಪ್‌ಗೆ ಗ್ರಾಹಕರ ಸೋಗಿನಲ್ಲಿ ಹೋಗಿ ಚಿನ್ನಾಭರಣ ಕದಿಯಲು ಮುಂದಾಗಿದ್ದ.

    ಆದರೆ, ಆತನಿಗೆ ಕಳ್ಳತನ ಮಾಡುವುದು ಹೇಗೆ ಎಂಬ ಬಗ್ಗೆ ಮಾಹಿತಿಯಿರಲಿಲ್ಲ. ಹೀಗಾಗಿ ಆಭರಣ ಮಳಿಗೆಗಳ ಸಿಬ್ಬಂದಿ ಗಮನ ಬೇರೆಟೆ ಸೆಳೆದು ಕಳ್ಳತನ ಮಾಡುವುದನ್ನು ಕಲಿಯಲು ಯೂಟ್ಯೂಬ್ ಮೊರೆ ಹೋಗಿದ್ದ. ಯೂಟ್ಯೂಬ್‌ನಲ್ಲಿ ಜುವೆಲ್ಲರ್ಸ್‌ಗೆ ಕನ್ನ ಹಾಕುವ ವಿಡಿಯೋ ನೋಡಿದ್ದ.

    ಇದೇ 21ರಂದು ಮಲ್ಲೇಶ್ವರದ ಜೋಯ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಹೋಗಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು 42.99 ಗ್ರಾಂನ ಬ್ರೇಸ್‌ಲೈಟ್‌ನ್ನು ಲಪಟಾಯಿಸಿದ್ದ.

    ಇತ್ತ ಚಿನ್ನ ಕಳವಾಗಿರುವ ಕುರಿತು ಜುವೆಲ್ಲರ್ಸ್‌ ಸಿಬ್ಬಂದಿ ಮಲ್ಲೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಚಿನ್ನಾಭರಣ ಮಳಿಗೆಯ ಸಿಸಿಕ್ಯಾಮರಾ ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

    ಪರೀಕ್ಷೆ ಇಲ್ಲದೇ ಮಕ್ಕಳು ಪಾಸಾ? ಕಾಲೇಜುಗಳಿಗೆ 15 ದಿನ ರಜೆನಾ? ‘ಸುತ್ತೋಲೆ’ಯ ಅಸಲಿಯತ್ತೇನು?

    ಮಹಿಳೆಯ ಕುಲವನ್ನೇ ಬದಲಿಸಿದ ಪಿಜ್ಜಾ ಕಂಪೆನಿ: ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕಾಗಿ ಬಂತು!

    ರಾಜ್ಯದಲ್ಲೂ ಮತ್ತೆ ಲಾಕ್​ಡೌನ್​ ಆಗತ್ತಾ? ಹಿಂಟ್​ ಕೊಟ್ಟ ಸಿಎಂ ಏನು ಎಚ್ಚರಿಕೆ ಕೊಟ್ಟಿದ್ದಾರೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts