More

    ನನ್ನ ಸಾವಿಗೆ ಅವರು ಪ್ರಾರ್ಥನೆ ಮಾಡಿದ್ದರು, ಕೇಳಿ ನನಗೆ ಬಹಳ ಖುಷಿಯಾಯಿತು ಎಂದ ಪ್ರಧಾನಿ ಮೋದಿ…

    ವಾರಣಾಸಿ: ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ಗೂಬೆ ಕುಳ್ಳರಿಸುವುದು, ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಇದೀಗ ರಾಜಕಾರಣಿಯೊಬ್ಬರ ಅದರಲ್ಲಿಯೂ ಪ್ರಧಾನಿಯೊಬ್ಬರ ಸಾವಿಗೆ ‍ಪ್ರಾರ್ಥನೆ ಮಾಡುವಂಥ ಮನಸ್ಸು ಕೂಡ ರಾಜಕಾರಣದಲ್ಲಿ ಇದೆ ಎಂಬ ವಿಷಯವನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಬಹಿರಂಗಪಡಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಅವರು ಮಾತನಾಡುತ್ತಿದ್ದಾಗ ಈ ವಿಷಯವನ್ನು ಪ್ರಸ್ತಾಪಿಸಿದರು. ಭಾರತೀಯ ರಾಜಕೀಯದಲ್ಲಿ ಜನರು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ ನಾನು ಕಾಶಿಯಲ್ಲಿ ಇದ್ದ ಸಂದರ್ಭದಲ್ಲಿ ನನ್ನ ಸಾವಿಗಾಗಿ ವಿರೋಧಿಗಳು ಪ್ರಾರ್ಥನೆ ಮಾಡಿದರು. ಇದರಿಂದ ನನಗೆ ಬೇಸರವಾಗಲಿಲ್ಲ, ಬದಲಿಗೆ ಖುಷಿಯೇ ಆಯಿತು ಎಂದಿದ್ದಾರೆ ಪ್ರಧಾನಿ.

    ತಮ್ಮ ಖುಷಿಗೆ ಕಾರಣವನ್ನೂ ನೀಡಿರುವ ಅವರು, ಅವರು ನನಗಾಗಿ ಸಾಯುವ ಪ್ರಾರ್ಥನೆ ಸಲ್ಲಿಸಿದ್ದ ನಾನು ಕಾಶಿಯಲ್ಲಿ ಇರುವಾಗ. ಇದರ ಅರ್ಥ ನಾನು ಸಾಯುವವರೆಗೂ ನಾನು ಕಾಶಿಯನ್ನು ಬಿಡುವುದಿಲ್ಲ ಅಥವಾ ಅದರ ಜನರು ನನ್ನನ್ನು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ತಮ್ಮ ವಿರುದ್ಧ ಯಾರು ಈ ರೀತಿಯ ಪ್ರಾರ್ಥನೆ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಯಾವ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೆ ಅವರು ಈ ರೀತಿ ಉಲ್ಲೇಖ ಮಾಡಿರುವುದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ. ವಾರಣಾಸಿಯಲ್ಲಿ ಅಧಿಕೃತ ಕಾರ್ಯಕ್ರಮಗಳಲ್ಲಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದ ಅಖಿಲೇಶ್ ಯಾದವ್, ಮೋದಿಯವರ ಕಾಶಿಯ ಯಾತ್ರೆಯನ್ನು ಉದ್ದೇಶಿಸಿ, “ಇದು ಒಳ್ಳೆಯದು. ಅವರು ಕೇವಲ ಒಂದು ತಿಂಗಳು ಅಲ್ಲ, ಆದರೆ ಎರಡು ಅಥವಾ ಮೂರು ತಿಂಗಳ ಕಾಲ ಅಲ್ಲಿ ಉಳಿಯಬಹುದು. ಅದು ಉಳಿಯಲು ಸರಿಯಾದ ಸ್ಥಳವಾಗಿದೆ. ಜನರು ತಮ್ಮ ಕೊನೆಯ ದಿನಗಳನ್ನು ಬನಾರಸ್‌ನಲ್ಲಿ (ವಾರಣಾಸಿ) ಕಳೆಯುತ್ತಾರೆ ’ ಎಂದು ಹೇಳಿದ್ದರು. ಇದರ ಕುರಿತಾಗಿಯೇ ಪ್ರಧಾನಿ ಮೋದಿ ಈಗ ಈ ರೀತಿ ತಿರುಗೇಟು ನೀಡಿದ್ದಾರೆ.

    ಇಂದು ವಾರಣಾಸಿಯಲ್ಲಿ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಪ್ರತಿಪಕ್ಷ ಸಮಾಜವಾದಿ ಪಕ್ಷವನ್ನು ಗುರಿಯಾಗಿಸಿ, ಅದರ ಆಡಳಿತದಲ್ಲಿ ಭಯೋತ್ಪಾದಕರು ಯಾವುದೇ ಭಯವಿಲ್ಲದೆ ಕಾರ್ಯನಿರ್ವಹಿಸಿದ್ದಾರೆ ಎಂದು ಆರೋಪಿಸಿದರು.

    ಕೊಲೆ ಮಾಡಿ ತಣ್ಣಗಿದ್ದ ಮಂಡ್ಯದ ಮಾಜಿ ಶಾಸಕನ ಪುತ್ರ ಅರೆಸ್ಟ್‌: ಸಿಪಿಐ ಜತೆ 10 ಲಕ್ಷ ರೂ. ಡೀಲ್‌ ಮಾಡಿದ್ರೂ ಸಿಕ್ಕಿಬಿದ್ದದ್ದೇ ರೋಚಕ!

    ಭಗ್ನಪ್ರೇಮಿಯೊಬ್ಬನ ಕಥೆ-ವ್ಯಥೆ: ವಿಷ ಸೇವಿಸಿ, ಇರಿದುಕೊಂಡರೂ ಬದುಕಿದ- ಕಾನೂನಿದ್ದರೂ ಐದು ವರ್ಷ ಜೈಲು ಪಾಲಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts