More

    VIDEO: ಅಮೆರಿಕ ಪ್ರವಾಸದಲ್ಲಿ ಪ್ರಧಾನಿಗೆ ಕರ್ನಾಟಕದ ನಂಟು- ಉಡುಪಿ ದಂಪತಿಯಿಂದ ಊಟೋಪಚಾರದ ಆತಿಥ್ಯ

    ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಇದೀಗ ವಾಪಸ್‌ ಭಾರತಕ್ಕೆ ಬಂದಿಳಿದಿದ್ದಾರೆ.

    ಆದರೆ ಕುತೂಹಲದ ಸಂಗತಿಯೆಂದರೆ ಅಮೆರಿಕದಲ್ಲಿ ಮೂರು ದಿನಗಳ ಕಾಲ ಊಟೋಪಚಾರ ಸಹಿತ ಆತಿಥ್ಯದ ನೇತೃತ್ವ ವಹಿಸಿದವರು ಉಡುಪಿ ಜಿಲ್ಲೆಯ ಕುಂದಾಪುರದ ಆಲೂರು ಮೂಲದ ಅನಿವಾಸಿ ಭಾರತೀಯ ಹೋಟೆಲ್ ಉದ್ಯಮಿ ಆನಂದ ಪೂಜಾರಿ.

    ಇಂಥದ್ದೊಂದು ಅದೃಷ್ಟ ಆನಂದ ಪೂಜಾರಿ ದಂಪತಿಯದ್ದು. ಇದೇ ಮೊದಲೇನಲ್ಲ. ಪ್ರಧಾನಿ ಮೋದಿಯವರು ಈ ಹಿಂದೆ ಅಮೆರಿಕಕ್ಕೆ ಹೋಗಿದ್ದಾಗಲೂ ಈ ದಂಪತಿ ಆತಿಥ್ಯ ನೀಡಿದ್ದುಂಟು. ಆನಂದ ಪೂಜಾರಿ ಮತ್ತು ಪತ್ನಿ ಸುಮಿತಾ ಯುಎಸ್ ನ ವಾಷಿಂಗ್ಟನ್ ಡಿಸಿಯಲ್ಲಿ ಕಳೆದ ಮೂರು ದಶಕಗಳಿಂದ ನೆಲೆಸಿದ್ದಾರೆ. ಅಲ್ಲಿ ಭವ್ಯ ವುಡ್ ಲ್ಯಾಂಡ್ಸ್ ಹೊಟೇಲ್ ನಡೆಸುತ್ತಿದ್ದಾರೆ. ಮೊನ್ನೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶವನ್ನು ಈ ದಂಪತಿ ಪಡೆದಿದ್ದಾರೆ.

    ಪ್ರಧಾನಿ ಮೋದಿಯವರು ಅಮೆರಿಕದಲ್ಲಿದ್ದರೂ ಭಾರತೀಯ ಶೈಲಿಯ ಊಟಕ್ಕೆ ಆದ್ಯತೆ ನೀಡುತ್ತಿದ್ದು, ದಕ್ಷಿಣ ಭಾರತೀಯ ಖಾದ್ಯಗಳಿಗೆ ಮಾರುಹೋಗಿದ್ದಾರೆ ಎನ್ನುತ್ತಾರೆ ಆನಂದ ಪೂಜಾರಿ ಅವರು. ಇಡ್ಲಿ, ವಡಾ, ಉಪ್ಪಿಟ್ಟು ಅವರಿಗೆ ಇಷ್ಟ. ದಿನಕ್ಕೆ ನಾಲ್ಕು ಬಾರಿಯಾದರೂ ಮಸಾಲಾ ಟೀ ಕುಡಿಯುತ್ತಾರೆ ಎನ್ನುತ್ತಾರೆ ಆನಂದ್‌ ದಂಪತಿ.

    ಮೂಲತಃ ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲ್ಲಂಗಡಿ ಮನೆಯ ನಿವಾಸಿ ಬಡಿಯ ಪೂಜಾರಿ ಹಾಗೂ ಗಿರಿಜಾ ದಂಪತಿಯ ಪುತ್ರರಾದ ಇವರು, ಅಮೆರಿಕದಲ್ಲಿ ನೆಲೆಸಿದ್ದರೂ ಊರಿಗೆ ಆಗಾಗ ಬರುತ್ತಿರುತ್ತಾರೆ.

    ಕುಪ್ಪೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಬಾಲಕ ತೇಜಸ್: ಕಣ್ಣೀರಲ್ಲಿ ಅಪ್ಪ-ಅಮ್ಮ

    ನಟನ ಒಳ ಉಡುಪು ನೋಡಲು ಹೀಗೆಲ್ಲಾ ಮಾಡ್ತಾರಾ ರಶ್ಮಿಕಾ? ಛೇ ಎಂದ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts