More

    ಎಫ್‌ಬಿನಲ್ಲಿ ಪರಿಚಯವಾದ ‘ಪಾದ್ರಿ’ ದುಬಾರಿ ಉಡುಗೊರೆ ಕೊಡುವೆ ಎಂದ- ನಂಬಿದವ 3.63 ಲಕ್ಷ ರೂ. ಟೋಪಿ ಹಾಕಿಸಿಕೊಂಡ

    ಬೆಂಗಳೂರು: ಫೇಸ್​ಬುಕ್​ನಲ್ಲಿ ಪಾದ್ರಿ ಸೋಗಿನಲ್ಲಿ ಪರಿಚಯನಾದ ಸೈಬರ್​ ಕಳ್ಳ, 60 ಸಾವಿರ ಡಾಲರ್​ ಉಡುಗೊರೆ ಕಳುಹಿಸಿರುವುದಾಗಿ ನಂಬಿಸಿ ಯುವಕನಿಗೆ 3.63 ಲಕ್ಷ ರೂ. ಪಡೆದು ವಂಚಿಸಿದ್ದಾನೆ.

    ವಿವೇಕನಗರದ ಡೇವಿಡ್​ ಸನ್ಸ್​ ವಂಚನೆಗೆ ಒಳಗಾದವ. ಕೆಲ ದಿನಗಳ ಹಿಂದೆ ಡೇವಿಡ್​, ಫೇಸ್​ಬುಕ್​ನಲ್ಲಿ ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದು, ಅಮೆರಿಕದಲ್ಲಿ ಪೀಠರ್​ ಜಾನ್​ ಚರ್ಚ್​ನಲ್ಲಿ ಪಾದ್ರಿ ಎಂದು ಸ್ನೇಹ ಬೆಳೆಸಿದ್ದಾನೆ. ಮೊಬೈಲ್​ ಸಂಭಾಷಣೆ ಶುರು ಮಾಡಿದ್ದು, ನಿನಗೆ 60 ಸಾವಿರ ಡಾಲರ್​ ಉಡುಗೊರೆ ಕಳುಹಿಸುವುದಾಗಿ ಪಾದ್ರಿ ಹೇಳಿದ್ದಾನೆ.

    ಅದನ್ನು ನಂಬಿದ ಡೇವಿಡ್​, ಮನೆ ವಿಳಾಸ ನೀಡಿದ್ದಾನೆ. ಕೆಲವೇ ದಿನಕ್ಕೆ ದೆಹಲಿ ವಿಮಾನ ನಿಲ್ದಾಣ ಅಧಿಕಾರಿ ಸೋಗಿನಲ್ಲಿ ಡೇವಿಡ್​ ಮೊಬೈಲ್​ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮ್ಮ ಹೆಸರಿಗೆ ದುಬಾರಿ ಗಿಫ್ಟ್‌​ ಬಂದಿದೆ. ತೆರಿಗೆ ಪಾವತಿ ಮಾಡಿದರೆ ನಿಮ್ಮ ವಿಳಾಸಕ್ಕೆ ಕೋರಿಯರ್​ ಕಳುಹಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ಡೇವಿಡ್​, ವಂಚಕರು ನೀಡಿದ ಬ್ಯಾಂಕ್​ ಖಾತೆಗೆ ಹಣ ಜಮೆ ಮಾಡಿದ್ದಾರೆ.

    ಇದಾದ ಮೇಲೆ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ಮತ್ತಷ್ಟು ಹಣ ಸುಲಿಗೆ ಮಾಡಿದ್ದಾನೆ. ಇದೇ ರೀತಿ 3.65 ಲಕ್ಷ ರೂ. ಅನ್ನು ಹಂತ ಹಂತವಾಗಿ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ. ಯಾವುದೇ ಕೊಡುಗೆ ಮನೆಗೆ ಬಾರದೆ ಇದ್ದಾಗ ನೊಂದ ಡೇವಿಡ್​, ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಕೇಂದ್ರ ವಿಭಾಗ ಸಿಇಎನ್​ ಠಾಣೆ ಪೊಲೀಸರು ತಿಳಿಸಿದ್ದಾರೆ.

    ದಂಪತಿ ಜಗಳ ಬಿಡಿಸಲು ಹೋಗಿ ಹೆಣವಾದ ಯುವಕ- ಆಸ್ಪತ್ರೆ ಬದಲು ಠಾಣೆಗೆ ಕರೆದೊಯ್ದ ಕುಟುಂಬಸ್ಥರು!

    ಅಂತಾರಾಷ್ಟ್ರೀಯ ವಿಮಾನ ‌ನಿಲ್ದಾಣದಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ- 150 ಹಾಸಿಗೆಗಳ ಲಭ್ಯ

    ಮಳೆಯಲ್ಲಿ ನೆನೆದು ಕೂಲ್‌ ಕೂಲ್‌ ಆದ ನಟಿ ದೀಪಿಕಾ ವಿಡಿಯೋ ನೋಡಿ ಗರಂ ಗರಂ ಆದ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts