More

    ಒಬಿಸಿ ಅಧಿಕಾರ ರಾಜ್ಯಗಳಿಗೆ: ರಾಜ್ಯಸಭೆಯಲ್ಲೂ ಸಿಕ್ತು ಅನುಮೋದನೆ- ಕಾಯ್ದೆಯಾಗುವ ಕಾಲ ಸನ್ನಿಹಿತ

    ನವದೆಹಲಿ: ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಜಾತಿಗಳನ್ನು ಸೇರಿಸುವ ರಾಜ್ಯಗಳ ಅಧಿಕಾರವನ್ನು ಮರುಸ್ಥಾಪಿಸುವ ಸಂವಿಧಾನ (127ನೇ ತಿದ್ದುಪಡಿ) ವಿಧೇಯಕ 2021 ಅನ್ನು ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ಯಾವುದೇ ರೀತಿಯ ವಿರೋಧ ವ್ಯಕ್ತವಾಗದೇ ಈ ವಿಧೇಯಕಕ್ಕೆ ಅನುಮೋದನೆ ದೊರೆತಿದೆ.

    ಈ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಸಿಕ್ಕ ತಕ್ಷಣ ಕಾನೂನಾಗಿ ಜಾರಿಗೆ ಬರಲಿದೆ. ಹೀಗೆ ಒಬಿಸಿ ಪಟ್ಟಿಗೆ ಜಾತಿಗಳನ್ನು ಸೇರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳು ಪಡೆಯಲು ಈ ಕಾನೂನು ಅನುವು ಮಾಡಿಕೊಡಲಿದೆ.

    ವಿಧೇಯಕದ ಪರ 385 ಮತಗಳು ಬಿದ್ದಿವೆ. ವಿಧೇಯಕದ ವಿರುದ್ಧ ಯಾವುದೇ ಮತಗಳು ಚಲಾವಣೆ ಆಗಿಲ್ಲ. ಈ ಬಿಲ್​ ಪಾಸ್​ ಆಗಿರುವುದರಿಂದ ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್​, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಗುಜರಾತ್​ನಲ್ಲಿ ತಮ್ಮನ್ನು ಒಬಿಸಿ ಲಿಸ್ಟ್​​ಗೆ ಸೇರಿಸಬೇಕೆಂಬ ಆಗ್ರಹಗಕ್ಕೆ ಅಂತ್ಯ ಸಿಗುವ ಸಾಧ್ಯತೆ ಇದೆ.

    ಏನು ತಿದ್ದುಪಡಿ?: ಸಂವಿಧಾನದ 127ನೇ ತಿದ್ದುಪಡಿ ವಿಧೇಯಕ ಅಂಗೀಕಾರವಾದರೆ ಸಂವಿಧಾನದ ಅನುಚ್ಛೇದ 342ಎ 1 ಮತ್ತು 2ನೇ ನಿಯಮ ತಿದ್ದುಪಡಿ ಆಗಲಿದೆ. ಅದೇ ರೀತಿ, ಮೂರನೇ ನಿಯಮ ಸೇರ್ಪಡೆಯಾಗಲಿದೆ. ಇದಲ್ಲದೆ, ಅನುಚ್ಛೇದ 366 (26ಸಿ), 338ಬಿ (9)ರಲ್ಲೂ ತಿದ್ದುಪಡಿ ಆಗಲಿದೆ. ಸುಪ್ರೀಂಕೋರ್ಟ್ ತೀರ್ಪಿಗೆ ಪೂರಕವಾಗಿ ಒಬಿಸಿಯ ‘ರಾಜ್ಯ ಪಟ್ಟಿ’ಯ ನಿರ್ವಹಣೆಗೆ ಸಂಬಂಧಿಸಿದ ಸ್ಪಷ್ಟ ನಿರ್ದೇಶನ ಇದರಲ್ಲಿ ಇರಲಿದೆ. ಅನುಚ್ಛೇದ 366 (26ಸಿ) ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ವ್ಯಾಖ್ಯೆಯನ್ನು ನೀಡುತ್ತದೆ. ಇದರ ಸಂಪೂರ್ಣ ಅಧಿಕಾರ ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಬರಲಿದೆ.

    ಉದ್ಯೋಗ ಮತ್ತು ಪ್ರವೇಶಾತಿಗಳಲ್ಲಿ ಸಾಮಾಜಿಕವಾಗಿ-ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಸಮುದಾಯಗಳಿಗೆ ಮೀಸಲು ಒದಗಿಸುವ ರಾಜ್ಯಗಳ ಅಧಿಕಾರ 102ನೇ ಸಂವಿಧಾನ ತಿದ್ದುಪಡಿ ಮಸೂದೆ 2018ರಲ್ಲಿ ಮಂಡನೆಯಾದಾಗ ರದ್ದಾಗಿದೆ. ಈ ಸಂಬಂಧ ಮರುಪರಿಶೀಲಿಸಬೇಕೆಂಬ ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನೆಗಾಗಿ ಕೇಂದ್ರ ಸರ್ಕಾರ ಮೇ 5ರಂದು ಅರ್ಜಿ ಸಲ್ಲಿಸಿತ್ತು. ಆದರೆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

    ಕಲ್ಲಿದ್ದಲು ಸಂಸ್ಥೆಯಲ್ಲಿ ಮ್ಯಾನೇಜಿಂಗ್​ ಟ್ರೇನಿ ಹುದ್ದೆ- 588 ಪೋಸ್ಟ್‌, 1.60 ಲಕ್ಷ ರೂ.ವರೆಗೆ ಸಂಬಳ

    ರೋಹಿಣಿ ಸಿಂಧೂರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ: ಅಮಾನತಿಗೆ ಕೋರಿ ಕೇಸ್‌ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts