More

    ಹೆಂಡತಿಗೆ ಬೇರೆ ಸಂಬಂಧ ಇದ್ದಾಗ ಡಿವೋರ್ಸ್​ ಕೊಟ್ರೆ ಜೀವನಾಂಶ ಕೊಡಬೇಕಾಗತ್ತಾ?

    ಹೆಂಡತಿಗೆ ಬೇರೆ ಸಂಬಂಧ ಇದ್ದಾಗ ಡಿವೋರ್ಸ್​ ಕೊಟ್ರೆ ಜೀವನಾಂಶ ಕೊಡಬೇಕಾಗತ್ತಾ?

    ಪ್ರಶ್ನೆ: ನನ್ನ ಅಣ್ಣನ ಮದುವೆಯಾಗಿ ಹತ್ತು ವರ್ಷಕ್ಕೂ ಮೇಲಾಗಿದೆ. ಅವರಿಗೆ ಇಬ್ಬರು ಮಕ್ಕಳು. ಅವರ ಮದುವೆ ದೇವಸ್ಥಾನದಲ್ಲಿ ಆಗಿತ್ತು. ನಮ್ಮ ಅಣ್ಣನ ಹೆಂಡತಿಗೆ ಬೇರೆ ವ್ಯಕ್ತಿಯ ಜತೆ ಸಂಬಂಧ ಇರುವುದು ತಿಳಿದು ಬಂದಾಗ ನಮ್ಮ ಅಣ್ಣ ವಿಚಾರಿಸಿದಾಗ , ಆಕೆಗೆ ಮೊದಲೇ ಬೇರೆಯವರ ಜತೆ ಮದುವೆ ಆಗಿದ್ದು ಅದನ್ನು ಮುಚ್ಚಿಟ್ಟು ನನ್ನ ಅಣ್ಣನನ್ನು ಮದುವೆಯಾಗಿದ್ದು ತಿಳಿದು ಬಂದಿರುತ್ತದೆ. ಆಕೆಯ ಮೊದಲ ಮದುವೆ ರಿಜಿಸ್ಟರ್ ಸಹ ಆಗಿರುತ್ತದೆ. ಆಕೆ ತನ್ನ ಮೊದಲ ಪತಿಯಿಂದ ವಿಚ್ಛೇದನವನ್ನೂ ಪಡೆದಿಲ್ಲ.

    ಈಗ ನನ್ನ ಅಣ್ಣ ಮತ್ತು ಆಕೆ ಒಂದು ವರ್ಷದಿಂದ ಬೇರೆಯಾಗಿ ವಾಸಿಸುತ್ತಿದ್ದಾರೆ. ಆಕೆಗೆ ತನ್ನ ಮೊದಲ ಪತಿಯ ಜತೆ ಈಗಲೂ ಸಂಬಂಧವಿದೆ. ಈಗ ನನ್ನ ಅಣ್ಣ ವಿಚ್ಛೇದನ ಪಡೆಯಲು ಏನು ಮಾಡಬೇಕು?.ನನ್ನ ಅಣ್ಣನ ಹೆಂಡತಿ ಕೆಲಸಕ್ಕೆ ಹೋಗುತ್ತಿರುವುದರಿಂದ ಆಕೆಗೆ ಜೀವನಾಂಶ ಕೊಡಬೇಕೇ? ನನ್ನ ಅಣ್ಣನಿಗೆ ವಿಚ್ಛೇದನ ಸಿಗುತ್ತದೆಯೇ?

    ಉತ್ತರ: ನಿಮ್ಮ ಅಣ್ಣನ ಪರಿಸ್ಥಿತಿ ಹಲವಾರು ಕಾನುನು ತೊಡಕುಗಳಿಂದ ಕೂಡಿದೆ. ನಿಮ್ಮ ಅಣ್ಣನ ಹೆಂಡತಿ ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆಯದೆ ನಿಮ್ಮ ಅಣ್ಣನನ್ನು ಮದುವೆ ಆಗಿರುವುದರಿಂದ ಆ ವಿವಾಹ ಕಾನೂನು ರೀತ್ಯಾ ಸಿಂಧುವಾದ ವಿವಾಹವಲ್ಲ. ಹೀಗಾಗಿ ವಿಚ್ಛೇದನ ಪಡೆಯಲು ಕ್ರಮ ತೆಗೆದುಕೊಳ್ಳುವುದು ಅಷ್ಟು ಅರ್ಥ ಪೂರ್ಣವಾಗಲಾರದು. ಬದಲಿಗೆ, ನಿಮ್ಮ ಅಣ್ಣ ತನ್ನ ಮತ್ತು ಆಕೆಯ ಮದುವೆ ಸಿಂಧುವಾದುದಲ್ಲ ಎನ್ನುವ ಹಕ್ಕು ಘೋಷಣೆಯ ದಾವೆಯನ್ನು ಸಲ್ಲಿಸುವುದು ಉತ್ತಮ.

    ದಾವೆ ಸಲ್ಲಿಸುವುದಕ್ಕೆ ಮೊದಲಿಗೆ ವಕೀಲರನ್ನು ಭೇಟಿ ಮಾಡಿ ಎಲ್ಲ ವಿವರಗಳನ್ನೂ ಕೊಟ್ಟು ತಮಗೆ ಆಗಿರುವ ಮೋಸದ ಅರಿವಾದಾಗಿಲಿನಿಂದ ತಾವು ಸಲ್ಲಿಸುತ್ತಿರುವ ದಾವೆ ಕಾಲಮಿತಿಯ ಒಳಗೆ ಬರುತ್ತದೆ ಎನ್ನುವುದನ್ನು ಖ್ರಾತಿಪಡಿಸಿಕೊಂಡು ನಂತರ ದಾವೆ ಸಲ್ಲಿಸುವುದು ಒಳ್ಳೆಯದು.
    ನಿಮ್ಮ ಅಣ್ಣನ ಪತ್ನಿಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಚೈತನ್ಯ ಇರುವುದರಿಂದ ಮತ್ತು ಆಕೆಗೆ ಬೇರೆಯ ಪತಿ ಇರುವುದರಿಂದ, ನಿಮ್ಮ ಅಣ್ಣ ಆಕೆಗೆ ಜೀವನಾಂಶ ಕೊಡುವ ಸಂಭವ ಉಂಟಾಗುವುದಿಲ್ಲ. ಆದರೆ ಎಂದಿಗೇ ಆಗಲೀ, ನಿಮ್ಮ ಅಣ್ಣನ ಮಕ್ಕಳ ಪಾಲನೆ ಪೋಷಣೆಯ ಜವಾಬ್ದಾರಿ ನಿಮ್ಮ ಅಣ್ಣನ ಮೇಲೆ ಇದ್ದೇ ಇರುತ್ತದೆ.

    ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ದಂಪತಿ ಇಬ್ಬರೂ ಒಪ್ಪಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ ವಕೀಲರು ಬೇಕೇ ಬೇಕಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts