More

    ಹಿಂದೂಗಳಿಂದ ಮೀನು ಖರೀದಿಸಬೇಡಿ ಎಂದಾಗ ಎಲ್ಲಿ ಹೋಗಿತ್ತು ಈ ಸಾಮರಸ್ಯ? ಗರಂ ಆಗಿದೆ ಜಾಲತಾಣ

    ಬೆಂಗಳೂರು: ಕರಾವಳಿ ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅನುಮತಿ ನೀಡದೇ ಬಹಿಷ್ಕಾರ ಹಾಕುವ ಪ್ರಕ್ರಿಯೆ ನಡೆಯುತ್ತಿದ್ದರೆ, ಇದಕ್ಕೆ ಮುಸ್ಲಿಂ ಸಂಘಟನೆಗಳು, ಕಾಂಗ್ರೆಸ್​ ಮುಖಂಡರು ಸೇರಿದಂತೆ ಕೆಲವರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಷಯ ಜಾಲತಾಣದಲ್ಲಿಯೂ ಭಾರಿ ಚರ್ಚೆ ಶುರುವಾಗಿದ್ದು, ಹಲವಾರು ನೆಟ್ಟಿಗರು ಕೆಲ ತಿಂಗಳ ಹಿಂದೆ ಉಡುಪಿಯ ಬೈಂದೂರಿನಲ್ಲಿ ನಡೆದಿರುವ ಘಟನೆಯನ್ನು ನೆನಪಿಸಿಕೊಂಡು ಕಿಡಿ ಕಾರುತ್ತಿದ್ದಾರೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಗೋಹತ್ಯೆ ವಿಚಾರವಾಗಿ ಕಳೆದ ಅಕ್ಟೋಬರ್​ನಲ್ಲಿ ಕೆಲವು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದರಲ್ಲಿ ಹಲವು ಮೀನುಗಾರರೂ ಭಾಗಿಯಾಗಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮುಸ್ಲಿಂ ಮುಖಂಡರು ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಹಿಂದೂ ಮೀನುಗಾರರಿಂದ ಮೀನು ಖರೀದಿಸುವುದನ್ನು ಸ್ಥಗಿತಗೊಳಿಸುವಂತೆ ಕರೆ ಕೊಟ್ಟಿದ್ದರು. ಮಾತ್ರವಲ್ಲದೇ ಹಿಂದೂಗಳಿಂದ ಮೀನನ್ನೂ ಖರೀದಿಸುತ್ತಿರಲಿಲ್ಲ.

    ಇದನ್ನು ಜಾಲತಾಣದಲ್ಲಿ ನೆನಪಿಸುತ್ತಿರುವ ನೆಟ್ಟಿಗರು, ಆಗ ಯಾವ ಮುಖಂಡರೂ ವಿರೋಧ ವ್ಯಕ್ತಪಡಿಸಲಿಲ್ಲ, ಈಗೇಕೆ ಹಿಂದೂಗಳು ನಿಷೇಧ ಹೇರಿದರೆ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಎಂದು ಪ್ರಶ್ನಿಸುತ್ತಿದ್ದಾರೆ. ಹಿಂದೂ-ಮುಸ್ಲಿಮರು ಸಹೋದರರು, ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಈಗ ಮನಬಂದಂತೆ ಹೇಳಿಕೆ ನೀಡುತ್ತಿರುವವರು ಆಗ ಹಿಂದೂ ಮೀನುಗಾರರು ವ್ಯಾಪಾರವಿಲ್ಲದೇ ದುಃಖಿಸುತ್ತಿದ್ದರೂ ಅವರ ನೆರವಿಗೆ ಏಕೆ ಬರಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

    ಜಾತ್ರೆಗಳಲ್ಲಿ ಹಿಂದೂ ವ್ಯಾಪಾರಸ್ಥರಿಗೆ ಮಾತ್ರ ಅವಕಾಶ: ಹಿಜಾಬ್‌ ಪ್ರತಿಭಟನೆಯಲ್ಲಿ ನಾವಿಲ್ಲ ಎಂದು ಕಣ್ಣೀರು ಹಾಕ್ತಿರೋ ವ್ಯಾಪಾರಸ್ಥರು

    ಮತಾಂತರಕ್ಕೆ ಒಪ್ಪದ ಯುವತಿಯನ್ನು ನಡುರಸ್ತೆಯಲ್ಲಿಯೇ ಮನಬಂದಂತೆ ಗುಂಡು ಹಾರಿಸಿ ಬರ್ಬರ ಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts