More

    ರಾಜ್ಯದಲ್ಲೂ ಆತಂಕ ಸೃಷ್ಟಿಸಿರುವ ಒಮಿಕ್ರೋನ್‌: ಪ್ರಯೋಗಾಲಯಕ್ಕೆ ಮಾದರಿ ರವಾನೆ- ಸಭೆಯಲ್ಲಿ ಚರ್ಚೆ

    ಬೆಂಗಳೂರು: ಕರೊನಾ ವೈರಾಣುವಿನ ‘ ಒಮಿಕ್ರೋನ್’ ಹೊಸ ತಳಿ ಪತ್ತೆ, ಸೋಂಕಿತರ ಸಂಖ್ಯೆ 400ಕ್ಕೆ ಏರಿಕೆ ಹಾಗೂ ಕೇರಳದಲ್ಲಿ ಸೋಂಕಿನ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮಹತ್ವದ ಸಭೆ ನಡೆಯಲಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಈ ನಿರ್ಧಾರ ತೆಗೆದುಕೊಂಡಿದ್ದು, ಸಚಿವರು, ತಾಂತ್ರಿಕ ತಜ್ಞರ ಸಲಹಾ ಸಮಿತಿ ಹಾಗೂ ಅಧಿಕಾರಿಗಳ ಜತೆಗೆ ನಿಯಂತ್ರಣ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿ ತೀರ್ಮಾನಿಸುವರು.

    ಸಿಎಂ ಬೊಮ್ಮಾಯಿ‌ ಸುದ್ದಿಗಾರರಿಗೆ ಈ ಕುರಿತು ಪ್ರತಿಕ್ರಿಯಿಸಿ, ಧಾರವಾಡ ಹಾಗೂ ಬೆಂಗಳೂರು ಗ್ರಾಮಾಂತರ ಕಾಲೇಜು ಹಾಸ್ಟೆಲ್ ಗಳಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕು ಪ್ರಕರಣಗಳು ಪತ್ತೆ ಮಾಹಿತಿ ಲಭ್ಯವಾಗಿದ್ದು, ಅಗತ್ಯ ಕ್ರಮವಹಿಸಲಾಗಿದೆ. ವೈರಾಣು ಸ್ವರೂಪವನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಾಲಯಕ್ಕೆ ಮಾದರಿ ರವಾನೆಯಾಗಿದೆ.

    ನಾಲ್ಕು ದೇಶಗಳಲ್ಲಿ ರೂಪಾಂತರಿ ವೈರಾಣು ಪತ್ತೆಯಾಗಿರುವ ಕಾರಣ ಇದರ ತೀವ್ರತೆ, ಹರಡುವಿಕೆ ವೇಗ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

    ಮತ್ತೆ ಕೋಟ್ಯಧೀಶನಾದ ಮಲೈ ಮಹದೇಶ್ವರ: ಚಿನ್ನ, ಬೆಳ್ಳಿ, ಕಾಂಚಾಣ ಝಣಝಣ…ತಡರಾತ್ರಿಯವರೆಗೂ ಎಣಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts