More

    ಬೈಕ್‌ನಲ್ಲಿ ಚಿಕ್ಕಮಕ್ಕಳನ್ನು ಕರೆದುಕೊಂಡು ಹೋಗ್ತೀರಾ? ಹಾಗಿದ್ರೆ ಕೇಂದ್ರದ ಹೊಸ ನಿಯಮವನ್ನೊಮ್ಮೆ ನೋಡಿಬಿಡಿ…

    ನವದೆಹಲಿ: ಮಕ್ಕಳನ್ನು ಬೈಕಿನಲ್ಲಿ ಕುಳ್ಳರಿಸಿಕೊಂಡು ಹೋಗುವಿರಾದರೆ ಇನ್ನು ಮುಂದೆ ಕಡ್ಡಾಯವಾಗಿ ಹೊಸ ನಿಯಮವನ್ನು ಅಳವಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ಈ ನಿಯಮವನ್ನು ಜಾರಿಗೊಳಿಸಿದೆ. ಸದ್ಯ ಇದು ಕರಡು ನಿಯಮವಾಗಿದ್ದು, ಶೀಘ್ರದಲ್ಲಿ ಅಂತಿಮಗೊಳ್ಳಲಿದೆ.

    ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಹೊಸ ಕರಡು ನಿಯಮದ ಕುರಿತು ವಿವರಣೆ ನೀಡಿದೆ. ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಲ್ಕು ವರ್ಷದೊಳಗಿನ ಮಕ್ಕಳನ್ನು ಬೈಕ್‌ನಲ್ಲಿ ಕುಳ್ಳರಿಸಿಕೊಂಡು ಹೋಗುವುದಿದ್ದರೆ ಈ ಸುರಕ್ಷತಾ ಮಾರ್ಗಸೂಚಿಯನ್ನು ಅನುಸರಿಸಬೇಕಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 2019ರಲ್ಲಿ 11,168 ಮಕ್ಕಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದರ ಅರ್ಥ 31 ಮಕ್ಕಳು ಪ್ರತಿ ದಿನ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಹೊಸ ನಿಯಮ ಜಾರಿಗೆ ಸರ್ಕಾರ ಚಿಂತಿಸಿದೆ.

    ಅದೇನೆಂದರೆ ಮಕ್ಕಳು ನಾಲ್ಕು ವರ್ಷಕ್ಕಿಂತ ಕಡಿಮೆ ಇದ್ದರೆ ಮೋಟಾರು ಸೈಕಲ್ ವೇಗವು 40 ಕಿ.ಮೀಗಿಂತ ಹೆಚ್ಚಿರಬಾರದು. ವಾಹನ ಸವಾರ ಆ ಮಗುವಿನ ಜತೆ ಸುರಕ್ಷತಾ ಪಟ್ಟಿಯನ್ನು ಅಳವಡಿಸಿಕೊಂಡಿರಬೇಕು. ಅಂದರೆ, ಚಾಲಕ ಸೊಂಟದ ಬೆಲ್ಟ್ ಧರಿಸಿರಬೇಕು. ಮಗುವನ್ನು ಬೈಕ್ ಸವಾರನ ಜತೆ ಈ ಬೆಲ್ಟ್‌ ಮೂಲಕ ಕಟ್ಟಿಕೊಂಡಿರಬೇಕು. ಸೊಂಟಪಟ್ಟಿ ಹಾಗೂ ಭುಜಕ್ಕೆ ಜೋಡಿಸುವ ಎರಡು ಪಟ್ಟಿಗಳನ್ನು ಇದು ಹೊಂದಿರಬೇಕು. ಈ ಸುರಕ್ಷತಾ ಸಾಧನದಿಂದ ಮಗುವಿನ ದೇಹ ಬೈಕ್ ಸವಾರನ ಜತೆ ಭದ್ರವಾಗಿ ಅಂಟಿಕೊಳ್ಳಬೇಕು. ಮಗು ಕೈಬಿಟ್ಟರೂ, ನಿದ್ರಿಸಿದರೂ ಬೈಕ್ ಸವಾರನ ಬೆನ್ನಿಗೆ ಹೊಂದಿಕೊಂಡು ಭದ್ರವಾಗಿರಬೇಕು.

    ರೈಡಿಂಗ್ ಗೇರ್ ಅಂದರೆ ವಯಸ್ಕರು ಹಾಕಿಕೊಳ್ಳುವ ನೀ ಪ್ಯಾಡ್ ಸೇರಿದಂತೆ ಮಕ್ಕಳ ಸುರಕ್ಷತಾ ಸಾಧನಗಳು ಇರಬೇಕು. 9 ತಿಂಗಳಿಂದ 4 ವರ್ಷದೊಳಗಿನ ಮಕ್ಕಳನ್ನು ಕೂರಿಸಿಕೊಂಡು ಹೋಗುವುದಾದರೆ ಮಕ್ಕಳು ಹೆಲ್ಮೆಟ್ ಧರಿಸಬೇಕು. ಈ ಹೆಲ್ಮೆಟ್ ASTM 1447 ಅಥವಾ ಯುರೋಪಿಯನ್ (CEN) BS EN 1080/BS EN 1078 ಸ್ಟಾಂಡರ್ಡ್ ಹೆಲ್ಮೆಟ್ ಆಗಿರಬೇಕು.

    ಸದ್ಯ ಇದು ಕರಡು ನಿಯಮವಾಗಿದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಡಿದ್ದು, ಯಾವುದಾದರೂ ಸಲಹೆ, ಸೂಚನೆಗಳು, ಆಕ್ಷೇಪಣೆಗಳು ಇದ್ದರೆ ತಿಳಿಸುವಂತೆ ಹೇಳಿದ್ದಾರೆ. ಇವುಗಳನ್ನು ಪರಿಗಣನೆಗೆ ತೆಗೆದುಕೊಂಡು ಕಡ್ಡಾಯ ನಿಯಮ ಜಾರಿಗೊಳಿಸಲಾಗುವುದು.

    ಉದ್ಯೋಗ ಪಡೆಯಲು ಲಕ್ಷಲಕ್ಷ ಲಂಚ ಕೊಡ್ತೀರಾ? ನೇಮಕಾತಿ ಪತ್ರ ಹಿಡಿದು ಹೋದವರಿಗೆ ಏನ್‌ ಗತಿಯಾಯ್ತು ನೋಡಿ…

    ಕಳ್ಳತನ ಮಾಡಲು ಬೆತ್ತಲಾಗಿ ಹೋಗ್ತಿದ್ದ, ಹೊರಗೆ ಹೆಂಡ್ತಿ ಕಾಯ್ತಿದ್ಲು! ಬಾಗಲಕೋಟೆ ಖತರ್ನಾಕ್‌ ದಂಪತಿ ಅರೆಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts