More

    ಪಾಸಾಗಲೇಬೇಕು ಎಂದು ಒತ್ತಡ ಹಾಕಿ, ಈಗ ಮಗನ ಶವದ ಮುಂದೆ ಗೋಳೋ ಎನ್ನುತ್ತಿದ್ದಾರೆ ಹೆತ್ತವರು!

    ಚೆನ್ನೈ : ಪರೀಕ್ಷೆಗೆ ಸರ್ವಸ್ವ ಅಲ್ಲ, ಅದರಾಚೆಯೂ ಜೀವನದಲ್ಲಿ ಸಾಧಿಸಬೇಕಾದದ್ದು ಬಹಳಷ್ಟು ಇದೆ. ಇಂದು ದೊಡ್ಡ ದೊಡ್ಡ ದೈತ್ಯ ಕಂಪೆನಿ ಹುಟ್ಟುಹಾಕಿದವರ ಪೈಕಿ ಹೆಚ್ಚಿನವರು ಮೊದಲಿಗೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿಯೇ ಮುಂದೆ ಬಂದವರು… ಹೀಗೆ ಯಾರೇ ಏನೇ ಹೇಳಿದರೂ ಹೆಚ್ಚಿನ ಪಾಲಕರಿಗೆ ಇದು ತಲೆಯೊಳಕ್ಕೆ ಹೋಗುತ್ತಿಲ್ಲ. ಇದೇ ಕಾರಣಕ್ಕೆ ಪ್ರತಿಬಾರಿಯೂ ಪರೀಕ್ಷೆಯ ಭಯದಲ್ಲಿ ಅಥವಾ ಫಲಿತಾಂಶ ಬಂದ ಮೇಲೆ ಸಾಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.

    ಅಂಥದ್ದೇ ಒಂದು ದುರಂತ ತಮಿಳುನಾಡಿನ ಸಲೆಮ್ ಎಂಬಲ್ಲಿ ನಡೆದಿದೆ. ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್‌) ತಯಾರಿ ನಡೆಸಿದ್ದ ವಿದ್ಯಾರ್ಥಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ನಡೆಯುತ್ತಿದ್ದ ಪರೀಕ್ಷೆಗೆ ಈತ ಹಾಜರು ಆಗಬೇಕಿತ್ತು. ಆದರೆ ಪರೀಕ್ಷೆಯ ಭಯದಿಂದ ಧನುಷ್‌ ಎಂಬ 19 ವರ್ಷದ ವಿದ್ಯಾರ್ಥಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾನೆ.

    ಅಷ್ಟಕ್ಕೂ ಅವನಿಗೆ ಈ ಭಯಕ್ಕೆ ಕಾರಣ ಹಿಂದೆ ಎರಡು ಬಾರಿ ಪರೀಕ್ಷೆಯಲ್ಲಿ ಈತ ಫೇಲಾಗಿದ್ದ. ಆದ್ದರಿಂದ ಈ ಬಾರಿಯಾದರೂ ಪರೀಕ್ಷೆಯಲ್ಲಿ ಪಾಸ್‌ ಆಗಲೇಬೇಕು ಎಂಬ ಪಾಲಕರ ಒತ್ತಡ ಹೆಚ್ಚಾಗಿತ್ತು ಎನ್ನಲಾಗಿದೆ. ಆದರೆ ಈ ಬಾರಿಯೂ ತಾನು ಫೇಲಾಗಿಬಿಟ್ಟರೆ ಗತಿಯೇನು ಎಂದು ಭವಿಷ್ಯವನ್ನು ನೆನೆದುಕೊಂಡೇ ಈತ ಸಾವಿನ ಹಾದಿ ಹಿಡಿದಿದ್ದಾನೆ

    ಯಾವುದೇ ಡೆತ್ ನೋಟ್ ದೊರೆತಿಲ್ಲ. ಆದರೆ ಆತ ಮಾನಸಿಕ ಒತ್ತಡದಲ್ಲಿದ್ದ ಎಂದು ಪಾಲಕರು ಒಪ್ಪಿಕೊಂಡಿದ್ದಾರೆ. ಮಗನಿಗೆ ಈ ರೀತಿ ಒತ್ತಡ ಹಾಕಿರುವುದಕ್ಕೆ ರೋಧಿಸುತ್ತಿರುವ ಪಾಲಕರು ಬಾರದ ಲೋಕಕ್ಕೆ ಹೋಗಿರುವ ಮಗನ ಶವದ ಮುಂದೆ ಕುಳಿತು ಈಗ ಕಣ್ಣೀರು ಸುರಿಸಿ ಪಶ್ಚಾತ್ತಾಪದ ಬೇಗೆಯಿಂದ ಬೇಯುತ್ತಿದ್ದಾರೆ. ಫೇಲಾದರೂ ಪರವಾಗಿರಲಿಲ್ಲ, ನಿನ್ನನ್ನು ಕಳೆದುಕೊಂಡು ಹೇಗೆ ಜೀವಿಸುವುದು ಎಂದು ಕಣ್ಣೀರು ಸುರಿಸುತ್ತಿದ್ದಾರೆ.

    ‘25 ಯುವಕರ ಜತೆ ಸಂಬಂಧ ಹೊಂದಿದ್ದಾಳೆ ನನ್ ಪತ್ನಿ; ಆದ್ರೂ ಅವಳು ಬೇಕು, ಪ್ಲೀಸ್‌ ಹುಡುಕಿಕೊಡಿ’

    VIDEO: ಗಣೇಶನ ಎದುರು ನರ್ತಿಸುತ್ತಲೇ ಕುಸಿದುಬಿದ್ದು ಮೃತಪಟ್ಟ ಯುವಕ- ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts