More

    ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ: ಪರಿಶೀಲನೆಗೆ ಸಿಎಂ ಭರವಸೆ

    ಬೆಂಗಳೂರು: ಈಡಿಗ ಮತ್ತು ಆ ಸಮುದಾಯದ ಉಪ ಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಬ್ರಹ್ಮಶ್ರೀ‌ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ, 500 ಕೋಟಿ ರೂ ಮೀಸಲಿಡಬೇಕೆಂಬ ಬೇಡಿಕೆ ಪರಿಶೀಲಿಸುವುದಾಗಿ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಭರವಸೆ ನೀಡಿದ್ದಾರೆ.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ‌ ಅವರಿಗೆ ರಾಜ್ಯ ಈಡಿಗ, ಬಿಲ್ಲವ, ನಾಮದಾರಿ ಹಾಗೂ 26 ಉಪ ಪಂಗಡಗಳ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ನೇತೃತ್ವದ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿತು.

    ನಂತರ ಸುದ್ದಿಗಾರರ ಜತೆಗೆ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈಡಿಗ, ಬಿಲ್ಲವ, ನಾಮದಾರಿ ಸೇರಿದಂತೆ 26 ಉಪ ಪಂಗಡಗಳಿಗೆ ಅನುಕೂಲ ಮಾಡಿಕೊಡುವ ವಿಶ್ವಾಸವಿದೆ ಎಂದು ಹೇಳಿದರು.

    ಪ್ರವರ್ಗ‌ 2 ಎ ದಿಂದ ಪ್ರವರ್ಗ ಒಂದಕ್ಕೆ ಸಮುದಾಯವನ್ನು ಸೇರಿಸಬೇಕು, ಈಚಲು, ತಾಳೆ, ತೆಂಗಿನ‌ ಮರಗಳಿಂದ ನೀರಾ ಹಾಗೂ ಸೇಂದಿ ಇಳಿಸಿ ಮಾರಾಟ ಮಾಡುವುದಕ್ಕೆ ಮೂರ್ತೇದಾತರರ ಸಂಘಗಳಿಗೆ ಅವಕಾಶ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಿಎಂ ಬೊಮ್ಮಾಯಿ‌ ಮುಂದಿಡಲಾಗಿದೆ ಎಂದು ಮಾಲೀಕಯ್ಯ‌ ಗುತ್ತೇದಾರ್ ತಿಳಿಸಿದರು.

    ಸಿಎಂ ಬೊಮ್ಮಾಯಿ ಮನೆಗೆ ಕರೆದುಕೊಂಡು ಹೋಗೆಂದು ಆದೇಶಿಸಿದ ಕನಕಾದುರ್ಗಪರಮೇಶ್ವರಿ ದೇವಿ!

    ವ್ಯಾಕ್ಸಿನೇಟ್ ಇಂಡಿಯಾ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿಗಳಿಂದ ಬೆಂಗಳೂರಿನಲ್ಲಿ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts