More

    ರಾಮ ಸ್ಮರಣೆ ಮಾಡಿದ್ರೆ ಜೈಲಿಗೆ ಹಾಕ್ತೀರಾ? ಚುನಾವಣೆಗೆ ನಿಲ್ಲಿ- ಹೆಣ್ಣಿನ ಶಕ್ತಿ ಏನು ಎಂದು ತೋರಿಸುವೆ!

    ಮುಂಬೈ: ಹನುಮಾನ್‌ ಚಾಲೀಸಾ ವಿವಾದದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರಕ್ಕೆ ಬಂದಿರುವ ಸಂಸದೆ ನವನೀತ್‌ ರಾಣಾ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

    ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನಿವಾಸ ಮಾತೋಶ್ರೀ ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಶಾಸಕ ರವಿ ರಾಣಾ ಹಾಗೂ ಸಂಸದೆ ನವ್​ನೀತ್ ರಾಣಾ ದಂಪತಿ ಬೆದರಿಕೆ ಒಡ್ಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಸೇನೆಯ ಕಾರ್ಯಕರ್ತರು ನಗರದ ಹಲವೆಡೆ ಜಮಾಯಿಸಿದ್ದಲ್ಲದೆ, ಮಾತೋಶ್ರೀ ಮುಂದೆಯೂ ಸೇರಿದ್ದರು. ಅಲ್ಲದೆ ಶಿವಸೇನೆ ಕಾರ್ಯಕರ್ತರ ದೂರಿನ ಮೇರೆಗೆ ಪೊಲೀಸರು ಇವರನ್ನು ಕಳೆದ ಏ.23ರಂದು ಬಂಧಿಸಿದ್ದರು. ಇದೀಗ ಇಬ್ಬರಿಗೂ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

    ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ನವನೀತ್‌ ಅವರು ಠಾಕ್ರೆ ವಿರುದ್ಧ ಗರಂ ಆಗಿದ್ದಾರೆ. ಮುಖ್ಯಮಂತ್ರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ನನಗೆ ಕಿರುಕುಳ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಲಿ, ನಾನು ಅವರಿಗೆ ಹೆಣ್ಣಿನ ಶಕ್ತಿ ತೋರಿಸುತ್ತೇನೆ. ರಾಜ್ಯ ಸರ್ಕಾರ ಮಹಿಳೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಈ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾನೇನು ತಪ್ಪು ಮಾಡಿದ್ದೇನೆ? ಹನುಮಾನ್ ಚಾಲೀಸಾ ಓದಿ ಶ್ರೀರಾಮನ ನಾಮಸ್ಮರಣೆ ಮಾಡಿದ್ದೆ ತಪ್ಪಾ? ಹನುಮಾನ್‌ ಚಾಲೀಸಾ ಓದಿದ್ದಕ್ಕೆ ನನ್ನನ್ನು ಜೈಲಿಗೆ ಅಟ್ಟಿದ್ದೀರಾ? ಸದ್ಯ 14 ದಿನ ಜೈಲಿನಲ್ಲಿದ್ದೇನೆ. ಇದು ಅಪರಾಧ ಎಂದಾದರೆ 14 ತಿಂಗಳು ಅಲ್ಲ, 14 ವರ್ಷ ಜೈಲಿನಲ್ಲಿ ಇರಲು ಸಿದ್ಧ ಎಂದು ಹೇಳಿದ್ದಾರೆ.

    ಆಜಾನ್‌ v/s ಸುಪ್ರಭಾತ: ಬ್ರಾಹ್ಮಿ ಮುಹೂರ್ತದಲ್ಲಿ ಧ್ವನಿವರ್ಧಕಗಳಲ್ಲಿ ಮೊಳಗಿತು ಸು‍ಪ್ರಭಾತ, ಹನುಮಾನ್‌ ಚಾಲೀಸಾ

    ಮನುಕುಲವೇ ತಲೆತಗ್ಗಿಸುವ ಘನಘೋರ ಕೃತ್ಯ: ಬಾಲಕಿಯ ಶವವನ್ನು ಹೊರಕ್ಕೆ ತೆಗೆದು 17 ಮಂದಿ ಗ್ಯಾಂಗ್‌ ರೇಪ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts