ಗ್ರಾಪಂ ಸದಸ್ಯನ ಜತೆ ಕಾಮದಾಟ: ಪ್ರಶ್ನಿಸಿದ್ದ ಮಗನನ್ನೇ ಕೊಲೆ ಮಾಡಿದಳಾ ಪಾಪಿ ತಾಯಿ?

koppa
ಕೊಲೆಯಾದ ಬಸವರಾಜ ಹಾಗೂ ಕೊಲೆ ಆರೋಪ ಹೊತ್ತ ಅಮರಮ್ಮ, ಅಮರಪ್ಪ
Published on

ಕೊಪ್ಪಳ:  ಮಕ್ಕಳು ಕೆಟ್ಟವರಾಗಿರಬಹುದು, ಆದರೆ ತಾಯಿ ಕೆಟ್ಟವಳಾಗಲ್ಲ ಎನ್ನುವ ಮಾತಿದೆ. ಆದರೆ ಇಲ್ಲೊಂದು ಘಟನೆಯಲ್ಲಿ ಖುದ್ದು ಹೆತ್ತಾಕೆಯೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಅದೂ ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕಾಗಿ!

ಇಂಥದ್ದೊಂದು ಘಟನೆ ನಡೆದಿರುವುದು ಕೊಪ್ಪಳ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಮ್ಯಾದಾರಡೊಕ್ಕಿ ಗ್ರಾಮದಲ್ಲಿ. 22 ವರ್ಷದ ಬಸವರಾಜ್ ಎಂಬಾತ ಕೊಲೆಯಾದ ದುರ್ದೈವಿ. ಗ್ರಾಮದ ಪಂಚಾಯ್ತಿ ಸದಸ್ಯ ಅಮರಪ್ಪ ಕಂದಗಲ್ ಎಂಬಾತನ ಜತೆ ಈತನ ತಾಯಿ ಅಮರಮ್ಮ ಅಕ್ರಮ ಸಂಬಂಧ ಹೊಂದಿದ್ದಾಳೆ ಎನ್ನಲಾಗಿದೆ. ಇದನ್ನು ಪ್ರಶ್ನೆ ಮಾಡಿದ ಕಾರಣಕ್ಕಾಗಿ ತನ್ನ ಹಿರಿಯ ಮಗನ ಜತೆಗೂಡಿ ಈ ಕೊಲೆ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬಸವರಾಜ್. ತಾಯಿ ಹಾಗೂ ಸೋದರನೊಂದಿಗೆ ವಾಸವಾಗಿದ್ದನು. ಜನವರಿ 16ರಂದು ಮನೆಯಲ್ಲಿ ಅಮರಪ್ಪ ಮತ್ತು ಅಮರಮ್ಮ ಜತೆಯಾಗಿರೋದನ್ನು ಬಸವರಾಜ್ ನೋಡಿದ್ದಾನೆ. ಅದನ್ನು ಬಸವರಾಜ್ ಪ್ರಶ್ನೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಅಮರಪ್ಪನ ಸಹಾಯದಿಂದ ಅಮರಮ್ಮ ಮಗನ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ನಂತರ ಹಿರಿಯ ಮಗನ ಸಹಾಯದಿಂದ ಬಸವರಾಜ್ ನ ಮೃತದೇಹ ಮುಚ್ಚಿ ಹಾಕಿದ್ದಾರೆ. ಆದರೆ ಬೆಳಕಿಗೆ ಬಂದಿದ್ದು, ಇಂದು ಮುಚ್ಚಿದ್ದ ಮೃತದೇಹ ಹೊರ ತೆಗೆಯುವ ಸಾಧ್ಯತೆಗಳಿವೆ. ತಾವರೆಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net