More

    ಖಾಸಗಿ ಆಸ್ಪತ್ರೆಗಳ ಹಣದ ದಾಹಕ್ಕೆ ಮೂರು ವರ್ಷಗಳಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಸಾವು- ಗರ್ಭಿಣಿಯರೇ ಹೆಚ್ಚು!

    ಕೊರ್ಬಾ (ಛತ್ತೀಸ್​ಗಢ): ಹಲವು ಖಾಸಗಿ ಆಸ್ಪತ್ರೆಗಳ ಹಣದ ದಾಹದ ವಿಷಯ ತಿಳಿಯದ ವಿಷಯವೇನಲ್ಲ. ಜನರ ಪ್ರಾಣಗಳ ಜತೆ ಚೆಲ್ಲಾಟವಾಡುವ ಖಾಸಗಿ ಆಸ್ಪತ್ರೆಗಳಿಗೂ ನಮ್ಮ ದೇಶದಲ್ಲಿ ಬರವೇನಿಲ್ಲ. ಸ್ವಲ್ಪ ಹಣ ಕೊಡಲು ವಿಳಂಬ ಆಯಿತು ಎಂದರೆ ಜೀವ ಹೋಗುತ್ತಿದ್ದರೂ ಅವರತ್ತ ಮುಖ ಮಾಡುವುದಿಲ್ಲ ಹಲವು ವೈದ್ಯರು.

    ಇದೀಗ ಅಂಥದ್ದೇ ಭಯಾನಕ ಎನ್ನುವ ಅಂಶವೊಂದು ಬೆಳಕಿಗೆ ಬಂದಿದೆ. ಕಾಂಗ್ರೆಸ್‌ ಆಡಳಿತದಲ್ಲಿರುವ ಛತ್ತೀಸ್​ಗಢ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ 3 ಸಾವಿರಕ್ಕೂ ಅಧಿಕ ಬುಡಕಟ್ಟು ಸಮುದಾಯದವರು ಅಸುನೀಗಿದ್ದು, ಇದರಲ್ಲಿ ಗರ್ಭಿಣಿಯರೇ ಹೆಚ್ಚು ಎಂಬ ಆತಂಕಕಾರಿ ಅಂಶ ಬಹಿರಂಗಗೊಂಡಿದೆ.
    ಇವರ ಪೈಕಿ ಹೆಚ್ಚಿನವರು ಕೊರ್ವಾ ಸಮುದಾಯದವರು ಎನ್ನಲಾಗಿದೆ. ಆಸ್ಪತ್ರೆಗಳ ಹಣದ ದಾಹಕ್ಕೆ ಇತ್ತೀಚೆಗೆ ಕೊರ್ವಾ ಸಮುದಾಯದ ಮಹಿಳೆಯೋರ್ವಳು ಕೈ ಮುರಿದುಕೊಂಡು ಆಸ್ಪತ್ರೆಗೆ ಸೇರಿರುವ ಘಟನೆಯೇ ಉದಾಹರಣೆಯಾಗಿದೆ. ಈ ಮಹಿಳೆ ಮೊದಲು ಸರ್ಕಾರಿ ಆಸ್ಪತ್ರೆಗೆ ಸೇರಿದ್ದರು. ಆದರೆ ಅಲ್ಲಿ ಉತ್ತಮ ಚಿಕಿತ್ಸೆ ಇಲ್ಲವೆಂದು ಹೇಳಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶಸ್ತ್ರಚಿಕಿತ್ಸೆ ಹೆಸರಿನಲ್ಲಿ ಆಕೆಗೆ ಮೂರು ದಿನ ಅನ್ನ, ನೀರು ಕೊಡದ ಕಾರಣ ಆ ಮಹಿಳೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಭೀರ ಆರೋಪ ಹೇಳಿಬಂದ ನಂತರ ರಾಜ್ಯದ ಹಲವಾರು ಖಾಸಗಿ ಆಸ್ಪತ್ರೆಗಳ ಬಣ್ಣವನ್ನು ಬಯಲು ಮಾಡಲಾಗಿದೆ. ವ್ಯವಸ್ಥೆ ಸರಿಯಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಕಳೆದ 3 ವರ್ಷದ ಅವಧಿಯಲ್ಲಿ ದಾಖಲಾದ 3 ಸಾವಿರಕ್ಕೂ ಅಧಿಕ ಬುಡಕಟ್ಟು ಮಹಿಳೆಯರು ವೈದ್ಯರ ಹಣದ ದಾಹದಿಂದ ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ.

    ಛತ್ತೀಸ್​ಗಢದ ಬಾಲ್​ರಾಂಪುರ್​, ಬಸ್ತಾರ್​, ಬಿಜಾಪುರ, ದಂಥೇವಾಡ, ಜಸ್ಪುರ್​, ಕಂಕರ್​, ಕೊಂಡಗಾಂವ್​, ಕೊರ್ಬಾ, ನಾರಾಯಣಪುರ, ಸುಕ್ಮಾ, ಸುರ್ಜಾಪುರ ಮತ್ತು ಸುರ್​ಗುಂಜದಲ್ಲಿ 3,112 ಬುಡಕಟ್ಟು ಮಹಿಳೆಯರು ಮೃತಪಟ್ಟಿದ್ದಾರೆ. ಇದರಲ್ಲಿ 955 ಗರ್ಭಿಣಿಯರೇ ಮೃತಪಟ್ಟಿದ್ದಾರೆ.

    ಅನಾರೋಗ್ಯವೆಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ಉತ್ತಮ ಚಿಕಿತ್ಸೆಯ ಭಯ ಹುಟ್ಟಿಸಿ ಅವರನ್ನು ಖಾಸಗಿ ಆಸ್ಪತ್ರೆಗೆ ಹೋಗುವಂತೆ ಮಾಡಲಾಗುತ್ತಿದೆ. ಇದರಲ್ಲಿ ಆಟೋ ಚಾಲಕರು, ಆಸ್ಪತ್ರೆಯ ವಾರ್ಡ್​ ಸಿಬ್ಬಂದಿಯಲ್ಲದೇ ಸರ್ಕಾರಿ ವೈದ್ಯರು ಕೂಡ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಬಸವಣ್ಣ ಬಂದ, ಮೂವರ ಕೊಳಕ್ಕೆ ತಳ್ಳಿದ: ನಡೆಯಿತು ಪವಾಡ, 58 ವರ್ಷಗಳ ಸಮಸ್ಯೆ ಕ್ಷಣಾರ್ಧದಲ್ಲಿ ಇತ್ಯರ್ಥ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts