More

    ಬದುಕಿರುವ ಯೋಧನ ‘ಹುತಾತ್ಮ’ ಮಾಡಿ ಸಾಂತ್ವನ ಹೇಳಿದ ಕೇಂದ್ರ ಸಚಿವ! ಹಬ್ಬದ ಖುಷಿಯಲ್ಲಿದ್ದ ಕುಟುಂಬಸ್ಥರ ಕಣ್ಣೀರು

    ಗದಗ: ಗದಗನಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದ ವೇಳೆ ಅತ್ಯುತ್ಸಾಹದಲ್ಲಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸೂಕ್ತ ಮಾಹಿತಿ ಪಡೆದುಕೊಳ್ಳದೇ ಭಾರಿ ಎಡವಟ್ಟು ಮಾಡಿಕೊಂಡು ಫಜೀತಿಗೆ ಸಿಲುಕಿದ್ದಾರೆ.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಇತ್ತೀಚೆಗೆ ಸಚಿವರಾಗಿ ಸೇರ್ಪಡೆಯಾಗಿರುವ ಸಂಸದರು ದೇಶಾದ್ಯಂತ ಜನಾದೇಶ ಸಭೆಗಳನ್ನು ದೇಶಾದ್ಯಂತ ಹಮ್ಮಿಕೊಂಡಿದ್ದಾರೆ. ರಾಜ್ಯದ ನಾಲ್ವರು ಕೇಂದ್ರ ಸಚಿವರು ಒಂದೊಂದು ಭಾಗಗಳಲ್ಲಿ ಸಭೆ, ರ‍್ಯಾಲಿ ಮಾಡುತ್ತಿದ್ದಾರೆ. ಈ ರ‍್ಯಾಲಿ ವೇಳೆ ಸಚಿವ ನಾರಾಯಣಸ್ವಾಮಿ ಎಡವಟ್ಟನ್ನು ಮಾಡಿದ್ದು, ಯೋಧನ ಕುಟುಂಬದವರ ಮನೆಯ ಹಬ್ಬದ ವಾತಾವರಣವನ್ನೇ ಕಸಿದುಕೊಂಡಿದ್ದಾರೆ.

    ಅದೇನೆಂದರೆ ಹುತಾತ್ಮನಾಗಿರುವ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳುವುದನ್ನು ಬಿಟ್ಟು, ಬದುಕಿರುವ ಯೋಧನೊಬ್ಬನ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ. ಯೋಧ ಬಸವರಾಜ ಹಿರೇಮಠ ಅವರು ಒಂದೂವರೆ ವರ್ಷದ ಹಿಂದೆ ರೈಲು ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು ಮಹಾರಾಷ್ಟ್ರದ ಪುಣೆಯಲ್ಲಿ ಕರ್ತವ್ಯನಿರತನಾಗಿದ್ದ ವೇಳೆ ಮೃತಪಟ್ಟಿದ್ದರು. ಯೋಧ ಬಸವರಾಜ ಮೂಲತಃ ಗದಗ ತಾಲೂಕಿನ ಮುಳಗುಂದ ಪಟ್ಟಣದವರು.

    ಅಸಲಿಗೆ ಇವರ ಮನೆಗೆ ನಾರಾಯಣಸ್ವಾಮಿ ಹೋಗಬೇಕಿತ್ತು. ಆದರೆ ಅದರ ಬದಲು ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ರವಿಕುಮಾರ ಕಟ್ಟಿಮನಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ರವಿಕುಮಾರ್ ಪತ್ನಿ ಜತೆ ಮಾತನಾಡಿರುವ ಅವರು, ಸರ್ಕಾರಿ ನೌಕರಿ, ಜಮೀನು ನೀಡುವ ಭರವಸೆ ನೀಡಿದ್ದಾರೆ! ಇದರಿಂದ ಕುಟುಂಬಸ್ಥರಿಗೆ ಆಘಾತವಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಟ್ಟಿಮನಿ ಕುಟುಂಬಸ್ಥರು ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮನೆಯ ವರ ಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಸಿದುಕೊಂಡಿದ್ದಾರೆ ಈ ಸಚಿವರು. ಸಚಿವರ ಭೇಟಿಯಿಂದ ನಮ್ಮ ಕುಟುಂಬದ ನೆಮ್ಮದಿ ಹಾಳಾಗಿದೆ ಅಂತ ಯೋಧನ ತಾಯಿ, ಪತ್ನಿ ಕಣ್ಣೀರು ಹಾಕಿದ್ದಾರೆ.

    ಸ್ಥಳೀಯ ಬಿಜೆಪಿ ಮುಖಂಡರ ಮಾಹಿತಿ ಕೊರತೆಯಿಂದ ಕೇಂದ್ರ ಸಚಿವರಿಂದ ಎಡವಟ್ಟಾಗಿದೆ ಎಂದು ತಿಳಿದುಬಂದಿದೆ.

    ತಾಲಿಬಾನ್‌ ಮುಖ್ಯಸ್ಥ ತರಬೇತಿ ಪಡೆದದ್ದು ಭಾರತೀಯ ಸೇನೆಯಲ್ಲಿ! ಸೇರಿದ್ದು ಹೇಗೆ? ಆಗ ಹೇಗಿದ್ದ?

    ಅಮ್ಮಾ… ನಾನು ನಿನ್ನ ಮಗ… ಕೆರೆಯಲ್ಲಿ ಮುಳುಗಿ ಸತ್ತವ… ಪುನರ್ಜನ್ಮ ಪಡೆದ ಬಾಲಕನ ನಂಬಲಸಾಧ್ಯ ಘಟನೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts