More

    ಕಲ್ಲಿದ್ದಲು ಹಗರಣ: ಮಮತಾ ಬ್ಯಾನರ್ಜಿ ಅಳಿಯ, ಸೊಸೆಗೆ ಸಂಕಷ್ಟ- ‘ಇಡಿ’ಯಿಂದ ಸಮನ್ಸ್‌ ಜಾರಿ

    ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾಗೆ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಸಮನ್ಸ್‌ ಜಾರಿಗೊಳಿಸಿದೆ.

    ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಕರಣದ ತನಿಖಾ ಅಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸಮನ್ಸ್ ಜಾರಿಗೊಳಿಸಲಾಗಿದೆ. ಸೆಪ್ಟೆಂಬರ್ 6 ರಂದು ನವದೆಹಲಿಯಲ್ಲಿರುವ ಏಜೆನ್ಸಿಯ ಮುಂದೆ ಹಾಜರಾಗುವಂತೆ ಅಭಿಷೇಕ್‌ ಅವರಿಗೆ ಹೇಳಲಾಗಿದ್ದರೆ, ಅವರ ಪತ್ನಿಗೆ ಸೆಪ್ಟೆಂಬರ್ 1 ರಂದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಬ್ಯಾನರ್ಜಿ ಪರ ವಕೀಲ ಸಂಜಯ್ ಬಸು ಅವರಿಗೆ ಸೆಪ್ಟೆಂಬರ್ 3 ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅಭಿಷೇಕ್ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.

    2020ರ ನವೆಂಬರ್‌ನಲ್ಲಿ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಗಣಿಗಳಿಗೆ ಸಂಬಂಧಿಸಿದ ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಬ್ಯಾನರ್ಜಿ ಅವರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಎಫ್‌ಐಆರ್ ದಾಖಲಿಸಿತ್ತು. ನಂತರ ಪಿಎಂಎಲ್‌ಎ ಕಾಯ್ದೆ ಅಡಿ ಇಡಿ ಕೇಸ್ ದಾಖಲಿಸಿದೆ.

    ಪಶ್ಚಿಮ ಬಂಗಾಳ ಪೊಲೀಸರ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಶ್ಯಾಮ್ ಸಿಂಗ್ ಮತ್ತು ಜ್ಞಾನವಂತ್ ಸಿಂಗ್ ಇದೇ ಪ್ರಕರಣಕ್ಕೆ ಹಾಜರಾಗುವಂತೆ ಕ್ರಮವಾಗಿ ಸೆಪ್ಟೆಂಬರ್ 8 ಮತ್ತು 9 ರಂದು ಸಮನ್ಸ್ ನೀಡಲಾಗಿದೆ. ಅಭಿಷೇಕ್ ಬ್ಯಾನರ್ಜಿ ಈ ಅಕ್ರಮ ವ್ಯಾಪಾರದಿಂದ ಪಡೆದ ನಿಧಿಯ ಫಲಾನುಭವಿ ಎಂದು ಇಡಿ ಈ ಹಿಂದೆ ಹೇಳಿತ್ತು. ಆದರೆ ಅಭಿಷೇಕ್ ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಿದ್ದಾರೆ.

    ಫೇಸ್‌ಬುಕ್‌ನಲ್ಲಿ ವಿವಾಹಿತೆಯ ರಿಕ್ವೆಸ್ಟ್‌ ಅಕ್ಸೆಪ್ಟ್‌ ಮಾಡಿದ್ದೇ ಬದುಕು ಮೂರಾಬಟ್ಟೆಯಾಗಿದೆ, ಪ್ಲೀಸ್‌ ದಾರಿ ತೋರಿ…

    ಮದುವೆ ಹೆಸರಲ್ಲಿ ಮತಾಂತರ ಅಪರಾಧ ಆಗತ್ತಾ, ಇಲ್ವಾ? ಸುಪ್ರೀಂಕೋರ್ಟ್‌ ಬಾಗಿಲಿಗೆ ‘ಲವ್‌ ಜಿಹಾದ್‌’…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts