More

    ಡ್ರಗ್ಸ್‌ ಮಾರಾಟ ದಂಧೆಗಿಳಿದ ಅಮೆಜಾನ್‌? ಸಿಹಿತುಳಸಿ ನೆಪದಲ್ಲಿ ನಾಲ್ಕು ತಿಂಗಳಲ್ಲಿ ಒಂದು ಟನ್‌ ಮಾರಾಟ

    ಭೋಪಾಲ್: ದೇಶಾದ್ಯಂತ ಡ್ರಗ್ಸ್‌ ದಂಧೆಯ ಕರಾಳಮುಖ ಒಂದೊಂದೇ ಬಯಲಿಗೆ ಬರುತ್ತಿರುವ ಬೆನ್ನಲ್ಲೇ ಇದೀಗ ಅಮೆಜಾನ್‌ ಕೂಡ ಮಾದಕ ವಸ್ತುಗಳ ಮಾರಾಟಕ್ಕಿಳಿದಿರುವ ಭಯಾನಕ ಕೃತ್ಯ ಬೆಳಕಿಗೆ ಬಂದಿದೆ.

    ಮಧುಮೇಹಿಗಳಿಗೆ ಆಯುರ್ವೇದದ ಔಷಧ ರೂಪದಲ್ಲಿ ಸ್ಟೀವಿಯಾ (ಸಿಹಿ ತುಳಸಿ) ನೀಡಲಾಗುತ್ತದೆ. ಇದು ಮಧುಮೇಹಿಗಳಿಗೆ ಉತ್ತಮ ಔಷಧ ಎನ್ನಲಾಗಿದೆ. ಆದ್ದರಿಂದ ಇದರ ಬೇಡಿಕೆ ಹೆಚ್ಚಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಕಂಪೆನಿಯೊಂದು ಅಮೆಜಾನ್‌ ಮೂಲಕ ಇದರ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ.

    ವಿಶಾಖಪಟ್ಟಣದ ಕಂಪನಿಯೊಂದು ಸಿಹಿ ತುಳಸಿ (ಸ್ವೀವಿಯಾ) ಎಲೆಗಳ ಉತ್ಪನ್ನ ಮಾರಾಟ ಕಂಪನಿ ಎಂದು ಹೇಳಿಕೊಂಡಿತ್ತು. ಅಮೆಜಾನ್‍ನಲ್ಲಿ ಈ ಕಂಪೆನಿ ನೋಂದಾಯಿಸಿಕೊಂಡಿತ್ತು. ಆದರೆ ಈ ಸಿಹಿ ತುಳಸಿ ನೆಪದಲ್ಲಿ ಪಾರ್ಸಲ್‍ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದು, ಇದನ್ನು ಮಧ್ಯಪ್ರದೇಶ ಪೊಲೀಸರು ಕಂಡುಹಿಡಿದಿದ್ದಾರೆ.ಅಮೆಜಾನ್‍ಗೆ ನೋಟಿಸ್ ರವಾನಿಸಲಾಗಿದ್ದು, ಉತ್ತರ ಕೇಳಲಾಗಿದೆ.

    ದಂಧೆ ಬೆಳಕಿಗೆ ಬಂದದ್ದು ಹೇಗೆ?
    20 ಕೆಜಿ ಗಾಂಜಾ ಹೊಂದಿದ್ದ ಇಬ್ಬರನ್ನು ಪಧ್ಯಪ್ರದೇಶದ ಪೊಲೀಸರು ಬಂಧಿಸಿದ್ದರು. ಅವರ ವಿಚಾರಣೆ ಮಾಡಿದಾಗ ತಾವು ಅಮೆಜಾನ್‌ನಿಂದ ಅದನ್ನು ತರಿಸಿಕೊಂಡಿರುವುದಾಗಿ ಹೇಳಿದ್ದರು. ಈ ಹಿಂದೆ ಕೂಡ ಇದೇ ರೀತಿ ಮಾಡಿರುವುದಾಗಿ ಹಾಗೂ ಈ ವೆಬ್‌ಸೈಟ್‌ನಿಂದ ಇನ್ನೂ ಅನೇಕರು ತರಿಸಿಕೊಳ್ಳುತ್ತಿರುವ ವಿಚಾರ ಹೇಳಿದ್ದಾರೆ.

    ಕಳೆದ ನಾಲ್ಕು ತಿಂಗಳಿನಲ್ಲಿ ಒಂದು ಟನ್‌ಗೂ ಅಧಿಕ ಡ್ರಗ್ಸ್‌ ಅಮೆಜಾನ್ ಮೂಲಕ ಮಾರಾಟ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದಿದೆ. 1 ಸಾವಿರ ಕೆಜಿಯಷ್ಟು ಗಾಂಜಾವನ್ನು 1.10 ಕೋಟಿಗೆ ಖರೀದಿ ಮಾಡಲಾಗಿದೆ ಎಂದೂ ತಿಳಿದುಬಂದಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಕಂಪೆನಿ ಮಾಡಿರುವ ಮೋಸವೋ ಅಥವಾ ಅಮೆಜಾನ್‌ಗೆ ಈ ಬಗ್ಗೆ ತಿಳಿದಿತ್ತೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    ಹುಚ್ಚನ ಸಾವಿಗೆ ಹೂವಿನಹಡಗಲಿಯಲ್ಲಿ ಶೋಕದ ಛಾಯೆ! ಈತ ಎಲ್ಲರಂಥಲ್ಲ… ವಿಐಪಿಗಳಂತೆ ಅಂತ್ಯಸಂಸ್ಕಾರ

    ‘ಜೈ ಭೀಮ್‌‘ ಚಿತ್ರದ ನಾಯಕ ಸೂರ್ಯನ ಮೇಲೆ ಹಲ್ಲೆ ಮಾಡಿದ್ರೆ ಒಂದು ಲಕ್ಷ ರೂ. ಬಹುಮಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts