More

    ಅಮೆರಿಕ ಅಧ್ಯಕ್ಷ ಚುನಾವಣೆ ಗಲಾಟೆ ನಡುವೆಯೇ ನಾಯಿಗೆ ದಕ್ಕಿತು ಮೇಯರ್‌ ಪಟ್ಟ!

    ಕೆಂಟುಕಿ (ಅಮೆರಿಕ): ಅಮೆರಿಕದ ಚುನಾವಣೆ ರೋಚಕ ತಿರುವು ಪಡೆಯುತ್ತಲೇ ಸಾಗಿದೆ. ಡೆಮಾಕ್ರಟಿಕ್‌ ಅಭ್ಯರ್ಥಿ ಜೋ ಬಿಡನ್‌ ಗೆಲುವಿನ ಹಾದಿಯಲ್ಲಿ ಇದ್ದರೂ, ಕೊನೆಯವರೆಗೂ ಹೀಗೇ ಎಂದು ಹೇಳದ ಸ್ಥಿತಿ ಸದ್ಯದ್ದು. ಆದ್ದರಿಂದ ಅಮೆರಿಕದ ಅಧ್ಯಕ್ಷ ಗಾದಿ ಯಾರ ಹೆಸರಿಗೆ ಒಲಿಯಲಿದೆ ಎನ್ನುವುದು ತಿಳಿಯುವುದು ಕಷ್ಟವೇ.

    ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಲ್ಲಿಯ ಕೆಂಟುಕಿಯ ರಾಜ್ಯದ ರಾಬಿಟ್‌ಹ್ಯಾಶ್​ ಎಂಬ ಗ್ರಾಮವು ಈ ವರ್ಷದ ಹೊಸ ಮೇಯರ್​ನ್ನು ಆಯ್ಕೆ ಮಾಡಿದೆ.

    ಅದರಲ್ಲೇನು ವಿಶೇಷ ಅಂತೀರಾ? ಅಲ್ಲಿ ಆಯ್ಕೆಯಾಗಿರುವುದು ಒಂದು ನಾಯಿ. 6 ತಿಂಗಳ ಫ್ರೆಂಚ್‌ಬುಲ್‌ಡಾಗ್‌​ ಅನ್ನು ಮೇಯರ್‌ ಆಗಿ ಆಯ್ಕೆ ಮಾಡಲಾಗಿದೆ. ಅಚ್ಚರಿಯ ವಿಚಾರ ಎಂದರೆ, ಈ ಶ್ವಾನವು ಬರೋಬ್ಬರಿ 13,143 ಸಾವಿರ ಮತಗಳನ್ನು ಪಡೆದಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಈ ಶ್ವಾನ ಕೆಂಟಕಿಯ ಮೇಯರ್​ ಆಗಿ ಮುಂದುವರಿಯಲಿದೆ.

    ಇದನ್ನೂ ಓದಿ: ಅಮೆರಿಕ ಚುನಾವಣೆ- ಜಾರ್ಜಿಯಾದಲ್ಲಿ ಕೊನೆ ಕ್ಷಣದಲ್ಲಿ ರೋಚಕ ತಿರುವು

    ಅಂದಹಾಗೆ ಇದು ಈವರೆಗಿನ ಗರಿಷ್ಠ ಮೊತ್ತದ ಮತ ಎಂದು ಪರಿಗಣಿಸಲಾಗಿದೆ. ಇನ್ನು ಈ ಚುನಾವಣೆಯಲ್ಲಿ ಬೀಗಲ್​ ಜಾತಿಯ ನಾಯಿ ಎರಡನೇ ಸ್ಥಾನ ಪಡೆದರೆ ಗೋಲ್ಡನ್​ ರಿಟ್ರೈವರ್​​ ಮೂರನೇ ಸ್ಥಾನ ಪಡೆದಿದೆ.

    ಅಷ್ಟಕ್ಕೂ ನಾಯಿಯನ್ನು ಮೇಯರ್‌ ಆಗಿಸಿರುವ ಹಿಂದೆ ಅಂಥ ವಿಶೇಷತೆ ಏನೂ ಇಲ್ಲ. ನಿಜವಾಗಿಯೂ ಇಲ್ಲಿ ಮೇಯರ್‌ ಎಂಬ ಯಾವುದೇ ಹುದ್ದೆ ಇಲ್ಲ. ಬದಲಿಗೆ ಮೇಯರ್‌ ಹೆಸರಿನಲ್ಲಿ ನಾಯಿಯ ಚುನಾವಣೆ ನಡೆದಿದೆ.

    ಆಯ್ಕೆಯಾಗುವ ನಾಯಿಯನ್ನು ಗ್ರಾಮದ ಸುಧಾರಣೆಗೋಸ್ಕರ ನಿಧಿ ಸಂಗ್ರಹ ಮಾಡಲು ಬಳಸಿಕೊಳ್ಳಲಾಗುತ್ತದೆ. ರ್ಯಾಬಿಟ್‌ಹ್ಯಾಷ್‌ ಹಿಸ್ಟಾರಿಕ್‌ ಸೊಸೈಟಿ ಹೆಸರಿನ ಈ ಸಂಸ್ಥೆಗೆ ಇದಾಗಲೇ ಈ ಹೊಸ ಮೇಯರ್‌ 13 ಸಾವಿರ ಡಾಲರ್‌ (ಸುಮಾರು 10 ಲಕ್ಷ ರೂಪಾಯಿ) ನಿಧಿಯನ್ನು ಸಂಗ್ರಹಿಸಿ ಕೊಟ್ಟಿದ್ದಾನೆ!

    ಚಿಲ್‌ ಡೊನಾಲ್ಡ್‌ ಚಿಲ್‌… ಟ್ರಂಪ್‌ ವಿರುದ್ಧ ಸೇಡು ತೀರಿಸಿಕೊಂಡ ಗ್ರೇಟಾ!

    ಲಾಲುಗೆ ಸಿಕ್ತಿಲ್ಲ ಬೇಲ್‌: ಸಿಬಿಐನಿಂದಾಗಿ ಜೈಲಿನಿಂದ ಇಲ್ಲ ಮುಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts