More

    ಇದು ಬೆಂಕಿಪೊಟ್ಟಣದ ಕುತೂಹಲದ ಕಥೆ: 14 ವರ್ಷಗಳ ಬಳಿಕ ರೇಟ್‌ ಡಬಲ್‌!

    ನವದೆಹಲಿ: ಈಗ ಎಲ್ಲೆಡೆ ಬೆಲೆ ಏರಿಕೆಯದ್ದೇ ಮಾತು. ಅಗತ್ಯ ವಸ್ತುಗಳ ಬೆಲೆ ದಿಢೀರ್‌ ಗಗನಮುಖಿಯಾಗುತ್ತಿರುವ ಈ ಹೊತ್ತಿನಲ್ಲಿ ಇದೀಗ ಬೆಂಕಿಪೊಟ್ಟಣದ ಬೆಲೆಯೂ ಏರಿಕೆಯಾಗಿದೆ. ಆದರೆ ಕುತೂಹಲದ ವಿಷಯ ಎಂದರೆ ಇಷ್ಟು ವರ್ಷಗಳವರೆಗೆ ಬೆಂಕಿಪೊಟ್ಟಣ ಒಂದಕ್ಕೆ ಇದದ್ದು ಕೇವಲ ಒಂದು ರೂಪಾಯಿ, ಅದೀಗ ಎರಡು ರೂಪಾಯಿಯಾಗಿದೆ!

    ಬೆಂಕಿಪೊಟ್ಟಣದ ಆರಂಭದ ದಿನಗಳಿಂದಲೂ ಇದದ್ದು ಕೇವಲ 50 ಪೈಸೆ. ನಂತರ 2007ರಲ್ಲಿ ಇದರ ಬೆಲೆಯನ್ನು ಒಂದು ರೂಪಾಯಿಗೆ ಏರಿಸಲಾಗಿತ್ತು. ಕಳೆದ 14 ವರ್ಷಗಳಿಂದ ಇದು ಒಂದು ರೂಪಾಯಿ ಬೆಲೆಯನ್ನು ಕಾಯ್ದುಕೊಂಡು ಬಂದಿತ್ತು. ಇದೀಗ ಇದರ ಬೆಲೆ ಡಬಲ್‌ ಆಗಿದೆ, ಅಂದರೆ ಆಗಿದ್ದು ಎರಡು ರೂಪಾಯಿ.

    ಡಿಸೆಂಬರ್ 1ರಿಂದ ಈ ಹೊಸ ಬೆಲೆ ಚಾಲ್ತಿಯಲ್ಲಿ ಬರಲಿದೆ. ತಮಿಳುನಾಡಿನ ಶಿವಕಾಶಿಯಲ್ಲಿ ಆಲ್ ಇಂಡಿಯಾ ಛೇಂಬರ್‌ ಆಫ್ ಮ್ಯಾಚಸ್ ಸಭೆಯಲ್ಲಿ ಬೆಲೆ ಏರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಚ್ಚಾ ಸಾಮಗ್ರಿಗಳಲ್ಲಿ ಆಗುತ್ತಿರುವ ಬೆಲೆ ಹೆಚ್ಚಳದಿಂದ ಬೆಂಕಿಪೊಟ್ಟಣದ ಬೆಲೆಯನ್ನು ಏರಿಕೆ ಮಾಡುವುದು ಅನಿವಾರ್ಯ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

    14 ಕಚ್ಚಾ ವಸ್ತುಗಳ ಮಿಶ್ರಣ ಈ ಬೆಂಕಿಪೊಟ್ಟಣ:
    ಅಂದಹಾಗೆ, ಬೆಂಕಿಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಒಂದು ಕೆಜಿ ಕೆಂಪು ರಂಜಕ ರೂ. 425 ರಿಂದ ರೂ. 810 ಕ್ಕೆ, ಮೇಣ ರೂ. 58 ರಿಂದ ರೂ. 80 ಕ್ಕೆ, ಹೊರ ಬಾಕ್ಸ್ ಬೋರ್ಡ್ ರೂ. 36 ರಿಂದ ರೂ. 55 ಕ್ಕೆ ಮತ್ತು ಒಳ ಪೆಟ್ಟಿಗೆ ಬೋರ್ಡ್ ರೂ. 32 ರಿಂದ ರೂ. 58 ಕ್ಕೆ ಏರಿಕೆಯಾಗಿದೆ.
    ಸದ್ಯ 600 ಬೆಂಕಿ ಪೊಟ್ಟಣಗಳ ಒಂದು ಬಂಡಲ್ 270ರಿಂದ 300 ರೂಪಾಯಿಗೆ ಮಾರಾಟವಾಗುತ್ತಿದೆ. ಅದನ್ನು 430ರಿಂದ 480 ರೂಪಾಯಿಗೆ ಏರಿಸಲು ನಿರ್ಧರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts