More

    ಬೆಳಗಾವಿ ರೆಜಿಮೆಂಟ್‌ನಲ್ಲಿ ಸ್ಟೆನೊ, ಕ್ಷೌರಿಕ, ಕ್ಲರ್ಕ್‌, ಬಾಣಸಿಗ… ಹುದ್ದೆಗಳಿಗೆ ಅರ್ಜಿ ಆಹ್ವಾನ

    ಭಾರತೀಯ ಸೇನೆಯಲ್ಲಿ ಅತ್ಯಂತ ಹಳೆಯ ರೆಜಿಮೆಂಟ್​ಗಳಲ್ಲಿ ಒಂದಾಗಿರುವ ಮರಾಠ ಲೈಟ್ ಇನ್​ಫೆಂಟ್ರಿಯ ಬೆಳಗಾವಿ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. 15 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 10 ಸ್ಥಾನ, ಎಸ್ಸಿಗೆ 1 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 3 ಸ್ಥಾನ, ಮಾಜಿ ಸೈನಿಕರಿಗೆ 1 ಸ್ಥಾನ ಮೀಸಲಿರಿಸಲಾಗಿದೆ.

    ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇಲ್ ಐಡಿ [email protected] ಗೆ ಕಳುಹಿಸಲು ಸೂಚಿಸಲಾಗಿದೆ. ಎಸ್ಸಿ, ಎಸ್ಟಿ, ಇತರ ಹಿಂದುಳಿದ ಅಭ್ಯರ್ಥಿಗಳು ಕಾಯ್ದಿರಿಸದ ಸ್ಥಾನಗಳಿಗೆ ಅರ್ಜಿ ಸಲ್ಲಿಸಿದರೆ ಅಂತಹ ಅರ್ಜಿಗಳಿಗೆ ವಯೋಸಡಿಲಿಕೆ ಅಥವಾ ಯಾವುದೇ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ.

    ಒಟ್ಟು ಹುದ್ದೆಗಳು: 15

    ಹುದ್ದೆ ವಿವರ

    * ಸ್ಟೆನೋಗ್ರಾಫರ್ – 1

    * ಕ್ಲರ್ಕ್ – 1

    * ಅಡಿಗೆಯವ – 8

    * ಕ್ಷೌರಿಕ – 1

    * ಸಫಾಯಿವಾಲ – 3

    * ಬೂಟ್ ಮೇಕರ್ – 1

    ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಶಿಕ್ಷಣ, ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ಡಿಕ್ಟೇಷನ್, ಟೈಪಿಂಗ್ ತರಬೇತಿ ಪಡೆದಿರಬೇಕು. ಅಡುಗೆ, ಕ್ಷೌರಿಕ, ಬೂಟ್ ಮೇಕರ್ ಹಾಗೂ ಇತರ ಹುದ್ದೆಯ ಅಭ್ಯರ್ಥಿಗಳಿಗೆ ಹುದ್ದೆ ಕುರಿತ ಕನಿಷ್ಠ ಜ್ಞಾನ ಹಾಗೂ ಒಂದು ವರ್ಷದ ವೃತ್ತಿ ಅನುಭವ ಕೇಳಲಾಗಿದೆ.

    ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಕ್ಲರ್ಕ್ ಹುದ್ದೆಗೆ ಗರಿಷ್ಠ 45 ವರ್ಷ (ಎಸ್ಸಿ, ಎಸ್ಟಿಗೆ ಗರಿಷ್ಠ 50 ವರ್ಷ), ಉಳಿದ ಎಲ್ಲ ಹುದ್ದೆಗಳಿಗೂ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ವೇತನ: ಸ್ಟೆನೋಗ್ರಾಫರ್​ಗೆ ಮಾಸಿಕ 25,500 ರೂ., ಕ್ಷೌರಿಕ, ಸಫಾಯಿವಾಲಾಗೆ ಮಾಸಿಕ 18,000 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 19,900 ರೂ. ವೇತನ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 21.8.2021 (ಎಂಪ್ಲಾಯ್ಮೆಂಟ್ ನ್ಯೂಸ್​ನಲ್ಲಿ ಜಾಹೀರಾತು ಪ್ರಕಟವಾದ 21 ದಿನದ ಒಳಗೆ)

    ಅಧಿಸೂಚನೆಗೆ: ಜುಲೈ 31ರ ಎಂಪ್ಲಾಮೆಂಟ್ ನ್ಯೂಸ್ ಪತ್ರಿಕೆ ನೋಡಿ

    ಮಾಹಿತಿಗೆ: http://www.indianarmy.nic.in

    ಎಸ್ಸೆಸ್ಸೆಲ್ಸಿ ಉತ್ತೀರ್ಣರಿಗೆ ಪೊಲೀಸ್‌ ಪಡೆಯಲ್ಲಿ 250 ಹುದ್ದೆಗಳು: 33 ಸಾವಿರ ರೂ.ವರೆಗೆ ಸಂಬಳ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts