More

    ಆರ್​ಸಿಬಿಗೆ ಲಕ್​ ತರುವುದೇ 18? ಮಹಿಳೆಯರಂತೆ ಪುರುಷರಿಗೂ ಒಂದು ರನ್​ ಸೋಲೇ ಗೆಲುವಿನ ಮೆಟ್ಟಿಲು!

    ಬೆಂಗಳೂರು: ಐಪಿಎಲ್​-17ರಲ್ಲಿ ಆರಂಭಿಕ 8ರಲ್ಲಿ 7ರಲ್ಲಿ ಸೋತು, ಇದೀಗ ಸತತ 5 ಜಯದೊಂದಿಗೆ ಬೀಗುತ್ತಿರುವ ಆರ್​ಸಿಬಿ ಪಾಲಿಗೆ ಈಗ 18 ಅದೃಷ್ಟದ ಸಂಖ್ಯೆ ಆಗಬೇಕಿದೆ! ಯಾಕೆಂದರೆ ಮೇ 18ರಂದು ಬೆಂಗಳೂರಿನಲ್ಲಿ ಸಿಎಸ್​ಕೆ ವಿರುದ್ಧ ನಡೆಯಲಿರುವ ಕಡೇ ಲೀಗ್​ ಪಂದ್ಯ ಆರ್​ಸಿಬಿ ಪಾಲಿಗೆ ನಿರ್ಣಾಯಕ. ಈ ಪಂದ್ಯದಲ್ಲಿ 18 ಜೆರ್ಸಿ ನಂಬರ್​ ಆಟಗಾರ ವಿರಾಟ್​ ಕೊಹ್ಲಿ ಸಿಡಿದರೆ ಮತ್ತು 18 ರನ್​ಗಳಿಂದ ಗೆದ್ದರೆ ಆರ್​ಸಿಬಿಗೆ ಪ್ಲೇಆಫ್​ ಅವಕಾಶ ಒಲಿಯಲಿದೆ. ಆದರೆ ಅದಕ್ಕೆ ಮುನ್ನ ಲಖನೌ ತಂಡ ಮಂಗಳವಾರ ಡೆಲ್ಲಿ ವಿರುದ್ಧ ಸೋಲಬೇಕು ಅಥವಾ ಶುಕ್ರವಾರ ಮುಂಬೈ ವಿರುದ್ಧವಾದರೂ ಸೋಲಬೇಕು ಅಥವಾ ಸನ್​ರೈಸರ್ಸ್​ ತಂಡ ಉಳಿದೆರೂ ಪಂದ್ಯಗಳನ್ನು ಹೀನಾಯವಾಗಿ ಸೋಲಬೇಕು. ಇವೆರಡೂ ಫಲಿಸಿದರೆ ಆರ್​ಸಿಬಿ-ಸಿಎಸ್​ಕೆ ಎರಡೂ ಪ್ಲೇಆಫ್​​ಗೇರುವ ಅವಕಾಶವನ್ನೂ ಹೊಂದಿವೆ.

    ಆರ್​ಸಿಬಿ-ಸಿಎಸ್​ಕೆ ಪಂದ್ಯ ನಾಕೌಟ್​ ಎನಿಸಿದರೆ, ಗೆಲುವಿನ ಜತೆಗೆ ರನ್​ರೇಟ್​ನಲ್ಲೂ ಸಿಎಸ್​ಕೆ ತಂಡವನ್ನು ಹಿಂದಿಕ್ಕುವ ಸವಾಲು ಆರ್​ಸಿಬಿಗೆ ಎದುರಾಗಲಿದೆ. ಆಗ ಆರ್​ಸಿಬಿ ಮೊದಲು ಬ್ಯಾಟಿಂಗ್​ಗೆ ಇಳಿದು 200 ರನ್​ ಗಳಿಸಿದರೆ ಕನಿಷ್ಠ 18 ರನ್​ಗಳಿಂದಾದರೂ ಗೆಲ್ಲಬೇಕು. ಒಂದು ವೇಳೆ ಸಿಎಸ್​ಕೆ ಮೊದಲು ಬ್ಯಾಟಿಂಗ್​ಗೆ ಇಳಿದು 200 ರನ್​ ಪೇರಿಸಿದರೆ, ಆರ್​ಸಿಬಿ 18.1 ಓವರ್​ಗಳಲ್ಲಿ ಅಂದರೆ ಕನಿಷ್ಠ 11 ಎಸೆತ ಬಾಕಿ ಇರುವಂತೆಯೇ ಗೆಲ್ಲಬೇಕಾಗುತ್ತದೆ. ಆದರೆ ಮಳೆಯಿಂದ ಪಂದ್ಯ ರದ್ದಾದರೆ ಆರ್​ಸಿಬಿ ಹೊರಬೀಳಲಿದೆ.

    ಒಂದು ರನ್​ ಸೋಲೇ ಗೆಲುವಿನ ಮೆಟ್ಟಿಲು?
    ಐಪಿಎಲ್​ಗೆ ಮುನ್ನ ನಡೆದ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ (ಡಬ್ಲ್ಯುಪಿಎಲ್​) ಆರ್​ಸಿಬಿ ಮಹಿಳಾ ತಂಡ ತನ್ನ 7ನೇ ಲೀಗ್​ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 1 ರನ್​ನಿಂದ ಸೋತಿತು. ಬಳಿಕ ಪುಟಿದೆದ್ದು ಫೈನಲ್​ ಸಹಿತ ಸತತ 3 ಪಂದ್ಯ ಜಯಿಸುವ ಮೂಲಕ ಸ್ಮೃತಿ ಮಂದನಾ ಬಳಗ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತು. ಇದೀಗ ಐಪಿಎಲ್​ನಲ್ಲೂ ಆರ್​ಸಿಬಿ ತಂಡ ಕೆಕೆಆರ್​ ವಿರುದ್ಧ 1 ರನ್​ನಿಂದ ಸೋತ ಬಳಿಕ ಪುಟಿದೆದ್ದು ಸತತ 5 ಪಂದ್ಯ ಗೆದ್ದುಕೊಂಡಿದೆ. ಅಂದರೆ ಅದೇ ರೀತಿಯಲ್ಲಿ ಪ್ಲೇಆಫ್​ ಪ್ರವೇಶಿಸುವುದು ಮಾತ್ರವಲ್ಲದೆ ಚೊಚ್ಚಲ ಕಪ್​ ಕನಸನ್ನೂ ನನಸಾಗಿಸಲಿದೆ ಎಂಬುದು ಆರ್​ಸಿಬಿ ಅಭಿಮಾನಿಗಳ ಸಿಹಿ ಲೆಕ್ಕಾಚಾರವಾಗಿದೆ.

    ಆರ್​ಸಿಬಿ ವಿರುದ್ಧ ಡೆಲ್ಲಿ ತಂಡದ ಸೋಲಿಗೆ ಕಾರಣ ವಿವರಿಸಿದ ಹಂಗಾಮಿ ನಾಯಕ ಅಕ್ಷರ್​ ಪಟೇಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts