More

    ಲಖನೌ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್‌: ಹುಸಿಯಾಯ್ತು ಮುಲಾಯಂ ಸೊಸೆ, ಬಹುಗುಣ ಪುತ್ರನ ನಿರೀಕ್ಷೆ

    ಲಖನೌ: ಉತ್ತರ ಪ್ರದೇಶದ ಲಖನೌನ ಒಂಬತ್ತು ಸ್ಥಾನದ ಅಭ್ಯರ್ಥಿಗಳ ಪಟ್ಟಿಯನ್ನು ಕೊನೆಗೂ ಬಿಜೆಪಿ ಘೋಷಿಸಿದೆ. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಹಾಗೂ ಬಿಜೆಪಿ ಸಂಸದರಾದ ರೀಟಾ ಬಹುಗುಣ ಜೋಶಿ ಪುತ್ರ ಮಯಾಂಕ್ ಜೋಶಿ ಅವರ ಹೆಸರು ಈ ಪಟ್ಟಿಯಲ್ಲಿ ಇಲ್ಲ. ಇವರಿಬ್ಬರ ಹೆಸರು ಲಖನೌ ಕ್ಷೇತ್ರದಲ್ಲಿ ಇರುವುದಾಗಿ ಬಹು ನಿರೀಕ್ಷೆ ಇತ್ತು. ಆ ನಿರೀಕ್ಷೆಯೀಗ ಹುಸಿಯಾಗಿದೆ.

    ಇವರಿಬ್ಬರೂ ಲಖನೌದ ಕಂಟೋನ್ಮೆಂಟ್‌ ಕ್ಷೇತ್ರದಿಂದ ರಾಜ್ಯ ಸಚಿವ ಬ್ರಿಜೇಶ್ ಪಾಠಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದು ಪಕ್ಷಕ್ಕೆ ಸುರಕ್ಷಿತ ಸ್ಥಾನ ಎಂದು ಪರಿಗಣಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರೀಟಾ ಬಹುಗುಣ ಜೋಶಿ ಅವರು ಎಸ್‌ಪಿ ಅಭ್ಯರ್ಥಿಯಅಗಿದ್ದ ಅಪರ್ಣಾ ಯಾದವ್ ಅವರನ್ನು ಸೋಲಿಸಿದ್ದರು.
    ರಾಜ್ಯದ ಮಹಿಳಾ ಕಲ್ಯಾಣ ಖಾತೆ ಸಚಿವೆ ಸ್ವಾತಿ ಸಿಂಗ್ ಮತ್ತು ಅವರ ಪತಿ ದಯಾಶಂಕರ್ ಸಿಂಗ್ ಇಬ್ಬರೂ ಕಣ್ಣಿಟ್ಟಿದ್ದ ಬಿಜೆಪಿ ನಗರ ವಿಧಾನಸಭಾ ಕ್ಷೇತ್ರದಿಂದ ಸರೋಜಿನಿ ಅವರಿಗೆ ಟಿಕೆಟ್‌ ನೀಡಲಾಗಿದೆ.
    ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಕಳೆದ ರಾಜ್ಯ ಚುನಾವಣೆಯಲ್ಲಿ ಲಖನೌದ ಒಂಬತ್ತು ಸ್ಥಾನಗಳ ಪೈಕಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದಿತ್ತು.

    VIDEO: ಎಂಟು ಮಂದಿಗೆ ಒಬ್ಬನೇ ಗಂಡ: ಜಗಳವೂ ಇಲ್ಲ, ಗಲಾಟೆಯೂ ಇಲ್ಲ… ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟಾನೆ ಪತಿರಾಯ…

    ಎಸ್‌ಬಿಐ ಸೇರಿದಂತೆ ಕೆಲವು ಬ್ಯಾಂಕ್‌ಗಳ ವಹಿವಾಟು ಬದಲಾವಣೆ: ಆನ್‌ಲೈನ್‌ ಹಣ ವರ್ಗಾವಣೆಗೆ ಶುಲ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts