More

    ಇನ್ಮುಂದೆ ಕಡಿಮೆ ವಯಸ್ಸಿನವರೂ ಮದ್ಯ ಸೇವಿಸ್ಬೋದು: ಕಾನೂನಿಗೆ ತಿದ್ದುಪಡಿ ಮಾಡಿದ ಹರಿಯಾಣ ಸರ್ಕಾರ

    ಚಂಡೀಗಢ: ಇತ್ತೀಚೆಗಷ್ಟೇ ದೆಹಲಿ ಸರ್ಕಾರ ಮದ್ಯಪಾನಿಗಳ ವಯಸ್ಸನ್ನು 25 ವರ್ಷದಿಂದ 21 ವರ್ಷಕ್ಕೆ ಏರಿಕೆ ಇಳಿಕೆ ಮಾಡಿತ್ತು. ಬಹುತೇಕ ಯುವಕರು ಕದ್ದುಮುಚ್ಚಿ ಮದ್ಯ ಸೇವನೆ ಮಾಡುವುದು ನಡೆದೇ ಇದ್ದರೂ ಈಗ ಕಾನೂನುಬದ್ಧವಾಗಿ ದೆಹಲಿಯ 21 ವರ್ಷ ಮೇಲ್ಪಟ್ಟ ಯುವಕರು ಮದ್ಯಸೇವನೆ ಮಾಡಬಹುದಾಗಿತ್ತು. ಇದೇ ಹೆಜ್ಜೆಯನ್ನೀಗ ಚಂಡೀಗಢ ಸರ್ಕಾರವೂ ಇಟ್ಟಿದೆ.

    ಚಳಿಗಾಲದ ಅಧಿವೇಶನದಲ್ಲಿ ಹರಿಯಾಣ ಅಬಕಾರಿ (ತಿದ್ದುಪಡಿ) ಮಸೂದೆ- 2021 ತರಲಾಗಿದ್ದು, ರಾಜ್ಯದಲ್ಲಿ ಮದ್ಯ ಸೇವನೆ ಮತ್ತು ಅದರ ಖರೀದಿ, ಮಾರಾಟದ ಕಾನೂನುಬದ್ಧ ವಯಸ್ಸನ್ನು 25ರಿಂದ 21ಕ್ಕೆ ಇಳಿಸಿದೆ. ಅಬಕಾರಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ದುಷ್ಯಂತ್‌ ಚೌತಾಲ್‌ ಅವರು ಈ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಿದರು.
    ಹಾಲಿ, ಹರಿಯಾಣದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗೆ ಮದ್ಯ ಖರೀದಿಸಲು ಅಥವಾ ಮಾರಾಟ ಮಾಡಲು ಅವಕಾಶವಿರಲಿಲ್ಲ. ಈ ಕಾಯ್ದೆಯ ತಿದ್ದುಪಡಿಯಿಂದಾಗಿ 21 ವರ್ಷ ಮೇಲ್ಪಟ್ಟವರು ಮದ್ಯ ಖರೀದಿಸಲು, ಮಾರಾಟ ಮಾಡಲು ಮತ್ತು ಸೇವನೆಗೆ ಅವಕಾಶ ಕಲ್ಪಿಸಲಾಗಿದೆ.

    ಜನರು ಈಗ ಹೆಚ್ಚು ವಿದ್ಯಾವಂತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕುಡಿಯುವ ವಿಚಾರದಲ್ಲೂ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಮಸೂದೆ ಕಾನೂನು ರೂಪ ಪಡೆದ ಮೇಲೆ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಒಂದು ವೇಳೆ ಇದಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಮದ್ಯಸೇವನೆ, ಮಾರಾಟ, ಖರೀದಿಯಲ್ಲಿ ಪಾಲ್ಗೊಂಡರೆ ಜೈಲು ಅಥವಾ 50 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ.

    ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದಿಂದ 39 ಹುದ್ದೆಗಳಿಗೆ ಆಹ್ವಾನ: ಲಕ್ಷ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts