More

    VIDEO: ಸಾಯುವ ಕೆಲವೇ ಗಂಟೆಗಳ ಮೊದಲು ರಾವತ್‌ ಆಡಿದ್ದ ಮಾತುಗಳ ವಿಡಿಯೋ ಬಿಡುಗಡೆ

    ನವದೆಹಲಿ : ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾಗುವ ಕೆಲವೇ ಗಂಟೆಗಳ ಮುನ್ನ ಅಂದರೆ ಹಿಂದಿನ ದಿನ ಸೇನೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರ ಆಡಿದ ಕೊನೆಯ ಮಾತನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.

    1971 ರ ಯುದ್ಧದ 50 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯ ಅಭಿನಂದನೆ ಮತ್ತು ಹುತಾತ್ಮ ಯೋಧರಿಗೆ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು. ಇಂಡಿಯನ್ ಗೇಟ್ ಕಾಂಪ್ಲೆಕ್ಸ್‌ನಲ್ಲಿ ನಡೆದ ‘ವಿಜಯ್ ಪರ್ವ್’ ಆಚರಣೆಯ ಉದ್ಘಾಟನಾ ಸಮಾರಂಭ ಇದಾಗಿತ್ತು.

    ಇದರಲ್ಲಿ ರಾವತ್‌ ಅವರು, ‘ನಾವು ನಮ್ಮ ಸೇನೆ ಬಗ್ಗೆ ಹೆಮ್ಮೆಪಡುತ್ತೇವೆ, ಒಟ್ಟಿಗೆ ವಿಜಯವನ್ನು ಆಚರಿಸೋಣ’ ಎಂದು ಅವರು ಹೇಳಿದ್ದರು. 93 ಸಾವಿರಕ್ಕೂ ಅಧಿಕ ಪಾಕಿಸ್ತಾನಿ ಸೈನಿಕರು 1971ರ ಡಿಸೆಂಬರ್ 16ರಂದು ಭಾರತೀಯ ಸೇನೆ ಮತ್ತು ’ಮುಕ್ತಿ ಬಹಿನಿ’ ಜಂಟಿ ಪಡೆಗಳ ಮುಂದೆ ಶರಣಾದರು, ಅದು ಬಾಂಗ್ಲಾದೇಶದ ಹುಟ್ಟಿಗೆ ದಾರಿ ಮಾಡಿಕೊಟ್ಟಿತು. ಈ ಶುಭ ಸಂದರ್ಭದ ಹಿನ್ನೆಲೆಯಲ್ಲಿ ನಾನು ಭಾರತೀಯ ಸಶಸ್ತ್ರ ಪಡೆಗಳ ಎಲ್ಲಾ ವೀರ ಸೈನಿಕರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಹೇಳುತ್ತಿದ್ದೇನೆ. ನಾವು 1971 ರ ಯುದ್ಧದ ವಿಜಯದ 50 ನೇ ವಾರ್ಷಿಕೋತ್ಸವವನ್ನು ವಿಜಯ್ ಪರ್ವ್ ಆಗಿ ಆಚರಿಸುತ್ತಿದ್ದೇವೆ ಎಂದು ವಿಡಿಯೊದಲ್ಲಿ ಜನರಲ್ ರಾವತ್ ಹೇಳಿದ್ದಾರೆ.

    ಇದರ 1.09 ನಿಮಿಷಗಳ ವೀಡಿಯೊ ಕ್ಲಿಪ್ ಇದೀಗ ವೈರಲ್‌ ಆಗಿದೆ. ಡಿಸೆಂಬರ್ 7 ರ ಸಂಜೆ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ (ಡಿಸೆಂಬರ್ 8 ರಂದು ಕೂನೂರ್ ಬಳಿ ನಡೆದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ 11 ಮಂದಿ ಯೋಧರ ಜತೆ ರಾವತ್‌ ಅವರೂ ಹುತಾತ್ಮರಾದರು!)

    ಇಲ್ಲಿದೆ ನೋಡಿ ವಿಡಿಯೋ:


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts