More

    ಇಂದು ಇದ್ದೇನೆ… ನಾಳೆ ಗೊತ್ತಿಲ್ಲ… ಹುತಾತ್ಮ ಯೋಧನ ಕೊನೆ ಸಂದೇಶ ಸತ್ಯವಾಗಿಯೇ ಹೋಯ್ತು!

    ಜಲಗಾವ್ (ಮಹಾರಾಷ್ಟ್ರ): ಜಮ್ಮು ಕಾಶ್ಮೀರದ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕ್​ ಉಗ್ರರು ಗುಂಡಿನ ಸುರಿಮಳೆಗೈಯುತ್ತಲೇ ಇದ್ದಾರೆ. ಇದಾಗಲೇ ಹಲವಾರು ಉಗ್ರರನ್ನು ನಮ್ಮ ಯೋಧರು ಹೊಡೆದುರುಳಿಸಿದ್ದರೂ, ದೇಶಕ್ಕಾಗಿ ಹೋರಾಟ ನಡೆಸುತ್ತಲೇ ಉಗ್ರರ ಗುಂಡಿಗೆ ಬಲಿಯಾಗಿ ಹುತಾತ್ಮರಾದವರು ಅದೆಷ್ಟೋ ಮಂದಿ.

    ಇಂಥದ್ದೇ ಒಂದು ಘಟನೆ ನಡೆದಿರುವುದು ಮೊನ್ನೆ ಶುಕ್ರವಾರ. ಶ್ರೀನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ 21 ವರ್ಷದ ಯುವ ಯೋಧ ಯಶ್ ದೇಶ್‌ಮುಖ್. ಇವರು ಮಹಾರಾಷ್ಟ್ರದ ಜಲಗಾವ್ ಜಿಲ್ಲೆಯ ಚಲೀಸ್‌ಗಾಂಬವ್ ತಾಲೂಕಿನವರು.

    ಯಶ್​ ತಮ್ಮ ಸ್ನೇಹಿತನಿಗೆ ಹಿಂದಿನ ದಿನವಷ್ಟೇ ಮಾಡಿದ್ದ ವಾಟ್ಸ್​ಆ್ಯಪ್​ ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿದ ಜನ ಭಾವುಕರಾಗುತ್ತಿದ್ದಾರೆ.

    ಹಿಂದಿನ ದಿನ ಯಶ್​ ಅವರ ಸ್ನೇಹಿತರೊಬ್ಬರು ಹೇಗಿದ್ದಿಯಾ ಎಂದು ಮೇಸೇಜ್​ ಮಾಡಿದ್ದಾರೆ. ಅದಕ್ಕೆ ರಿಪ್ಲೈ ಮಾಡಿರುವ ಯಶ್​, ‘ಇಂದಂತೂ ಚೆನ್ನಾಗಿದ್ದೇನೆ, ಆದರೆ ಯೋಧನ ಜೀವನ ಬಗ್ಗೆ ಏನು ಹೇಳಲು ಬರುವುದಿಲ್ಲ. ಆತ ಇಂದು ಇರುತ್ತಾನೆ ನಾಳೆ ಇರುವುದಿಲ್ಲ ಸೈನಿಕನ ಜೀವನದ ಬಗ್ಗೆ ಏನು ಹೇಳಬೇಕು ಎಂದು ಮೆಸೇಜ್​ ಮಾಡಿದ್ದಾರೆ.
    ಈ ಸಂದೇಶ ಯೋಧ ಯಶ್​ ಜೀವನದ ಕೊನೆಯ ಸಂದೇಶವೇ ಆಗಿಹೋಯಿತು. ಹಿಂದಿನ ದಿನ ಇದ್ದ ಯಶ್​ ಮರುದಿನ ಇರಲಿಲ್ಲ. ಯೋಧರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದರು.

    ಕೇವಲ 21ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣ ಅರ್ಪಿಸಿರುವ ಯಶ್​ ತಂದೆ ತಾಯಿ ಕೃಷಿಕರು. ಮಗನ ನಿಧನದಿಂದ ಕಂಗೆಟ್ಟು ಹೋಗಿದ್ದಾರೆ.

    ಮೊದಲಿನಿಂದಲೂ ಸೇನೆಗೆ ಸೇರುವ ಕನಸು ಕಂಡಿದ್ದ ಯಶ್. ಇದಕ್ಕಾಗಿ ಭಾರೀ ಶ್ರಮಪಟ್ಟಿದ್ದ. ಬೆಳಗಾವಿಯಲ್ಲಿ ನಡೆದ ಸೇನಾ ಭರ್ತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಕೊನೆಗೂ ಮರಾಠಾ ಲೈಟ್ ಇನ್ಫೆಂಟ್ರಿಗೆ ಸೇರ್ಪಡೆಗೊಂಡ ಒಂದೇ ವರ್ಷದಲ್ಲಿ ಹುತಾತ್ಮರಾಗಿರುವುದಾಗಿ ಗ್ರಾಮಸ್ಥರು ನೆನೆಸಿಕೊಳ್ಳುತ್ತಾರೆ. ಅವರ ಅಂತಿಮಯಾತ್ರೆಗೆ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ನಮನ ಸಲ್ಲಿಸಿದರು.

    ಮಗಳಿಗೆ ಆಸೆ ತೋರಿಸಿ ಮತಾಂತರಕ್ಕೆ ಯತ್ನ- ದಾಖಲಾಯ್ತು ಮೊದಲ ಕೇಸ್​

    ಪುಲ್ವಾಮಾ ಮಾದರಿಯಲ್ಲಿಯೇ ಆತ್ಮಾಹುತಿ ದಾಳಿ: ಕನಿಷ್ಠ 30 ಸಾವು

    ಶವಾಗಾರದಲ್ಲಿ ಹೆಣ ಇಡುವಾಗಲೇ ಎದ್ದುಕುಳಿತ ಯುವಕ! ಕಿರುಚಿಕೊಂಡ ವೈದ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts