More

    ಸೇನೆಗೆ ಸೇರುವುದಿದ್ದರೆ ಲೈಂಗಿಕ ಕ್ರಿಯೆ ನಡೆದಿರಬಾರದು ಎಂಬ ವಿಚಿತ್ರ ಆದೇಶಕ್ಕೆ ಕೊನೆಗೂ ಸಿಕ್ತು ಮುಕ್ತಿ!

    ಇಂಡೋನೇಷಿಯಾ: ಮಹಿಳೆಯರು ಸೇನೆಗೆ ಸೇರಬೇಕು ಎಂದರೆ ಅವರು ಕನ್ಯೆಯಾಗಿಯೇ ಇರಬೇಕು, ಅವರು ಎಂದಿಗೂ ಲೈಂಗಿಕ ಕ್ರಿಯೆ ನಡೆಸಿರಬಾರದು ಎಂಬ ವಿಚಿತ್ರ ಆದೇಶವೊಂದು ಇಂಡೋನೇಷಿಯಾದಲ್ಲಿ ಇಲ್ಲಿಯವರೆಗೆ ಚಾಲ್ತಿಯಲ್ಲಿತ್ತು.

    ಸೇನೆ ಸೇರಬಯಸುವ ಹೆಣ್ಣುಮಕ್ಕಳು ಕನ್ಯೆಯಾಗಿಯೇ ಇದ್ದಾಳೆಯೇ ಅಥವಾ ಕನ್ಯಾಪೊರೆ ಹರಿದಿದೆಯೇ ಎಂದು ನೋಡಲು ಕನ್ಯತ್ವ ಪರೀಕ್ಷೆ ನಡೆಯುತ್ತಿತ್ತು. ಯೋನಿಯೊಳಗೆ ಎರಡು ಬೆರಳುಗಳನ್ನು ಬಳಸಿ ವೈದ್ಯರು ಮಹಿಳೆಯರ ಕನ್ಯತ್ವದ ಪರೀಕ್ಷೆ ಮಾಡುತ್ತಿದ್ದ ಅತ್ಯಂತ ಕಠೋರ ಪದ್ಧತಿ ಇಲ್ಲಿಯವರೆಗೆ ನಡೆದುಕೊಂಡು ಬಂದಿತ್ತು.

    ಇದರಿಂದಾಗಿ ಸೇನೆಯಲ್ಲಿ ಸೇರಬೇಕು ಎಂಬ ಇಚ್ಛೆಯಿದ್ದರೂ ಇಂಥದ್ದೊಂದು ಅಸಹ್ಯ ಹುಟ್ಟಿಸುವ ಪರೀಕ್ಷೆಯಿಂದಾಗಿ ಮಹಿಳೆಯರು ಹಿಂಜರಿಯುತ್ತಿದ್ದರು. ಆದರೆ ಇದೀಗ ಎಚ್ಚೆತ್ತುಕೊಂಡಿರುವ ಇಂಡೋನೇಷಿಯಾ ಸರ್ಕಾರ ಈ ಪರೀಕ್ಷೆಯನ್ನು ಕಡ್ಡಾಯ ಮಾಡಿರುವ ಆದೇಶವನ್ನು ರದ್ದು ಮಾಡಿದೆ.

    ಈ ರೀತಿಯ ಪರೀಕ್ಷೆಯು ಯಾವುದೇ ವೈಜ್ಞಾನಿಕ ಮಾನ್ಯತೆಯನ್ನು ಹೊಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಏಳು ವರ್ಷಗಳ ಹಿಂದೆಯೇ ಹೇಳಿತ್ತು. ಆದರೆ ಇದೀಗ ಸರ್ಕಾರ ಎಚ್ಚೆತ್ತುಕೊಂಡಿದೆ. ಮಾನವ ಹಕ್ಕುಗಳ ಸಂಘಟನೆಗಳು ಸೇನಾ ನೇಮಕಾತಿಗೆ ಇಂತಹ ಆಕ್ರಮಣಕಾರಿ ಯೋನಿ ಪರೀಕ್ಷೆಗಳನ್ನು ನಿಷೇಧಿಸಲು ಒತ್ತಾಯಿಸುತ್ತಾ ಬಂದಿದ್ದವು. ಆದರೆ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ ಮಹಿಳಾ ಸಂಘಟನೆಗಳು ಪ್ರತಿರೋಧ ಒಡ್ಡಿದ ಬೆನ್ನಲ್ಲೇ ಮಾನವ ಹಕ್ಕುಗಳ ಆಯೋಗ ಕೂಡ ಮಹಿಳೆಯರ ಪರವಾಗಿ ನಿಂತ ಹಿನ್ನೆಲೆಯಲ್ಲಿ ಈ ಪದ್ಧತಿಯನ್ನು ರದ್ದು ಮಾಡಲಾಗಿದೆ.

    ಬಲವಂತದ ಸಂಭೋಗದಿಂದ ಪಾರ್ಶ್ವವಾಯುವಿಗೆ ತುತ್ತಾದ ಪತ್ನಿ: ಪತಿಗೆ ಹಕ್ಕಿದೆ ಎಂದ ಕೋರ್ಟ್​!

    ಏಳು ಮಕ್ಕಳ ತಂದೆಯ ಪ್ರೀತಿಗೆ ಸಿಲುಕಿದ 19ರ ಯುವತಿ! ಗಂಡ ಬೇಡ ಇವನೇ ಬೇಕು ಎಂದು ಪಟ್ಟು ಹಿಡಿದು ಕೋರ್ಟ್‌ ಮೊರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts