More

    ಆಂಧ್ರದಲ್ಲಿ ಕ್ಷಾಮ ಬಂದಾಗ ಹುಟ್ಟಿಕೊಂಡದ್ದು ಮುಂಬೈನ ಕಾಮಾಟಿಪುರ! 200 ವರ್ಷಗಳ ಇತಿಹಾಸ ಇದಕ್ಕಿದೆ…

    ಮುಂಬೈ: ಸಂಜಯ್ ಲೀಲಾ ಬನ್ಸಾಲಿಯವರ ಬಹು ನಿರೀಕ್ಷಿತ ಚಿತ್ರ ಗಂಗೂಬಾಯಿ ಕಾಥಿಯಾವಾಡಿ ಚಿತ್ರ ಬಿಡುಗಡೆಗೆ ಮುನ್ನವೇ ಭಾರಿ ವಿವಾದದಲ್ಲಿ ಸಿಲುಕಿತ್ತು. ಈ ಚಿತ್ರವನ್ನು ತಡೆಯುವಂತೆ ಕೋರಿ ಹೈಕೋರ್ಟ್​ಗೂ ಹೋಗಲಾಗಿತ್ತು. ಆದರೆ ಹೈಕೋರ್ಟ್​ ಅರ್ಜಿಯನ್ನು ವಜಾ ಮಾಡಿದ ನಂತರ ಇದೇ 25 ರಂದು ಚಿತ್ರ ಬಿಡುಗಡೆಯಾಗಿದೆ.

    ಅಷ್ಟಕ್ಕೂ ಈ ಚಿತ್ರಕ್ಕೆ ಅಷ್ಟೊಂದು ಆಕ್ಷೇಪ ವ್ಯಕ್ತವಾಗಿದ್ದು, ಮುಂಬೈನ ಬಹುದೊಡ್ಡ ರೆಡ್​ಲೈಟ್​ ಏರಿಯಾ ಕಾಮಾಟಿಪುರ ಹಾಗೂ ಕಾಥಿಯಾವಾಡಿಯ ಹೆಸರನ್ನು ಈ ಚಿತ್ರ ಕೆಡಿಸುತ್ತಿದೆ ಎನ್ನುವ ಕಾರಣಕ್ಕೆ. ಬಹಳ ಹಿಂದಿನಿಂದಲೂ ವೇಶ್ಯಾವಾಟಿಕೆಯಿಂದ ಕುಖ್ಯಾತಿ ಪಡೆದಿದ್ದ ಈ ಪ್ರದೇಶದಲ್ಲಿ ಈಗ ಹಲವಾರು ಮಂದಿ ಗೌರವಯುತ ಜೀವನ ನಡೆಸುತ್ತಿದ್ದಾರೆ. ಆದರೆ ಚಿತ್ರದಲ್ಲಿ ಈ ಪ್ರದೇಶವನ್ನು ಕೆಟ್ಟದ್ದಾಗಿ ಬಿಂಬಿಸಲಾಗಿದೆ ಎನ್ನುವುದು ಆರೋಪ.

    ಅಷ್ಟಕ್ಕೂ ಈ ಕಾಮಾಟಿಪುರ ಶುರುವಾದದ್ದು ಹೇಗೆ? ಏನಿದರ ಇತಿಹಾಸ ಎನ್ನುವುದೇ ಕುತೂಹಲದ ವಿಷಯ. ಅಷ್ಟಕ್ಕೂ ಈ ಕಾಮಾಟಿಪುರಕ್ಕೆ ಇರುವುದು 200 ವರ್ಷಗಳ ಇತಿಹಾಸ. ರೆಡ್​ಲೈಟ್ ಏರಿಯಾ ಎಂದು ಹೇಳಿದಾಕ್ಷಣ, ಎಲ್ಲರ ಬಾಯಲ್ಲೂ ಬರುವ ಈ ಕಾಮಾಟಿಪುರದ ಹಿನ್ನೆಲೆ ಏನು ಗೊತ್ತಾ?

    ಸುಮಾರು ಎರಡು ಶತಮಾನಗಳ ಹಿಂದೆ ಆಂಧ್ರಪ್ರದೇಶ ಕ್ಷಾಮದಿಂದ ತತ್ತರಿಸಿತ್ತು. ಆ ಸಂದರ್ಭದಲ್ಲಿ ಜನರು ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ಮುಂಬೈಗೆ ಹೋಗತೊಡಗಿದರು. ಆಗ ಬಹುತೇಕ ಮಂದಿ ಕೆಲಸಕ್ಕಾಗಿ ಒಂದು ಪ್ರದೇಶದಲ್ಲಿ ವಾಸಿಸಿದ್ದರು. ಆ ಪ್ರದೇಶವೇ ಕಾಮಾಟಿಪುರವಾಯಿತು. ಇದಕ್ಕೆ ಕಾರಣವೂ ಇದೆ. ಕಾಮಾಟಿ ಎಂದರೆ ಕಾರ್ಮಿಕರು ಎಂದು ಅರ್ಥ. ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ದುಡಿಯತೊಡಗಿದ ಈ ಶ್ರಮಜೀವಿಗಳಿಂದಾಗಿ ಈ ಪ್ರದೇಶಕ್ಕೆ ಕಾಮಾಟಿಪುರ ಎಂದು ಹೆಸರು ಬಂತು ಎಂದು ವಿವರಿಸುತ್ತಾರೆ ಅಖಿಲ ಪದ್ಮಶಾಲಿ ಸಮಾಜದ ಮುಂಬೈ ಅಧ್ಯಕ್ಷ ಬಲನ್ಸ್​ರಾಯ್​ ಡೊನಾಟುಲಾ.

    ಇದೇ ಕಾರಣಕ್ಕೆ ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುವುದು ತೆಲುಗು ಮಾತನಾಡುವ ಜನ. ಅದೇ ಪ್ರದೇಶದಲ್ಲಿ ಕೆಲವು ಓಣಿಗಳಲ್ಲಿ ಮಾತ್ರ ವೇಶ್ಯಾವಾಟಿಕೆ ನಡೆಯುತ್ತಿತ್ತು. ಗಂಗೂಬಾಯಿ ಎನ್ನುವ ವೇಶ್ಯೆಯೂ ಇದ್ದಳು ಎನ್ನಲಾಗುತ್ತಿದೆ. ಕಾಲ ಕ್ರಮೇಣ ವೇಶ್ಯೆಯರನ್ನು ಹುಡುಕಿ ಬರುವವರು ಹೆಚ್ಚುತ್ತಲೇ ಈ ಚಟುವಟಿಕೆ ಸ್ವಲ್ಪ ಮಟ್ಟಿಗೆ ವಿಸ್ತಾರವೇ ಆಯಿತು. ಆದರೆ ಕಾಮಾಟಿಪುರದಲ್ಲಿ ಹೆಸರಿಗೆ ತಕ್ಕಂತೆ ಶ್ರಮಜೀವಿಗಳು ತುಂಬಿದ್ದಾರೆ. ಆದರೆ ಕಾಮಾಟಿಪುರ ಎಂದರೆ ಅದು ರೆಡ್​ಲೈಟ್​ ಏರಿಯಾ ಎಂದೇ ಬಿಂಬಿತವಾಗತೊಡಗಿತು. ವರ್ಷ ಕಳೆದಂತೆ ಈಗ ಈ ಪ್ರದೇಶದಲ್ಲಿ ವೇಶ್ಯಾವಾಟಿಕೆ ಹಿಂದಿನಷ್ಟು ನಡೆಯುತ್ತಿಲ್ಲ. ಜನರು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ಚಿತ್ರದಿಂದ ಕಾಮಾಟಿಪುರದಲ್ಲಿ ನೆಲೆಸುತ್ತಿರುವ ಜನರ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತಿದೆ ಎನ್ನುವುದು ಇಲ್ಲಿಯವರ ಅಭಿಮತ.

    ಈ ಪ್ರದೇಶದ ಪಕ್ಕದಲ್ಲೆ ಮುಂಬೈ ಮಹಾನಗರ ಪಾಲಿಕೆ ಕಟ್ಟಡವಿದೆ. ಮುಂಬೈನ ಶ್ರೀಮಂತ ವಾಸ್ತುಶಿಲ್ಪವನ್ನು ರೂಪಿಸುವಲ್ಲಿ ಈ ಕಟ್ಟಡ ಪ್ರಮುಖ ಪಾತ್ರ ಇದೆ. ಕಾಮಾಟಿಪುರ ಇಂದು ಸಂಪೂರ್ಣ ಬದಲಾಗಿದೆ, ಬಹುಮಹಡಿ ಕಟ್ಟಡಗಳು ತಲೆ ಎತ್ತುತ್ತಿವೆ. ಶಿಕ್ಷಣದಿಂದ ಜನರು ಪ್ರಗತಿ ಪರರಾಗುತ್ತಿದ್ದಾರೆ. ಆದರೆ ಸಿನಿಮಾ ನೋಡಿದ ಮೇಲೆ ಈ ಏರಿಯಾದಲ್ಲಿ ವಾಸ ಮಾಡಲು ಯಾರು ತಾನೆ ಬರುತ್ತಾರೆ. ಮತ್ತೆ ಇಲ್ಲಿ ಅಭಿವೃದ್ಧಿ ಕಾರ್ಯ ನಿಲ್ಲುತ್ತೆ. ನಮ್ಮ ಮಾನ ಹರಾಜಾಗಿದೆ ಎನ್ನುವುದು ಸ್ಥಳೀಯರ ನೋವು.

    ಗಂಗೂಬಾಯಿ ವೇಶ್ಯೆಯಾಗಿದ್ದಳು. ಆದರೆ ಆಕೆಯ ಬಗ್ಗೆ ಈಗಿನ ಯಾರಿಗೂ ಅರಿವಿಲ್ಲ. ಈಗ ಚಿತ್ರದ ಕಾರಣದಿಂದಾಗಿ, ನಾವು ಕೆಲವು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ ನಿಮ. ಆದರೆ, ಎಲ್ಲವೂ ಚಿತ್ರದಲ್ಲಿ ತೋರಿಸಿರುವಷ್ಟು ನಿಜವೂ ಅಲ್ಲ, ವೈಭವೋಪೇತವೂ ಅಲ್ಲ. ಈ ಚಲನಚಿತ್ರದ ಮೂಲಕ ತಪ್ಪಾದ ಇತಿಹಾಸವನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

    ಹೊರಗಡೆ ಬಾಂಬ್​ ದಾಳಿ- ಒಳಗಡೆ ಮದುವೆ ಸದ್ದು! ಯುದ್ಧ ನಡೆಯುವಾಗಲೇ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ…

    ಸಾವಿನ ಬಾಯಿಗೆ ಹೋಗಿ ಬಂದ ನಾಲ್ಕು ವರ್ಷದ ಕಂದ: 50 ಅಡಿ ಕೊಳವೆ ಬಾವಿಯಲ್ಲಿ ಬಿದ್ದವ ಬದುಕಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts