More

    ಗನ್ ಹಿಡಿದು ಬ್ಯಾಂಕ್‌ ನುಗ್ಗಿದ: ಬೆಚ್ಚಿಬಿದ್ದ ಕಲಬುರಗಿ ಸಿಬ್ಬಂದಿ- ಮುಂದೇನಾಯ್ತು?

    ಕಲಬುರಗಿ: ಗನ್‌ ಹಿಡಿದು ಬ್ಯಾಂಕ್‌ ಒಳಗೆ ನುಗ್ಗಿದ ಕಳ್ಳನೊಬ್ಬ ಕೆಲ ಕಾಲ ಬ್ಯಾಂಕ್‌ನಲ್ಲಿ ಆತಂಕ ಸೃಷ್ಟಿಮಾಡಿರುವ ಘಟನೆ ಕಲಬುರಗಿಯ ಗಂಜ್‌ನಲ್ಲಿ ನಡೆದಿದೆ.

    ಈತನನ್ನು ಸುಲ್ತಾನ್‌ ಎಂದು ಗುರುತಿಸಲಾಗಿದೆ.

    ಇಲ್ಲಿಯ ಐಸಿಐಸಿ ಬ್ಯಾಂಕ್‌ ಒಳಗೆ ಪಾನಮತ್ತನಾಗಿದ್ದ ಈತ ನುಗ್ಗಿದ್ದ. ಖುರ್ಚಿ ರಿಪೇರಿ ಮಾಡಲು ಬಂದಿದ್ದಾಗಿ ಹೇಳಿ, ಸೀದಾ ಡೆಪ್ಯೂಟಿ ಬ್ರ್ಯಾಂಚ್ ಮ್ಯಾನೆಜರ್ ಛೇಂಬರ್‌ಗೆ ಪ್ರವೇಶಿಸಿಬಿಟ್ಟಿದ್ದಾನೆ ಈತ. ಕಂಠಪೂರ್ತಿ ಕುಡಿದು ಓಲಾಡುತ್ತಿದ್ದ ಈತನ ನಡವಳಿಕೆಯಿಂದ ಅನುಮಾನಗೊಂಡ ಬ್ಯಾಂಕ್ ಮ್ಯಾನೇಜರ್ ಆತನಿಗೆ ತಿಳಿಯದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಯಾವುದೇ ಚೇರ್ ರಿಪೇರಿ ಇಲ್ಲ ಎಂದರೂ ಓಲಾಡುತ್ತಿದ್ದ ಅವನನ್ನು ಕಂಡು ಅವರು ಪೊಲೀಸರಿಗೆ ಕರೆ ಮಾಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಂದಾಗ ಆತ ತಂದಿದ್ದು, ನಕಲಿ ಗನ್‌ ಎಂದು ತಿಳಿದಿದೆ. ಕುಡಿದ ಅಮಲಿನಲ್ಲಿದ್ದ ಅವನಿಗೆ ಗನ್‌ ಹಿಡಿಯಲೂ ಶಕ್ತಿ ಇಲ್ಲದ್ದನ್ನು ಗಮನಿಸಿದ ಈತನಿಗೆ ಪೊಲೀಸರು ಲಾಠಿಯಿಂದ ಚೆನ್ನಾಗಿ ಥಳಿಸಿದ ಮೇಲೆ ಬಿಡ್ರಪ್ಪೋ ಎಂದು ಕಿರುಚಿಕೊಂಡಿದ್ದಾರೆ.

    ಇದನ್ನೂ ಓದಿ: ಕಳ್ಳನ ಕಾಲಿಗೆ ಗುಂಡು ಹಾರಿಸಿ ಬಂಧನ, 12ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ

    ನಂತರ ಈತ ದರೋಡೆಕೋರನಲ್ಲ, ತಂದದ್ದು ಅಸಲಿ ಪಿಸ್ತೂಲ್ ಅಲ್ಲ ಎಂದು ತಿಳಿದ ನಂತರ ಜನರು ನಿಟ್ಟುಸಿರುಬಿಟ್ಟಿದ್ದಾರೆ.
    ನಂತರ ಈತ ತಾನು ಕಲಬುರ್ಗಿಯ ಮಿಜಗುರಿ ನಿವಾಸಿ ಸುಲ್ತಾನ್‌ ಎಂದು ಹೇಳಿದ್ದಾನೆ. ತಪ್ಪಾಗಿದೆ, ಕ್ಷಮಿಸಿ ಎಂದು ಅವಲತ್ತುಕೊಂಡಿದ್ದಾನೆ.

    ಪೊಲೀಸರು ಠಾಣೆಗೆ ಕರೆದೊಯ್ದು, ಆತನ ಕುಟುಂಬದ ಸದಸ್ಯರನ್ನು ಕರೆಯಿಸಿ ಮುಚ್ಚಳಿಕೆ ಬರೆಯಿಸಿಕೊಂಡ ನಂತರ ಬಿಡುಗಡೆ ಮಾಡಿದ್ದಾರೆ. ಪೊಲೀಸರು ಲಾಠಿ ರುಚಿ ತೋರಿಸೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇಡ್ಲಿ ಪಾಲಿಟಿಕ್ಸ್‌! ಅಮೆರಿಕದ ಚುನಾವಣೆಯಲ್ಲಿ ಗೆಲ್ಲಲು ಭಾರತದ ಇಡ್ಲಿ ನೆನಪು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts