More

    ಇಂಜಿನಿಯರಿಂಗ್‌ ಪದವೀಧರರಾ? ಬಿಇಎಲ್‌ನಲ್ಲಿವೆ 23 ಹುದ್ದೆಗಳು- 1.20 ಲಕ್ಷ ರೂ.ವರೆಗೆ ಸಂಬಳ

    ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ (ಬಿಇಎಲ್​) ನವರತ್ನ ಸಂಸ್ಥೆಗಳಲ್ಲಿ ಒಂದಾಗಿದೆ. ಬಿಇಎಲ್​ನ ಬೆಂಗಳೂರು ಕೇಂದ್ರದಲ್ಲಿ ಆರಂಭಿಸುತ್ತಿರುವ NAVAL Systems (S&CS) ಯೋಜನೆಗೆ 15 ಪ್ರಾಜೆಕ್ಟ್​ ಇಂಜಿನಿಯರ್​ಗಳನ್ನು ಹಾಗೂ 8 ಸೀನಿಯರ್​ ಅಸಿಸ್ಟೆಂಟ್​ ಇಂಜಿನಿಯರ್​ಗಳನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಯು ಕನಿಷ್ಠ 2 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಗರಿಷ್ಠ 4 ವರ್ಷಕ್ಕೆ ಅವಧಿ ವಿಸ್ತರಿಸಬಹುದಾಗಿದೆ. ಕಾರ್ಯಕ್ಷೇತ್ರ ಬೆಂಗಳೂರೇ ಆಗಿರಲಿದೆ.

    * ಪ್ರಾಜೆಕ್ಟ್​ ಇಂಜಿನಿಯರ್ಸ್​ – 15
    ಸಾಮಾನ್ಯವರ್ಗ, ಒಬಿಸಿ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿ ಕಮ್ಯುನಿಕೇಷನ್​/ ಟೆಲಿಕಮ್ಯುನಿಕೇಷನ್​/ ಮೆಕಾನಿಕಲ್​ನಲ್ಲಿ ಪೂರ್ಣಾವಧಿಯ ಬಿಇ/ ಬಿ.ಟೆಕ್​/ ಬಿಎಸ್ಸಿ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಸಾಕು. ವ್ಯಾಸಂಗದ ಬಳಿಕ ಕನಿಷ್ಠ 2 ವರ್ಷ ವೃತ್ತಿ ಅನುಭವ ಹೊಂದಿರಬೇಕು.

    1.3.2022ಕ್ಕೆ ಅನ್ವಯವಾಗುವಂತೆ ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ. ಮೊದಲ ವರ್ಷ ಮಾಸಿಕ 40,000 ರೂ, 2ನೇ ವರ್ಷ 45,000 ರೂ., 3 ಮತ್ತು 4ನೇ ವರ್ಷಕ್ಕೆ ಕ್ರಮವಾಗಿ 50 ಹಾಗೂ 55 ಸಾವಿರ ರೂ. ವೇತನ ಇರುತ್ತದೆ. ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ಇದೆ.

    ಅಧಿಸೂಚನೆಗೆ: https://bit.ly/3CqLCJb


    * ಸೀನಿಯರ್​ ಅಸಿಸ್ಟೆಂಟ್​ ಇಂಜಿನಿಯರ್​ – 8
    ಬಿಇಎಲ್​ನ ಬೆಂಗಳೂರು ಘಟಕದಲ್ಲಿ ಕೆಲಸ ನಿರ್ವಹಿಸಲು ನೌಕಾಪಡೆಯ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಜೆಸಿಒ ರ‍್ಯಾಂಕಿಂಗ್​ ಆಧಾರದಲ್ಲಿ 5 ವರ್ಷದ ನಿರ್ದಿಷ್ಟ ಅವಧಿಗೆ 8 ಸೀನಿಯರ್​ ಅಸಿಸ್ಟೆಂಟ್​ ಇಂಜಿನಿಯರ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿ ಕಮ್ಯುನಿಕೇಷನ್​/ ಟೆಲಿಕಮ್ಯುನಿಕೇಷನ್​/ ಕಮ್ಯುನಿಕೇಷನ್​ನಲ್ಲಿ ಡಿಪ್ಲೊಮಾ ಮಾಡಿದ್ದು, ವೃತ್ತಿ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 30,000-1,20,000 ರೂ. ವೇತನ ಹಾಗೂ ಇತರ ಭತ್ಯೆ ನೀಡಲಾಗುವುದು. ಗರಿಷ್ಠ 50 ವರ್ಷ ವಯೋಮಿತಿ ಇದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ. ಆಸಕ್ತ ಅಭ್ಯರ್ಥಿಗಳು Sr.DGM (HR), Naval Systems SBU, Bharat Electronics Ltd, Jalahalli post, Bangalore – 560 013 ವಿಳಾಸಕ್ಕೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

    ಅಧಿಸೂಚನೆಗೆ: https://bit.ly/3KdbACr


    ಅರ್ಜಿ ಸಲ್ಲಿಸಲು ಕೊನೇ ದಿನ: 23.3.2022
    ಮಾಹಿತಿಗೆ: http://www.bel-india.in

    ಕ್ರೀಡಾ ಪ್ರಾಧಿಕಾರದಲ್ಲಿದೆ 28 ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳು: ಎರಡು ಲಕ್ಷ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts