More

    ಪುನಃ ಸಿಡಿ ಸಂಕಷ್ಟದಲ್ಲಿ ಜಾರಕಿಹೊಳಿ! ವರದಿ ಸಲ್ಲಿಕೆಗೆ ಕೋರ್ಟ್‌ ಅನುಮತಿ, ಶೀಘ್ರದಲ್ಲೇ ‘ಭವಿಷ್ಯ’ ನಿರ್ಧಾರ

    ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚನ ಸೃಷ್ಟಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಿ.ಡಿಯನ್ನು ಬಹಿರಂಗ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತನಿಖಾ ವರದಿ ಸಲ್ಲಿಸಲು ತನಿಖಾ ತಂಡ ಎಸ್ಐಟಿಗೆ ಹೈಕೋರ್ಟ್ ಅನುಮತಿ ನೀಡಿದೆ.

    ಒಂದು ಗಂಟೆಗೂ ಅಧಿಕ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರನ್ನು ಒಳಗೊಂಡ ನ್ಯಾಯಪೀಠವು ಎಸ್ಐಟಿಗೆ ಅಂತಿಮ ವರದಿ ಸಲ್ಲಿಸಲು ಅನುಮತಿ ನೀಡಿದೆ. ಸಕ್ಷಮ ಮ್ಯಾಜಿಸ್ಟ್ರೇಟ್ ಮುಂದೆ ತನಿಖಾ ವರದಿ ಸಲ್ಲಿಸಲು ಅನುಮತಿ ನೀಡಲಾಗಿದೆ. ಅಂತಿಮ ವರದಿ ಸಲ್ಲಿಕೆಗೆ ಅವಕಾಶ ಕೋರಿ ಎಸ್ಐಟಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್‌ ಪುರಸ್ಕರಿಸಿದೆ. ಯುವತಿ ದೂರಿಗೆ ಸಂಬಂಧಿಸಿದ ತನಿಖೆ ಮುಕ್ತಾಯವಾಗಿದೆ. ಹೀಗಾಗಿ ಅಂತಿಮ ವರದಿ ಸಲ್ಲಿಕೆಗೆ ಅನುಮತಿ ಕೋರುತ್ತಿದ್ದೇವೆ ಎಂದು ಎಸ್ಐಟಿ ಪರ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದ್ದರು.

    ಹಾಗಾಗಿ ಇದೀಗ ಎಸ್ಐಟಿ ವಿಚಾರಣಾ ನ್ಯಾಯಾಲಯದಲ್ಲಿ ಯಾವ ರೀತಿಯ ವರದಿ ಸಲ್ಲಿಸಲ್ಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಸದ್ಯದಲ್ಲಿಯೇ ಜಾರಕಿಹೊಳಿ‌ ಭವಿಷ್ಯ ನಿರ್ಧಾರವಾಗಲಿದೆ. ತನ್ನನ್ನು ಶಾಸಕರು ಬಳಸಿಕೊಂಡಿದ್ದಾರೆ ಎಂಬುದಾಗಿ ಯುವತಿ ಮಾಡಿರುವ ಆರೋಪ ಸಾಬೀತಾಗದಿದ್ದರೆ ಪೊಲೀಸರು ‘ಬಿ‘ ರಿಪೋರ್ಟ್ ನೀಡುತ್ತಾರೆ. ಹೀಗಾದರೆ ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗುತ್ತಾರೆ. ಆದರೆ ಆರೋಪದಲ್ಲಿ ಹುರುಳು ಇದೆ ಎಂದೇನಾದರೂ ಸಾಬೀತಾಗಿ ಚಾರ್ಜ್‌ಶೀಟ್ ಸಲ್ಲಿಸಿದರೆ ಅವರ ರಾಜಕೀಯ ಭವಿಷ್ಯಕ್ಕೆ ಕುತ್ತು ಬರಬಹುದು. ಹೀಗಾಗಿ ಸದ್ಯಕ್ಕೆ ಅಂತಿಮ ವರದಿಯು ರಮೇಶ್ ಭವಿಷ್ಯವನ್ನು ತೀರ್ಮಾನಿಸುತ್ತದೆ.

    ಆರೋಪಿ ಜಾರಕಿಹೊಳಿ ಅವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸರ್ಕಾರದ ಬದಲು ಪೊಲೀಸ್ ಆಯುಕ್ತರು ಎಸ್ಐಟಿ ರಚಿಸಿದ್ದಾರೆ. ಪೊಲೀಸ್ ಆಯುಕ್ತರಿಗೆ ಎಸ್ಐಟಿ ರಚಿಸುವ ಅಧಿಕಾರವಿಲ್ಲ. ಹೀಗಾಗಿ ಈ ಎಸ್ಐಟಿ ಅಂತಿಮ ವರದಿ ಸಲ್ಲಿಸಬಾರದು ಅಂತ ಯುವತಿ ಪರ ಹಿರಿಯ ವಕೀಲರು ವಾದ ಮಂಡಿಸಿದ್ದರು.

    ಗಂಡ ಸ್ಮಾರ್ಟ್‌ ಇದ್ದಾನೆ, 2 ವರ್ಷಕ್ಕೆ ಇಬ್ಬರು ಮಕ್ಕಳಾಗಿವೆ… ಖರೀದಿಗೆ ಸಂಪರ್ಕಿಸಿ… ಪತಿಯನ್ನು ಹರಾಜಿಗಿಟ್ಟ ಪತ್ನಿ!

    VIDEO: ತರಕಾರಿ ಖರೀದಿಗೆ ಬಂದವರ ಮೇಲೆ ಬಿದ್ದ ವಿದ್ಯುತ್ ತಂತಿ! ನೋಡನೋಡುತ್ತಿದ್ದಂತೆಯೇ ಸುಟ್ಟುಹೋದ 30 ಮಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts