More

    ಮೂಟೆ ಮೂಟೆಗಳಲ್ಲಿ ಸಾಗ್ತಿದೆ ತಲೆಗೂದಲು! ಗಡಿ ಭದ್ರತಾ ಪಡೆಗಳಿಗೆ ಶುರುವಾಗಿದೆ ತಲೆನೋವು

    ಕೋಲ್ಕತಾ: ಮಾನವ ಕಳ್ಳಸಾಗಣೆ ಮಾಡುತ್ತಿರುವುದು ತೀರಾ ಹಳೆಯ ವಿಷಯವಾಗಿದೆ. ಇದೀಗ ಮನುಷ್ಯದ ತಲೆಗೂದಲಿಗೆ ವಿದೇಶಗಳಲ್ಲಿ ಅದರಲ್ಲಿಯೂ ಚೀನಾದಲ್ಲಿ ಭಾರಿ ಬೇಡಿಕೆ ಇದ್ದು, ಇದರ ಕಳ್ಳಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ತಪ್ಪಿಸುವುದು ಗಡಿ ಭದ್ರತಾ ಪಡೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

    ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಮಾನವ ಕೂದಲು ಕಳ್ಳಸಾಗಣೆ ಹೆಚ್ಚಾಗುತ್ತಿದೆ.ಈ ಒಂದು ವರ್ಷದಲ್ಲಿ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 400 ಕೆಜಿಗೂ ಹೆಚ್ಚು ಕೂದಲನ್ನು ವಶಪಡಿಸಿಕೊಳ್ಳಲಾಗಿದೆ.

    ಉದ್ದ ಕೂದಲು ಹೊಂದಿರುವ ಮಹಿಳೆಯರು ತಲೆ ಬಾಚಿದ ನಂತರ ಉದುರುವ ಕೂದಲಿನ ಎಳೆಗಳನ್ನು ಬಿಸಾಡುತ್ತಾರೆ. ಚಿಂದಿ ಆಯುವವರು ಮತ್ತು ಮನೆಮನೆಗೆ ಹೋಗಿ ಕೂದಲು ಸಂಗ್ರಹ ಮಾಡುವವರು ಹಲವಾರು ಸಂಖ್ಯೆಯಲ್ಲಿ ಇದ್ದಾರೆ. ಅವುಗಳಿಂದ ವಿಗ್‌ ತಯಾರು ಮಾಡಲಾಗುತ್ತದೆ. ವಿಗ್‌ಗೆ ಸಿಕ್ಕಾಪಟ್ಟೆ ಬೇಡಿಕೆ ಇರುವ ಕಾರಣ, ಈ ಪರಿಯಾಗಿ ಕೂದಲಿಗೆ ಡಿಮಾಂಡ್‌ ಇದ್ದು, ಕಳ್ಳಸಾಗಣೆ ಮೂಲಕ ಸಾಗಿಸಲಾಗುತ್ತಿದೆ. ವಿಗ್‌ ತಯಾರು ಮಾಡುವ ಮುನ್ನ ಅದನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಸಂಸ್ಕರಿಸಲಾಗುತ್ತದೆ. ಸಂಸ್ಕರಿಸಿದ ಕೂದಲು ಮತ್ತು ವಿಗ್‌ಗಳನ್ನು ಮುಖ್ಯವಾಗಿ ಚೀನಾಕ್ಕೆ ರಫ್ತು ಮಾಡಲಾಗುತ್ತದೆ. ಆದರೆ ಇದೀಗ ಕಳ್ಳಸಾಗಣೆ ಹೆಚ್ಚಾಗಿದ್ದು, ಅದನ್ನು ತಡೆಯುವುದೇ ತಲೆನೋವಾಗಿದೆ ಎನ್ನುತ್ತಾರೆ ಬಿಎಸ್‌ಎಫ್‌ ಸಿಬ್ಬಂದಿ.

    ಆರು ಇಂಚುಗಳಿಗಿಂತ ಕಡಿಮೆ ಉದ್ದ ಇರುವ ಸಂಸ್ಕರಿಸಲಾಗುವುದಿಲ್ಲ ಮತ್ತು ಸಾಮಾನ್ಯವಾಗಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗೆ ಅಗ್ಗದ ದರದಲ್ಲಿ ರಫ್ತು ಮಾಡಲಾಗುತ್ತದೆ. ಬಾಂಗ್ಲಾದೇಶದಲ್ಲಿ ನವಗಾವ್, ಕುಷ್ಠಿಯಾ, ರಾಜ್‌ಶಾಹಿ, ದಿನಾಜ್‌ಪುರ ಮುಂತಾದವೆಡೆ ಬಹಳಷ್ಟು ಕೂದಲು ಸಂಸ್ಕರಣಾ ಕಾರ್ಖಾನೆಗಳಿವೆ. ಗಾತ್ರ ಮತ್ತು ಗುಣಮಟ್ಟದ ಆಧಾರದ ಮೇಲೆ ಮಾನವ ಕೂದಲು ಪ್ರತಿ ಕೆಜಿಗೆ 5 ಸಾವಿರದಿಂದ 10 ಸಾವಿರ ರೂಪಾಯಿವರೆಗೆ ಸಿಗುತ್ತದೆ. ಶೇಕಡ 90ರಷ್ಟು ಕೂದಲು ಚೀನಾಕ್ಕೆ ಹೋದರೆ ಇನ್ನುಳಿದವು ಯುಎಇ ಮತ್ತು ಮಲೇಷ್ಯಾಕ್ಕೆ ಹೋಗುತ್ತದೆ. ಚಿಕ್ಕದಾದ ಕೂದಲನ್ನು ಪುರುಷರಿಗೆ ಕೂದಲು ಕಸಿ ಮಾಡಲು ಮತ್ತು ಕೃತಕ ಆಟಿಕೆಗಳನ್ನು ತಯಾರಿಸಲು ಬಳಸಲಾಗುತ್ತದೆ.

    ಕಳೆದ ವರ್ಷ ಕನಿಷ್ಠ 397 ಕಿಲೋ ಕೂದಲನ್ನು ವಶಪಡಿಸಿಕೊಳ್ಳಲಾಗಿದೆ. ಫೆಬ್ರವರಿ ತಿಂಗಳೊಂದರಲ್ಲಿಯೇ ನಾಡಿಯಾ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸುಮಾರು 12 ಕೆಜಿ ಮಾನವ ಕೂದಲು ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಲಾಯಿತು. ಈ ವರ್ಷದ ಆರಂಭದಿಂದ ಈ ಎರಡು ತಿಂಗಳಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 47 ಕೆಜಿ ಕೂದಲನ್ನು ವಶಪಡಿಸಿಕೊಳ್ಳಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಬಿಎಸ್‌ಎಫ್‌ನ ದಕ್ಷಿಣ ಬಂಗಾಳ ಗಡಿಭಾಗದ ಡಿಐಜಿ ಎಸ್‌ಎಸ್ ಗುಲೇರಿಯಾ, ದಕ್ಷಿಣ ಬಂಗಾಳದ ನಾಡಿಯಾ ಜಿಲ್ಲೆಯ ತೆಹಟ್ಟಾದಲ್ಲಿ ಮಾರ್ಚ್ 3 ರಂದು 10 ಚೀಲಗಳಲ್ಲಿ ತುಂಬಿದ ಸುಮಾರು 38 ಕೆಜಿ ಮಾನವ ಕೂದಲನ್ನು ವಶಪಡಿಸಿಕೊಳ್ಳಲಾಗಿದೆ. ದೇಶದಾದ್ಯಂತ ಚಿಂದಿ ಆಯುವವರು ಸಂಗ್ರಹಿಸಿದ ಟನ್‌ಗಟ್ಟಲೆ ಕೂದಲು, ಏಜೆಂಟ್‌ಗಳು ಮತ್ತು ಮಧ್ಯವರ್ತಿಗಳ ಮೂಲಕ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ಗೆ ತಲುಪುತ್ತದೆ ಎಂದಿದ್ದಾರೆ.

    ‘ವಾರದಲ್ಲೇ ನೀನು ಫಿನಿಷ್‌, ನಿನ್ನ ತಾಯಿ ಪತಿವ್ರತೆ ಆಗಿದ್ರೆ ತಪ್ಪಿಸು ನೋಡುವ…’ ವಿದ್ಯಾರ್ಥಿಗೆ ವಿದೇಶಗಳಿಂದ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts