More

    ರಸ್ತೆ ನಡುವೆಯೇ ಗುಂಡುಹಾರಿಸಿ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು- ಐವರು ಅರೆಸ್ಟ್‌

    ಹುಬ್ಬಳ್ಳಿ: ಕಳೆದ ವಾರ ಇಡೀ ಹುಬ್ಬಳ್ಳಿ ನಗರಿಯನ್ನೇ ಬೆಚ್ಚಿಬೀಳಿಸಿದ್ದ ಶೂಟ್‌ಔಟ್‌ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮಗನ ಮದುವೆ ಮುಗಿಸಿ ಬರುತ್ತಿದ್ದ ಧಾರವಾಡ ಫ್ರೂಟ್ ಇರ್ಫಾನ್ ಎನ್ನುವ ರೌಡಿಶೀಟರ್ ಹತ್ಯೆ ಪ್ರಕರಣ ಇದಾಗಿದೆ. ಸಿನಿಮೀಯ ರೀತಿಯಲ್ಲಿ ರಸ್ತೆಯ ನಡುವೆಯೇ ಇರ್ಫಾನ್‌ನನ್ನು ಹತ್ಯೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ.

    ಗುಂಡು ಹಾರಿಸಿದ್ದ ಧಾರವಾಡದ ಅಫ್ತಾಬ್ ಬೇಪಾರಿ, ಡಿಯೋ ಚಲಾಯಿಸಿದ ತೌಸೀಫ್, ಕಾರು ಚಾಲನೆ ಮಾಡಿದ್ದ ಅಮೀರ್ ತಮಟಗಾರ, ಆರೋಪಿಗಳಿಗೆ ಹಣ ನೀಡಿದ್ದನೆನ್ನಲಾಗಿರುವ ಮೊಹೀನ್ ಪಟೇಲ್ ಹಾಗೂ ಇನ್ನೊಬ್ಬ ಅತಿಯಾಬಖಾನ್ ತಡಕೋಡ ನನ್ನು ಬಂಧಿಸಲಾಗಿದೆ.

    ಇರ್ಫಾನ್ ಮೇಲೆ ಗುಂಡು ಹಾರಿಸಿದವರು ಮುಂಬೈನಿಂದ ಬಂದಿದ್ದ ಬಾಡಿಗೆ ಹಂತಕರು ಎನ್ನಲಾಗಿದೆ. ಅವರು ಪರಾರಿಯಾಗಿದ್ದು, ಅವರನ್ನು ಹಿಡಿಯಲು ಶೋಧ ಮುಂದುವರಿದಿದೆ.

    ಮೂಲತಃ ಉತ್ತರಕನ್ನಡ ಜಿಲ್ಲೆಯ ಇರ್ಫಾನ್ ಹೊಟ್ಟೆಪಾಡಿಗಾಗಿ ಧಾರವಾಡಕ್ಕೆ ಬಂದು ಅಲ್ಲಿಯೇ ನೆಲೆಯೂರಿ ತನ್ನ ಅಪರಾಧ ಜಗತ್ತನ್ನು ವಿಸ್ತಾರ ಮಾಡಿಕೊಮಡಿದು ಡಾನ್ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈತ ನಾಲ್ಕು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದ. ಈ ಹಿನ್ನೆಲೆಯಲ್ಲಿ ರೌಡಿ ಷೀಟರ್‌ ಪಟ್ಟಿಯಲ್ಲಿ ಈತನ ಹೆಸರು ಇದೆ. ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಇವರನ್ನು ಪೊಲೀಸ್ ಆಯುಕ್ತ ಆರ್.ದಿಲೀಪ್​​​​ ಧಾರವಾಡದಿಂದ ಗಡಿಪಾರು ಮಾಡಿದ್ದರು.

    ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆಗೆ ಟ್ವಿಸ್ಟ್‌: ಕಿಡಿಕೇಡಿಗಳ ಫೋನ್‌ ಕಾಲ್‌ ನೋಡಿ ಪೊಲೀಸರೇ ದಂಗು!

    ಮಗನ ಮದುವೆ ಮುಗಿಸಿ ಅತಿಥಿಗಳನ್ನು ಕಳುಹಿಸಲು ರಸ್ತೆ ಬದಿಯಲ್ಲಿ ಬಂದು ನಿಂತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ಗುಂಡಿನ ಮಳೆಗರೆದಿದ್ದರು. ಇರ್ಫಾನ್ ಇಂದು ತಮ್ಮ ಮಗನ ಮದುವೆ ನಂತರ ಕಲ್ಯಾಣ ಮಂಟಪದ ಹೊರಗೆ ಬೀಗರಿಗೆ ಬೀಳ್ಕೊಡುಗೆ ನೀಡುತ್ತಿದ್ದ. ಈ ವೇಳೆ ಗುಂಡಿನ ದಾಳಿ ನಡೆದಿತ್ತು.

    ಹತ್ಯೆಗೈದು ಪರಾರಿಯಾಗಲು ನೆರವಾದ ಸ್ಥಳೀಯ ತಂಡಕ್ಕೆ ಮೊಮಿನ್ 3 ಲಕ್ಷ ರೂ. ಹಾಗೂ ಮುಂಬೈನಿಂದ ಬಂದಿದ್ದ ಹಂತಕರಿಗೆ 5 ಲಕ್ಷ ರೂ.ಗಳನ್ನು ನೀಡಿದ್ದನು ಎಂದು ಹೇಳಲಾಗಿದೆ. ಕೃತ್ಯಕ್ಕೆ ಬಳಕೆಯಾಗಿದ್ದ 2 ಬೈಕ್ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

    ಗಣೇಶನ ಮೂರ್ತಿಗಳನ್ನು ಎತ್ತಿಎತ್ತಿ ಒಡೆದಳು: ‘ಗುಡ್‌ ಜಾಬ್‌’ ಎಂದ ಕೆಲ ಕಮೆಂಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts