More

    10 ದಿನ ದಸರಾ ರಜೆ, ಮೇನಲ್ಲಿ ಬೇಸಿಗೆ ರಜೆ: ಇದರ ಸಂಪೂರ್ಣ ವಿವರ ಇಲ್ಲಿದೆ…

    ಬೆಂಗಳೂರು: ಕರೊನಾ ಭೀತಿಯ ನಡುವೆಯೂ ಇದೀಗ ಭೌತಿಕ ತರಗತಿಗಳು ಆರಂಭವಾಗಿವೆ. 9, 10 ನೇ ತರಗತಿ ಕಳೆದ 23ರಿಂದಲೇ ಆರಂಭವಾಗಿದ್ದರೆ, ಇದೀಗ 6 ರಿಂದ 8ನೇ ತರಗತಿ ಶುರುವಾಗಿದೆ.
    ಇದರ ಬೆನ್ನಲ್ಲೇ ದಸರಾ ಹಬ್ಬ ಶುರುವಾಗಿದೆ. ತರಗತಿಗಳು ಆರಂಭವಾಗಿರುವುದು ವಿಳಂಬ ಆಗಿರುವ ಕಾರಣ, ದಸರಾ ರಜೆ ಮತ್ತು ಬೇಸಿಗೆ ರಜೆಗಳನ್ನು ಕೊಡುತ್ತಾರೋ ಇಲ್ಲವೋ ಎಂಬ ಗೊಂದಲದಲ್ಲಿ ವಿದ್ಯಾರ್ಥಿಗಳು ಇದ್ದರು. ಇದೀಗ ಅವರಿಗೆ ಖುಷಿ ನೀಡುವ ಸುದ್ದಿಯನ್ನು ಸರ್ಕಾರ ಘೋಷಿಸಿದೆ.

    ಅದೇನೆಂದರೆ, ದಸರಾ ಮತ್ತು ಬೇಸಿಗೆ ರಜೆಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಕಾರ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜುಲೈ 2021 ರಿಂದ ಏಪ್ರಿಲ್ 2022 ರ ವರೆಗೆ 304 ದಿನಗಳು ಲಭ್ಯವಿದ್ದು, 66 ರಜೆ ದಿನಗಳಿವೆ. ಉಳಿದ 238 ದಿನಗಳಲ್ಲಿ 4 ಸ್ಥಳೀಯ ರಜೆ, ದಸರಾ ರಜೆ ಹೊರತಾಗಿ 223 ಶಾಲಾ ಕರ್ತವ್ಯದ ದಿನಗಳು ಕಲಿಕೆ, ಬೋಧನಾ ಪ್ರಕ್ರಿಯೆಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿವೆ.

    ರಜೆ ಹೀಗಿದೆ:
    ಅಕ್ಟೋಬರ್ 10 ರಿಂದ 10 ದಿನಗಳ ಕಾಲ ಅಂದರೆ ಅ.20ರವರೆಗೆ 1ರಿಂದ 10ನೇ ತರಗತಿಯ ಮಕ್ಕಳಿಗೆ ದಸರಾ ರಜೆ ನೀಡಲಾಗಿದೆ. ಇದು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ, ಅನುದಾನರಹಿತ ಶಾಲೆಗಳಿಗೆ ಅನ್ವಯ ಆಗಲಿದೆ.

    ಅದೇ ರೀತಿ, 2022ರ ಮೇ 1 ರಿಂದ 28 ರವರೆಗೆ ಬೇಸಿಗೆ ರಜೆ ಇರಲಿದೆ.

    10 ದಿನ ದಸರಾ ರಜೆ, ಮೇನಲ್ಲಿ ಬೇಸಿಗೆ ರಜೆ: ಇದರ ಸಂಪೂರ್ಣ ವಿವರ ಇಲ್ಲಿದೆ...

    ಮಂಟಪದಲ್ಲಿ ಮದುಮಗಳ ಮುಸುಕು ತೆಗೆದು ಬೆಚ್ಚಿಬಿದ್ದ ವರ: ಆತ ಓಡದಂತೆ ಧೋತಿ ಬಿಚ್ಚಿದ ವಧು!

    VIDEO: ಮೊಟ್ಟೆಯ ಬದಲು ಊಸರವಳ್ಳಿಗೆ ಹುಟ್ಟಿತು ಮರಿ- ಕುತೂಹಲದ ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts