More

    ಇದೆಂಥ ಹೋಳಿ ಹಬ್ಬ? ಬಣ್ಣದ ಬದಲು ಪರಸ್ಪರ ಚಪ್ಪಲಿ ಎಸೆದುಕೊಂಡರು! ವಿಡಿಯೋ ವೈರಲ್

    ಪಟ್ನಾ (ಬಿಹಾರ): ದೇಶಾದ್ಯಂತ ಇಂದು ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಕೆಲವು ಪ್ರಾಂತ್ಯಗಳಲ್ಲಿ ಈ ಆಟದ ಮಜವೇ ಬೇರೆ. ವಯಸ್ಸಿನ ಹಂಗು ಇಲ್ಲದೇ ಎಲ್ಲಾ ವಯೋಮಾನದವರೂ ಈ ಹಬ್ಬವನ್ನು ಖುಷಿಯಿಂದ ಆಚರಿಸುತ್ತಾರೆ.

    ಹೋಳಿ ಎಂದಾಕ್ಷಣ ನೆನಪಾಗುವುದು ಬಣ್ಣ. ಬಣ್ಣದ ಓಕುಳಿ ಎರಚಿ ಸಂಭ್ರಮಿಸುವ ಪರಿಪಾಠ ಹಲವೆಡೆ ಇದೆ. ಆದರೆ ಇಷ್ಟೇ ಅಲ್ಲದೇ ಕೆಲವೆಡೆ ಹೂವುಗಳನ್ನು ಮಣ್ಣನ್ನು ಎರೆಚಿ ಹಬ್ಬ ಆಚರಿಸುವುದು ಇದೆ.

    ಆದರೆ ಪಾಟ್ನಾದ ಸಂಪತ್ಚಾಕ್​ನಲ್ಲಿ ಮಾತ್ರ ಅಚ್ಚರಿ ಎನಿಸುವಂತೆ ಹೋಳಿ ಹಬ್ಬ ಆಚರಿಸಲಾಗಿದೆ. ಇಲ್ಲಿಯ ವಾಟರ್ ಪಾರ್ಕ್‌ನಲ್ಲಿ “ಹೋಳಿ ಮಿಲನ್’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ವಿಶೇಷತೆ ಎಂದರೆ ಇಲ್ಲಿ ಜನರು ಚಪ್ಪಲಿಗಳನ್ನು ಪರಸ್ಪರ ಎಸೆದುಕೊಂಡು ಹೋಳಿಯನ್ನು ಆಚರಿಸಿದ್ದಾರೆ!

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ವಿಡಿಯೋ ನೋಡಿದರೆ ಅಲ್ಲಿ ಎಲ್ಲರೂ ಚಪ್ಪಲಿ ಎಸೆಯುತ್ತಾ ನಕ್ಕು ನಲಿಯುತ್ತ ಖುಷಿಯಿಂದ ಇರುವಂತೆ ಕಾಣುತ್ತಿದೆ. ಆದರೆ ಅಸಲಿಗೆ ಅಲ್ಲಿ ನಡೆದದ್ದೇ ಬೇರೆ. ಅದೇನೆಂದರೆ ಹೋಳಿ ಹಬ್ಬದ ವೇಳೆ ಎರಡು ಗುಂಪುಗಳ ನಡುವೆ ಜಗಳ ಶುರುವಾಗಿದೆ. ಈ ವೇಳೆ ಒಂದು ಗುಂಪಿನವರು ಇನ್ನೊಂದು ಗುಂಪಿನತ್ತ ಚಪ್ಪಲಿ ಎಸೆದಿದ್ದಾರೆ. ಆಗ ಇನ್ನೊಂದು ಗುಂಪಿನವರೂ ಹಾಗೆಯೇ ಮಾಡಿದ್ದಾರೆ. ಹೀಗೆ ಎರಡೂ ಗುಂಪಿನವರು ಚಪ್ಪಲಿಗಳನ್ನು ಎಸೆದಾಡಿಕೊಂಡಿದ್ದಾರೆ.

    ಚಪ್ಪಲಿ ಎಸೆತ ನಿಲ್ಲಿಸುವಂತೆ ಕಾರ್ಯಕ್ರಮದ ಆಯೋಜಕರು ಪದೇ ಪದೇ ಘೋಷಣೆ ಮಾಡಿದರೂ ಪ್ರಯೋಜನವಾಗಿಲ್ಲ. ಆ ನಂತರ ಸಂಘಟಕರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಆದರೆ ಈ ವಿಡಿಯೋ ನೋಡಿದರೆ ಮಾತ್ರ ಅಸಲಿಯತ್ತು ತಿಳಿಯುವುದೇ ಇಲ್ಲ!

    ವಿಡಿಯೋ ಇಲ್ಲಿದೆ ನೋಡಿ…

    ಹುಬ್ಬಳ್ಳಿ ಕಿಮ್ಸ್​ನಿಂದ ಪ್ರೊಫೆಸರ್, ಅಸಿಸ್ಟೆಂಟ್​ ಪ್ರೊಫೆಸರ್​ ಸ್ಟೆನೋಗ್ರಾಫರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

    15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ: ಈ ಬಾರಿ ಇವೆ ಹಲವು ವಿಶೇಷ- ಇಲ್ಲಿದೆ ಡಿಟೇಲ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts