More

    21 ವರ್ಷಕ್ಕಿಂತ ಕಡಿಮೆ ವಯಸ್ಸಿನವ ಮದುವೆಯಾದರೆ ತಪ್ಪು, ಆದರೆ ಲಿವ್‌ ಇನ್‌ನಲ್ಲಿ ಇರಬಹುದು ಎಂದ ಹೈಕೋರ್ಟ್‌

    ಚಂಡೀಗಢ: ಹಿಂದೂ ವಿವಾಹ ಕಾಯ್ದೆ ಪ್ರಕಾರ 21 ವರ್ಷದೊಳಗಿನ ಯಾವುದೇ ಯುವಕ ಮದುವೆಯಾಗಲು ಸಾಧ್ಯವಿಲ್ಲ. ಆದರೆ ಅವನು ಇಚ್ಛಿಸಿದ್ದಲ್ಲಿ 18 ವರ್ಷ ಮತ್ತು ಮೇಲ್ಪಟ್ಟ ಯುವತಿಯೊಂದಿಗೆ ಕೂಡಿ ಬಾಳಬಹುದು (ಲಿವ್‌ ಇನ್‌ ಸಂಬಂಧ) ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.

    ಹಾಲಿ ಚಾಲ್ತಿಯಲ್ಲಿರುವ ಹಿಂದೂ ವೈವಾಹಿಕ ಕಾಯ್ದೆಯ ಪ್ರಕಾರ, ಹೆಣ್ಣಿನ ಮದುವೆಯ ವಯಸ್ಸು 18 ವರ್ಷ, ಗಂಡಿಗೆ 21 ವರ್ಷ. ಈ ವಯಸ್ಸಿನ ಒಳಗೆ ಮದುವೆಯಾದರೆ ಅದು ಅಪರಾಧ. ಈಗ ಹೈಕೋರ್ಟ್‌ ಹೇಳಿರುವ ಪ್ರಕಾರ, ಹುಡುಗ ಈ ವಯಸ್ಸಿನ ಒಳಗೆ ಮದುವೆಯಾಗುವುದು ಅಪರಾಧವೇ, ಆದರೆ ಮದುವೆಯ ಹೊರತಾಗಿ ಒಟ್ಟಿಗೇ ಬಾಳಬಹುದು ಎಂದು.

    ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಜೋಡಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ ಈ ತೀರ್ಪು ನೀಡಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗನೊಬ್ಬ ಲಿವ್‌ ಇನ್‌ ಸಂಬಂಧದಲ್ಲಿ ಇದ್ದ. ಆದರೆ ಈ ಜೋಡಿಯ ಪಾಲಕರು ವಿರೋಧ ವ್ಯಕ್ತಪಡಿಸಿದ್ದರಿಂದ ರಕ್ಷಣೆ ಕೋರಿ ಇಬ್ಬರೂ ಹೈಕೋರ್ಟ್‌ ಮೊರೆ ಹೋಗಿದ್ದರು. ಆದ್ದರಿಂದ ಈ ರೀತಿ ಒಟ್ಟಿಗೇ ಇರುವುದು ತಪ್ಪಲ್ಲ ಎಂದು ಖುದ್ದು ಸುಪ್ರೀಂಕೋರ್ಟ್‌ ತೀರ್ಪು ನೀಡಿರುವುದಾಗಿ ಉಲ್ಲೇಖಿಸಿದ ಹೈಕೋರ್ಟ್‌, ಅವರಿಗೆ ರಕ್ಷಣೆ ಒದಗಿಸುವಂತೆ ಸೂಚಿಸಿದೆ.

    ಈ ಜೋಡಿ ಲಿವ್‌ ಇನ್‌ ಸಂಬಂಧದಲ್ಲಿ ಇರುವ ಹಿನ್ನೆಲೆಯಲ್ಲಿ, ಕುಟುಂಬಸ್ಥರಿಂದ ಜೀವಕ್ಕೆ ಅಪಾಯವಿದೆ ಎಂದು ವಕೀಲರು ನ್ಯಾಯಾಲಯಕ್ಕೆ ಹೇಳಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹರನರೇಶ್ ಸಿಂಗ್ ಗಿಲ್ ಅವರು, ಪ್ರತಿಯೊಬ್ಬ ನಾಗರಿಕನ ಜೀವ ಮತ್ತು ಆಸ್ತಿಯನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಭಾರತದ ಸಂವಿಧಾನವು ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಭದ್ರತೆ ಒದಗಿಸಿ ಎಂದು ಹೇಳಿದರು.

    ಮಸೀದಿಗಳಲ್ಲಿ ಧ್ವನಿವರ್ಧಕ- ವಕ್ಫ್‌ ಮಂಡಳಿಗಿಲ್ಲ ಅಧಿಕಾರ: ತೆರವುಗೊಳಿಸದಿದ್ರೆ ಕಠಿಣ ಕ್ರಮ- ಎಚ್ಚರಿಕೆ ನೋಟಿಸ್‌

    ಪೂಜೆಗೆಂದು ಹೋದವರು ಮಸಣ ಸೇರಿದರು! ಮಂಡ್ಯದಲ್ಲಿ ಭೀಕರ ಅಪಘಾತ- ಐವರಿಗೆ ಗಂಭೀರ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts