More

    ಅಯ್ಯೋ… ಇದನ್ನು ತಿನ್ನಿಸಿಬಿಟ್ಟೆ… ನನ್ನ ಕೋಳಿಗಳು ಮೊಟ್ಟೆ ಇಡ್ತಿಲ್ಲ- ಪೊಲೀಸ್‌ ಠಾಣೆಗೆ ದೂರು ನೀಡಿದ ವ್ಯಕ್ತಿ

    ಪುಣೆ: ಆಹಾರ ಉತ್ಪಾದಕ ಘಟಕ ನೀಡಿರುವ ಆಹಾರಗಳನ್ನು ನೀಡಿದ ಕೋಳಿ ಸಾಕಾಣಿಕೆದಾರನೊಬ್ಬ ಇದೀಗ ಭಾರಿ ನಷ್ಟ ಅನುಭವಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಆಹಾರ ಉತ್ಪಾದಕ ಘಟಕಗಳ ಆಹಾರವನ್ನು ತಂದು ಕೋಳಿಗಳಿಗೆ ನೀಡಿದ ನಂತರ ಅವುಗಳನ್ನು ಮೊಟ್ಟೆ ಇಡುವುದನ್ನು ನಿಲ್ಲಿಸಿಬಿಟ್ಟಿವೆ. ಈ ಕುರಿತು ಪುಣೆಯ ಅಹಮ್ಮದ್‌ ಎನ್ನುವವರು ಪೊಲೀಸ್‌ ಠಾಣೆ ದೂರು ದಾಖಲು ಮಾಡಿದ್ದಾರೆ.

    ಆಹಾರ ಉತ್ಪಾದಕ ಘಟಕಗಳ ಆಹಾರವನ್ನು ತಂದು ನನ್ನ ಕೋಳಿಗಳಿಗೆ ನೀಡಿದ್ದೆ. ಅದನ್ನು ತಿಂದ ನಂತರ ಕೋಳಿಗಳು ಮೊಟ್ಟೆ ಇಡುವುದನ್ನು ನಿಲ್ಲಿಸಿವೆ ಎಂದು ದೂರಿನಲ್ಲಿ ಅಹಮ್ಮದ್‌ ತಿಳಿಸಿದ್ದು, ಘಟಕದ ವಿರುದ್ಧ ಕಂಪ್ಲೇಂಟ್‌ ಕೊಟ್ಟಿದ್ದಾರೆ.

    ಈ ಕುರಿತು ಪೊಲೀಸರು ವಿಚಾರಣೆ ನಡೆಸಿದಾಗ ಎಚ್ಚೆತ್ತುಕೊಂಡ ಘಟಕವು ಅಹಮ್ಮದ್‌ ಅವರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ. ಆದ್ದರಿಂದ ಸದ್ಯ ಘಟಕದ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿದ ಪಶುಸಂಗೋಪನಾ ಅಧಿಕಾರಿ, ಈ ಆಹಾರಗಳನ್ನು ಪರೀಕ್ಷೆ ಮಾಡಲಾಗಿದೆ. ಕೆಲವು ಆಹಾರಗಳು ನಿರ್ದಿಷ್ಟ ತಳಿಯ ಕೋಳಿಗಳಿಗೆ ಹೊಂದಾಣಿಕೆಯಾಗುವುದಿಲ್ಲ. ಇದೊಂದು ಸಾಮಾನ್ಯ ವಿದ್ಯಮಾನ ಎಂದಿದ್ದಾರೆ.

    ಹೇಗಿದ್ದಿಯಾ ಕಂದ? ನೋವಾಗುತ್ತಿಲ್ಲ ತಾನೆ? ಮೃತ ಮಗನೊಂದಿಗೆ ಆಸ್ಪತ್ರೆ ಎದುರು ದಿನವೂ ವಿಡಿಯೋ ಕಾಲ್‌- ಕಣ್ಣೀರ ಕಥೆ…

    ಮದುವೆಗೂ ಸಿಕ್ತಿಲ್ಲ ರಜೆ! ಪೊಲೀಸ್ ಠಾಣೆ ಎದುರೇ ಹೀಗೊಂದು ಹೃದಯಸ್ಪರ್ಶಿ ಅರಿಶಿಣ ಕಾರ್ಯಕ್ರಮ

    ಪಾಸಿಟಿವ್‌ ಬಂದ್ರೆ ಆಸ್ಪತ್ರೆಗೆ ದೌಡಾಯಿಸಬೇಡಿ… ಹೀಗೆ ಮಾಡಿ… ಕೇಂದ್ರ ಸರ್ಕಾರದ ಈ ವಿಡಿಯೋ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts