More

    ಮುಟ್ಟೋರೇ ಇಲ್ಲ ಎಂದು ಕೊರಗ್ತಿರೋ ಸೋಂಕಿತರಿಗೆ ಹೀಗೆ ಬೆಚ್ಚಗಿನ ಸ್ವರ್ಶ ನೀಡಿದ್ತಾರೆ ಈ ನರ್ಸ್​!

    ಬ್ರೆಜಿಲ್​: ಕರೊನಾ ಸೋಂಕು ಎನ್ನುವುದು ವಿಶ್ವವ್ಯಾಪಿ ದೊಡ್ಡ ತಲೆನೋವಾಗಿಬಿಟ್ಟಿದೆ. ಸೋಂಕು ತಗುಲಿಸಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಕ್ಷಣ ಕ್ಷಣಕ್ಕೂ ಏರುತ್ತಲೇ ಸಾಗಿದೆ. ಸೋಂಕಿತರನ್ನು ಎಷ್ಟೋ ಆಸ್ಪತ್ರೆಗಳಲ್ಲಿ ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ತಮ್ಮನ್ನು ಸ್ಪರ್ಶಿಸುವವರೇ ಇಲ್ಲ ಎಂಬ ಕಾರಣಕ್ಕೆ ಹಲವಾರು ಸೋಂಕಿತರು ಖಿನ್ನತೆ ಜಾರುತ್ತಿದ್ದಾರೆ.

    ಇಂಥ ಅನೇಕ ರೋಗಿಗಳನ್ನು ನೋಡಿದ, ಅವರ ಹತಾಶ ಭಾವವನ್ನು ಕಂಡ ನರ್ಸ್​ ಒಬ್ಬರು ಒಂದೊಳ್ಳೆ ಪ್ಲ್ಯಾನ್​ ಮಾಡಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

    ಬ್ರೆಜಿಲ್​ನ ನರ್ಸ್​ ಮಾಡಿರುವ ಈ ಐಡಿಯಾ ಇದೀಗ ಹಲವಾರು ದೇಶಗಳ ಕಮೆಂಟಿಗರ ಶ್ಲಾಘನೆಗೆ ಒಳಗಾಗಿದೆ. ಐಸೋಲೆಷನ್‍ನಲ್ಲಿದ್ದ ಕೋವಿಡ್-19 ರೋಗಿಗಳನ್ನು ಸಾಂತ್ವನಗೊಳಿಸಲು ಅವರು ಮಾನವರ ಸ್ಪರ್ಶದ ರೀತಿಯಲ್ಲಿ ಬೆಚ್ಚಗಿನ ಸ್ಪರ್ಶ ನೀಡಲು ಈ ಉಪಾಯ ಮಾಡಿದ್ದಾರೆ.

    ಅದೇನೆಂದರೆ ಎರಡು ಗ್ಲೌಸ್ ಒಳಗೆ ಬಿಸಿ ನೀರನ್ನು ತುಂಬಿಸಿದ್ದಾರೆ. ಬಳಿಕ ಈ ಗ್ಲೌಸನ್ನು ರೋಗಿಯ ಕೈ ಮೇಲೆ ಇರಿಸಿ ಕಟ್ಟಿದ್ದಾರೆ. ಹೀಗೆ ಮಾಡಿದರೆ ಯಾರೋ ವ್ಯಕ್ತಿ ತಮ್ಮನ್ನು ಸ್ಪರ್ಶಿಸುತ್ತಿದ್ದಾರೆ ಎಂದ ಭಾವನೆ ಸೋಂಕಿತರಿಗೆ ಬರುತ್ತಿದೆ ಎನ್ನುತ್ತಾರೆ ನರ್ಸ್​.

    ಇದೆಲ್ಲಾ ಸಾಧ್ಯನಾ ಎಂದು ಪ್ರಶ್ನಿಸುವವರು ಇದ್ದಾರೆ. ಆದರೆ ಹೀಗೆ ಮಾಡಿದ ಮೇಲೆ ಎಷ್ಟೋ ರೋಗಿಗಳು ಖಿನ್ನತೆಯಿಂದ ಹೊರಕ್ಕೆ ಬಂದಿದ್ದಾರೆ ಎನ್ನುತ್ತಾರೆ ಈ ನರ್ಸ್​.
    ಈ ಫೋಟೋವನ್ನು ಸಾದಿಕ್ ಸಮೀರ್ ಭಟ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ದೇವರ ಕೈ’ ಎಂಬ ಶೀರ್ಷಿಕೆ ನೀಡಿ ಈ ಬಗ್ಗೆ ಬರೆದಿದ್ದಾರೆ. ಇದಕ್ಕೆ ಹಲವಾರು ಶ್ಲಾಘನಾರ್ಹ ಕಮೆಂಟ್​ಗಳು ಬರುತ್ತಿವೆ.

    ದ್ವೇಷಕ್ಕೆ ಉರುಳಿತು 10 ಹೆಣ! ಆರು ಮಂದಿಯ ಇರಿದು ಕೊಂದರು- ನಾಲ್ವರನ್ನು ಸಜೀವವಾಗಿ ಸುಟ್ಟರು…

    ಆಸ್ಪತ್ರೆಗೆ ಅಡ್ಮಿಷನ್​ ಬೇಕಿದ್ರೆ ಆಕ್ಸಿಜನ್​ ತನ್ನಿ- ಚಿಕಿತ್ಸೆ ಮಧ್ಯೆ ಸಿಲಿಂಡರ್​ ಖಾಲಿಯಾದ್ರೆ ಸಾವಿಗೆ ನಾವಲ್ಲ ಜವಾಬ್ದಾರಿ!

    ತಾಯಿ, ಅಣ್ಣ ಸೇರಿ ಮೋಸದಿಂದ ಹೊಲ ಮಾರಿದ್ದಾರೆ- ಅಮ್ಮ ತೀರಿಕೊಂಡಿದ್ದಾರೆ: ನನ್ನ ಆಸ್ತಿ ಹೇಗೆ ಪಡೆಯಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts