More

    ತಾರಕಕ್ಕೇರುತ್ತಿದೆ ಹಂಸಲೇಖ ವಿವಾದ: ನಟ ಚೇತನ್‌ಗೆ ಪೊಲೀಸ್‌ ಠಾಣೆ ಎದುರೇ ‘ದಿಗ್ಬಂಧನ’- ವಿದೇಶಿಗನಿಗೇನು ಕೆಲಸವೆಂದು ಗರಂ…

    ಬೆಂಗಳೂರು: ಪೇಜಾವರ ಶ್ರೀಗಳ ವಿರುದ್ಧ ಸಂಗೀತ ನಿರ್ದೇಶಕ ಹಂಸಲೇಖ ಅವರು ನೀಡಿರುವ ಹೇಳಿಕೆ ಕುರಿತಂತೆ ಪರ-ವಿರೋಧ ನಿಲುವುಗಳು ಈಗಲೂ ಮುಂದುವರೆದಿದ್ದು, ಈ ವಿಷಯ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಲೇ ಇದೆ.

    ತಮ್ಮ ಹೇಳಿಕೆ ಕುರಿತಂತೆ ಹಂಸಲೇಖ ಅವರು ಕ್ಷಮೆ ಕೋರಿದ್ದಾರೆ. ಈ ಕ್ಷಮೆಯ ನಂತರ ವಿಷಯವನ್ನು ಇಲ್ಲಿಗೇ ಬಿಡುವಂತೆ ಹಂಸಲೇಖ ಅಭಿಮಾನಿಗಳು ಒಂದೆಡೆ ಹೇಳುತ್ತಿದ್ದರೆ, ಹೇಳಿಯೂ ಹೇಳದಂತಿರುವ ಈ ಕ್ಷಮೆ ಎಲ್ಲಿಗೂ ಸಾಕಾಗುವುದಿಲ್ಲ. ಅವರು ಹಂಸಲೇಖ ಬೇಷರತ್ತು ಕ್ಷಮೆಯಾಚಿಸಬೇಕು ಎಂದು ಪೇಜಾವರ ಶ್ರೀ ಅಭಿಮಾನಿಗಳು ಆಗ್ರಹಿಸಿದ್ದಾರೆ.

    ಈ ನಡುವೆಯೇ ಹಂಸಲೇಖ ವಿರುದ್ಧ ಬೆಂಗಳೂರಿನ ಬಸವನಗುಡಿಯಲ್ಲಿ ದೂರು ದಾಖಲಾಗಿದೆ. ಇಂದು ಬಸವನಗುಡಿ ಠಾಣೆಗೆ ಹಂಸಲೇಖ‌ ಹಾಜರಾಗಿ ಹೇಳಿಕೆ ನೀಡುವ ಸಾಧ್ಯತೆ ಇದೆ.

    ಇದರ ಬೆನ್ನಲ್ಲೇ, ಹಂಸಲೇಖ ಅವರ ಪರವಾಗಿ ನಟ ಚೇತನ್‌ ಕೂಡ ನಿನ್ನೆಯಷ್ಟೇ ಟ್ವೀಟ್‌ ಮಾಡಿದ್ದರು. “ಇದು ವಾಕ್‌ ಸ್ವತಂತ್ರದ ಪ್ರಶ್ನೆ. ಇಂದು ಅವರು ನಾಳೆ ಮತ್ತೊಬ್ಬರು. ಕೆಲವು ವಿಚಾರಗಳ ಬಗ್ಗೆ ಮಾತನಾಡ ಬಾರದು ಎನ್ನುವಂತೆ ಕಟ್ಟಿ ಹಾಕಲಾಗುತ್ತಿದೆ. ವಾಕ್‌ಸ್ವಾತಂತ್ರ ಕಿತ್ತು ಕೊಳ್ಳುವ ಪ್ರಯತ್ನ ಇದು. ಎಲ್ಲರಿಗೂ ಮಾತನಾಡುವ ಮತ್ತು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವ ಹಕ್ಕಿದೆ. ಅದನ್ನು ಯಾರು ಕಸಿದು ಕೊಳ್ಳ ಬಾರದು” ಎನ್ನುವ ಮೂಲಕ ತಾವು ಹಂಸಲೇಖ ಅವರ ಜತೆಗೆ ಪೊಲೀಸ್ ಠಾಣೆಗೆ ಬರುವುದಾಗಿ ಹೇಳಿದ್ದರು.

    ಇದಾಗಲೇ ಹಲವಾರು ವಿಷಯಗಳ ಬಗ್ಗೆ ಹೇಳಿಕೆ ನೀಡಿ ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗಿರುವ ನಟ ಚೇತನ್‌ ವಿರುದ್ಧ ಈ ವಿಷಯವಾಗಿಯೂ ಟೀಕೆಗಳು ವ್ಯಕ್ತವಾಗಿವೆ. ಆದ್ದರಿಂದ ಪೊಲೀಸ್ ಠಾಣೆ ಪ್ರವೇಶ ಮಾಡದಂತೆ ದಿಗ್ಬಂಧನ ಹೇರಲು ಭಜರಗಂದಳ ಮುಖಂಡರು ಪೊಲೀಸ್‌ ಠಾಣೆ ಎದುರು ಜಮಾಯಿಸಿದ್ದಾರೆ.

    ಹಂಸಲೇಖ ಅವರೇ ಕ್ಷಮೆಯಾಚಿಸಿದ್ದಾರೆ. ಚೇತನ್ ಈಗ ಯಾಕೆ ಮಧ್ಯಪ್ರವೇಶ ಮಾಡ್ತಿದ್ದಾರೆ? ಚೇತನ್ ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಭಜರಗಂದಳ ಮುಖಂಡರು ಹೇಳಿಕೆ ನೀಡಿದ್ದಾರೆ.
    ಈ ಕುರಿತು ಮಾತನಾಡಿದ ಬೆಂಗಳೂರು ಭಜರಂಗದಳದ ಮುಖಂಡ ತೇಜಸ್, ಹಂಸಲೇಖ ಅವರ ಕ್ಷಮೆ ಸಾಕಾಗಲ್ಲ, ಅವರು ಬೇಷರತ್ತು ಕ್ಷಮೆಯಾಚಿಸಬೇಕು. ಈ ವಿಷಯದಲ್ಲಿ ಚೇತನ್ ಬರೋ ಅವಶ್ಯಕತೆ ಇಲ್ಲ. ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಚೇತನ್ ಈ ದೇಶದ ಪ್ರಜೆ ಅಲ್ಲ, ಈತ ಸಸ್ಯಾಹಾರಿ ಹಾಗೂ ಮಾಂಸಾಹಾರಿಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಪೋಲಿಸ್ ಠಾಣೆ ಒಳಗೆ ಅವರನ್ನು ಬಿಡುವುದಿಲ್ಲ. ಆದ್ದರಿಂದ ಕಪ್ಪುಪಟ್ಟಿ ಪ್ರದರ್ಶಿಸುತ್ತೇವೆ ಎಂದು ಹೇಳಿದ್ದಾರೆ.

    ‘ಘಟನೆ ನೆನೆದರೆ ಮೈನಡಗುತ್ತಿದೆ… ರೇಪ್‌ಗೆ ಒಳಗಾದವಳು ನಾನೇ ಕೊನೆಯವಳಾಗಲಿ… ಬದುಕುವ ಆಸೆ ಇತ್ತು… ಆದರೆ…’

    ‘ಘಟನೆ ನೆನೆದರೆ ಮೈನಡಗುತ್ತಿದೆ… ರೇಪ್‌ಗೆ ಒಳಗಾದವಳು ನಾನೇ ಕೊನೆಯವಳಾಗಲಿ… ಬದುಕುವ ಆಸೆ ಇತ್ತು… ಆದರೆ…’

    ತಂದೆಯ ಶವದೊಂದಿಗೆ ಮೂರು ತಿಂಗಳು ಕಳೆದ ಮಗ: ಮನೆಯಲ್ಲಿದ್ದ ಪತ್ನಿಗೂ ತಿಳಿಯಲಿಲ್ಲ ಸಾವಿನ ವಿಷಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts