More

    4 ಲಕ್ಷಕ್ಕೂ ಅಧಿಕ ಕೋಳಿಗಳ ಸಾವು! ಸಾಕಪ್ಪಾ ಸಾಕು ಚಿಕನ್​ ಸಹವಾಸ ಎನ್ನುತ್ತಿದ್ದಾರೆ ಇಲ್ಲಿಯ ಜನ

    ಚಂಡೀಗಢ: ಹರಿಯಾಣದಲ್ಲಿ ಅಕ್ಷರಶಃ ಆತಂಕ ಮನೆಮಾಡಿಬಿಟ್ಟಿದೆ. ಕರೊನಾ ವೈರಸ್​ನಿಂದ ಇನ್ನೇನು ಜನರು ಒಂದಷ್ಟು ಚೇತರಿಸಿಕೊಳ್ಳುತ್ತಿರುವಾಗಲೇ ಕೋಳಿಜ್ವರದಿಂದ ಇಡೀ ರಾಜ್ಯದ ಜನತೆ ಬೆಚ್ಚಿಬಿದ್ದಿದ್ದಾರೆ. ಇದಕ್ಕೆ ಕಾರಣ, ಕಳೆದೊಂದು ತಿಂಗಳಿನಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಕೋಳಿಗಳು ದಿಢೀರ್​ ಮೃತಪಟ್ಟಿವೆ.

    ಈ ಕೋಳಿಗಳಲ್ಲಿ ಹಕ್ಕಿಜ್ವರ (ಎಚ್​5ಎನ್​8-ಏವಿಯನ್ ಇನ್​ಫ್ಲುಯೆನ್ಜಾ ) ವೈರಸ್​ ದೃಢಪಟ್ಟಿವೆ. ಈ ಕುರಿತು ಹರಿಯಾಣ ಸಚಿವ ಜೆ.ಪಿ. ದಲಾಲ್ ಖಚಿತಪಡಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಒಂದೇ ತಿಂಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಕೋಳಿಗಳ ನಿಗೂಢವಾಗಿ ಮೃತಪಟ್ಟಿವೆ. ವಿವಿಧ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿನ ಕೋಳಿಗಳು ಅಸಾಮಾನ್ಯ ರೀತಿಯಲ್ಲಿ ಮೃತಪಟ್ಟಿದ್ದು, ಇವುಗಳ ಮಾದರಿಗಳನ್ನು ಭೋಪಾಲ್‌ಗೆ ಕಳುಹಿಸಲಾಗಿದೆ ಎಂದು ಹೇಳಿದರು.

    ಇದಾಗಲೇ ಪರೀಕ್ಷೆ ಮಾಡಿರುವ ಕೋಳಿಗಳಲ್ಲಿ ಎಚ್​5ಎನ್​8-ಏವಿಯನ್ ಇನ್​ಫ್ಲುಯೆನ್ಜಾ ದೃಢಪಟ್ಟಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ. ರಾಜ್ಯದಲ್ಲಿ ಹಕ್ಕಿ ಜ್ವರ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಶೇಷ ತಂಡಗಳನ್ನು ನಿಯೋಜಿಸಿದೆ.

    ವಿಚ್ಛೇದನ ಕೊಟ್ಟ ನಂತರ ದಿಢೀರ್​ ಮರುಮದುವೆಯಾಗಲು ಬರುವುದಿಲ್ಲ…

    ಕೋಳಿಗಳಲ್ಲಿ ಕಂಡುಬಂತು ಪಾಸಿಟಿವ್​: ಮಾಂಸದಂಗಡಿ ಮುಚ್ಚಲು ಆದೇಶಿಸಿದ ಮಧ್ಯಪ್ರದೇಶ ಸರ್ಕಾರ

    2021 ಆರಂಭ ಕೊಡಲಿಲ್ಲ ಲಕ್​: ರಾಗಿಣಿ ಬೇಲ್​ ಅರ್ಜಿ ಮುಂದೂಡಿಕೆ

    ಹೆಂಡದ ನಶೆ ಇಳಿಯುವ ಮುನ್ನ ಹೆಣವಾದ ವ್ಯಸನಿಗಳು! ತನಿಖೆಗೆ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts