More

    ಅಪ್ಪ-ಅಮ್ಮ, ಅತ್ತೆ-ಮಾವನೊಟ್ಟಿಗೆ ಕಾಲ ಕಳೆಯಲು ಸರ್ಕಾರಿ ನೌಕರರಿಗೆ 2 ದಿನ ಹೆಚ್ಚುವರಿ ರಜೆ ಘೋಷಿಸಿದ ಅಸ್ಸಾಂ ಸರ್ಕಾರ

    ಗುವಾಹಟಿ (ಅಸ್ಸಾಂ): ಈಗ ಹೆಚ್ಚಿನ ದಂಪತಿ ಅಪ್ಪ-ಅಮ್ಮ, ಅತ್ತೆ-ಮಾವ ಇವರಿಂದ ದೂರವಾಗಿ ನೌಕರಿಗಾಗಿ ಪ್ರತ್ಯೇಕ ವಾಸವಾಗಿರುತ್ತಿರುವ ಕಾರಣ, ಅವರಿಗೆ ಕುಟುಂಬದ ಜತೆ ಕಾಲಕಳೆಯಲು ಸಮಯ ಸಿಗುವುದಿಲ್ಲ ಎಂದು ಮನಗಂಡಿರುವ ಅಸ್ಸಾಂ ಸರ್ಕಾರ, ತನ್ನ ಸರ್ಕಾರಿ ನೌಕರರಿಗೆ ಎರಡು ದಿನಗಳ ಕಾಲ ಹೆಚ್ಚುವರಿ ರಜೆಯನ್ನು ಘೋಷಿಸಿದೆ.

    ಅಸ್ಸಾಂ ಮುಖ್ಯಮಂತ್ರಿ ಹಿಂತ್ ಬಿಸ್ವಾಶರ್ಮ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ತಮ್ಮ ವೃದ್ಧ ಪಾಲಕರು/ಪೋಷಕರೊಂದಿಗೆ ಸಮಯ ಕಳೆಯಲು ಪ್ರತಿ ವರ್ಷ ಹೆಚ್ಚುವರಿ ವಾರದ ರಜೆ ನೀಡುವುದಾಗಿ ಈ ಹಿಂದೆ ಮಾಡಿದ್ದ ಘೋಷಣೆಯಂತೆ ಮುಖ್ಯಮಂತ್ರಿಯವರು ಈ ನಿರ್ಧಾರ ಪ್ರಕಟಿಸಿದ್ದಾರೆ.

    ಜನವರಿ 6 ಮತ್ತು 7ನೇ ತಾರೀಖನ್ನು ಇದಕ್ಕಾಗಿ ನಿಗದಿ ಮಾಡಲಾಗಿದೆ. ನೌಕರರಿಗೆ ಎರಡನೆಯ ಶನಿವಾರ ಜ.8 ರಜೆ ಇದ್ದು, 9ರ ಭಾನುವಾರ ಕೂಡ ರಜೆ ಇರುವ ಹಿನ್ನೆಲೆಯಲ್ಲಿ 6 ಮತ್ತು 7ನೇ ತಾರೀಖು ರಜೆ ಘೋಷಿಸಿದರೆ ಒಟ್ಟು ನಾಲ್ಕು ದಿನ ತಮ್ಮ ಕುಟುಂಬದ ಜತೆ ಕಾಲ ಕಳೆಯಲು ಅವಕಾಶ ಸಿಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

    ಹೊಸ ವರ್ಷದ ಆರಂಭದಲ್ಲಿ ಪ್ರತಿಯೊಬ್ಬರು ತಮ್ಮ ತಂದೆ-ತಾಯಿಯ ಆಶೀರ್ವಾದ ಪಡೆದಾಗ ನನಗೆ ವೈಯಕ್ತಿಕವಾಗಿ ತುಂಬಾ ಸಂತೋಷವಾಗುತ್ತದೆ, ಇದರಿಂದ ಅವರು ರಾಜ್ಯದ ಹಿತಕ್ಕಾಗಿ ಉತ್ತಮವಾಗಿ ಕೆಲಸ ಮಾಡಬಹುದು. ಆದ್ದರಿಂದ ಈ ರಜೆಯನ್ನು ನೀಡುತ್ತಿದ್ದೇವೆ ಎಂದಿರುವ ಮುಖ್ಯಮಂತ್ರಿ, ಇದು ಸರ್ಕಾರಿ ಸೇವೆಯಲ್ಲಿ ಇರುವ ಎಲ್ಲರಿಗೂ ಅನ್ವಯ ಆಗಲಿದೆ, ಜತೆಗೆ ಸಚಿವರು, ಹಿರಿಯ ಅಧಿಕಾರಿಗಳು ಕೂಡ ಈ ರಜೆಯ ಅನುಕೂಲ ಪಡೆಯಬಹುದು ಎಂದಿದ್ದಾರೆ.

    ಹಿಂದಿನ ಸಚಿವ ಸಂಪುಟದಲ್ಲಿ (ಸರ್ಬಾನಂದ ಸೋನೋವಾಲ್ ಮುಖ್ಯಮಂತ್ರಿಯಾಗಿದ್ದ ವೇಳೆ) ಶರ್ಮಾ ಅವರು ಹಣಕಾಸು ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಅವರು ತಮ್ಮ ಅವಲಂಬಿತ ಪೋಷಕರನ್ನು ನೋಡಿಕೊಳ್ಳಲು ವಿಫಲರಾದ ಸರ್ಕಾರಿ ನೌಕರರ ವೇತನದ ಶೇಕಡ 10 ರಷ್ಟನ್ನು ಕಡಿತಗೊಳಿಸಲಾಗುವುದು ಎಂದು ಘೋಷಿಸಿದ್ದರು.

    ಉಗ್ರರಿಗೆ ಗುಟ್ಟಾಗಿ ಹಣ ನೀಡ್ತಿದ್ದ ಮಂಗಳೂರು ದಂಪತಿಗೆ 10 ವರ್ಷ ಶಿಕ್ಷೆ- ಸಭ್ಯಳಂತಿದ್ದ ಪತ್ನಿ ಮಾಡುತ್ತಿದ್ದುದು ಭಯಾನಕ ಕೃತ್ಯ!

    ಲವ್‌ ಮಾಡಿದ್ರು, ಮನೆಯವರೂ ಒಪ್ಪಿಗೆ ಸೂಚಿಸಿದ್ರು: ಆದ್ರೆ ಮದ್ವೆ ದಿನ ಡಾಕ್ಟರ್‌ ವರ ನಾಪತ್ತೆ! ಧರಣಿ ಕುಳಿತ ವಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts