More

    ರೇಪ್‌ ಕೇಸ್‌ನಲ್ಲಿ ಸಿಲುಕಿದ್ದ ಬಿಜೆಪಿ ಸಚಿವ ಕೊನೆಗೂ ರಾಜೀನಾಮೆ: ಎರಡೆರಡು ಬಾರಿ ಹುದ್ದೆಗೇರಿದ್ದ ಮಿಲಿಂದ್

    ಪಣಜಿ: ರೇಪ್‌ ಕೇಸ್‌ನಲ್ಲಿ ಸಿಲುಕಿದ್ದ ಗೋವಾ ನಗರಾಭಿವೃದ್ಧಿ ಸಚಿವ ಮತ್ತು ಬಿಜೆಪಿ ಶಾಸಕ ಮಿಲಿಂದ್ ನಾಯ್ಕ್ ಅವರು ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಮಿಲಿಂದ್ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಮಹಿಳೆಯೊಬ್ಬರ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಈಚೆಗೆ ಕಾಂಗ್ರೆಸ್ ಗೋವಾ ಅಧ್ಯಕ್ಷ ಗಿರೀಶ್ ಛೋಡನ್ಕರ್ ಆರೋಪಿಸಿದ್ದರು. ಅವರ ಆರೋಪದ ನಂತರ ಮಿಲಿಂದ್‌ ಅವರನ್ನು ಸಚಿವ ಸ್ಥಾನದಿಂದ ಕೆಳಕ್ಕೆ ಇಳಿಸಬೇಕು ಎಂದು ಭಾರಿ ಒತ್ತಡ ಕೇಳಿಬಂದಿತ್ತು. ಇಷ್ಟೇ ಅಲ್ಲದೇ ಈ ಆರೋಪದ ಕುರಿತಂತೆ ತನಿಖೆ ಆಗಬೇಕು ಎಂದು ಕಾಂಗ್ರೆಸ್‌ ಮುಖಂಡರು ಆಗ್ರಹಿಸಿದ್ದರು.

    ಗೋವಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸಂಕಲ್ಪ್ ಅಮೋನ್ಕರ್ ಕೂಡ ಮಿಲಿಂದ್ ನಾಯ್ಕ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಮಿಲಿಂದ್ ಮತ್ತು ಸಂತ್ರಸ್ತೆ ನಡೆಸಿರುವ ಸಂಭಾಷಣೆ ನಡೆಸಿರುವ ಆಡಿಯೋವನ್ನು ಅವರು ಬಿಡುಗಡೆಗೊಳಿಸಿದ್ದರು. ಇದರಿಂದ ರಾಜೀನಾಮೆಗೆ ಭಾರಿ ಒತ್ತಡ ಕೇಳಿಬಂದಿತ್ತು.

    ಇದೀಗ ಭಾರಿ ಒತ್ತಡಕ್ಕೆ ಮಣಿದು ಕೊನೆಗೂ ಮಿಲಿಂದ್‌ ಅವರು ರಾಜೀನಾಮೆ ನೀಡಿದ್ದಾರೆ. ಇವರು ರಾಜೀನಾಮೆ ನೀಡಿರುವ ಕುರಿತು ಮುಖ್ಯಮಂತ್ರಿಗಳ ಕಚೇರಿ ಬುಧವಾರ (ಡಿ.15) ತಡರಾತ್ರಿ ಅಧಿಕೃತವಾಗಿ ಪ್ರಕಟಿದೆ. ಈ ಕುರಿತು ಟ್ವಿಟರ್‌ ಮೂಲಕ ಸ್ಪಷ್ಟನೆಯನ್ನು ನೀಡಿರುವ ಸಿಎಂ ಕಚೇರಿ, ಆರೋಪಕ್ಕೆ ಸಂಬಂಧಿಸಿದಂತೆ ಮುಕ್ತ ಮತ್ತು ನ್ಯಾಯಯುತ ತನಿಖೆ ಖಚಿತಪಡಿಸುವ ಉದ್ದೇಶದಿಂದ ಮಿಲಿಂದ್ ನಾಯ್ಕ್ ಅವರು ರಾಜೀನಾಮೆ ನೀಡಿದ್ದಾರೆ. ಇದೀಗ ಅವರ ರಾಜೀನಾಮೆಯನ್ನು ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದಿದೆ.

    ಮಿಲಿಂದ್ ನಾಯ್ಕ್ ದಕ್ಷಿಣ ಗೋವಾದ ಮರ್ಮಗೋವ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಪ್ರಮೋದ್ ಸಾವಂತ್ ನೇತೃತ್ವದ ಸಂಪುಟದಲ್ಲಿ ನಗರಾಭಿವೃದ್ಧಿ ಖಾತೆಯನ್ನು ನಿಭಾಯಿಸುತ್ತಿದ್ದರು. ಇದಕ್ಕೂ ಮುನ್ನ ಮನೋಹರ್ ಪರಿಕ್ಕರ್ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಸಚಿವರಾಗಿದ್ದರು.

    ಸುಖ ಬೇಕಾದ್ರೆ ಬಾಯ್‌ಫ್ರೆಂಡ್‌ ಮಾಡ್ಕೋ, ನನ್‌ ತಂಟೆಗೆ ಬರ್ಬೇಡಾ ಅನ್ನೋ ಗಂಡನ ಜತೆ ಹೇಗೆ ಬಾಳಲಿ ಮೇಡಂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts