More

    VIDEO: ಗದಗದ ವಸತಿ ನಿಲಯದಲ್ಲಿ ‘ಹುಳುಗಳ ಪಾಯಸ’! ದಂಗಾದ ವಿದ್ಯಾರ್ಥಿಗಳು, ಸಿಎಂಗೆ ಮನವಿ

    ಗದಗ: ಗದಗನ ಬಾಲಕರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಬಾಲಕರ ವಸತಿ ನಿಲಯದಲ್ಲಿ ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆಯಾಗಿದ್ದು, ವಿದ್ಯಾರ್ಥಿಗಳು ಶಾಕ್‌ ಆಗಿದ್ದಾರೆ.

    ವಸತಿ ನಿಲಯದಲ್ಲಿ ಮಾಡಿದ ಪಾಯಸದ ತುಂಬೆಲ್ಲಾ ಹುಳುಗಳು ಕಾಣಿಸಿಕೊಂಡಿವೆ. ಇದರಿಂದ ವಸತಿ ನಿಲಯದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ (ಜ.28) ರಾತ್ರಿ ಈ ಪಾಯಸ ಮಾಡಲಾಗಿತ್ತು. ಅದನ್ನು ನೋಡಿದ ವಿದ್ಯಾರ್ಥಿಗಳು ಅರೆಕ್ಷಣ ದಂಗಾಗಿದ್ದಾರೆ. ಏಕೆಂದರೆ ಅದರ ತುಂಬ ಹುಳುಗಳು ಇದ್ದವು! ಇನ್ನು ಕೆಲವು ವಿದ್ಯಾರ್ಥಿಗಳು ಸರಿಯಾಗಿ ಪಾಯಸ ಗಮನಿಸದೇ ಅದನ್ನು ಸೇವಿಸಿದ್ದು, ಇದೀಗ ಗಾಬರಿ ಬಿದ್ದಿದ್ದಾರೆ.

    ಗದಗ ನಗರದ ಹೊಸ ಬಸ್ ನಿಲ್ದಾಣದ ಬಳಿ ಈ ವಸತಿ ನಿಲಯವಿದೆ. ವಸತಿ ನಿಲಯದ ವಾರ್ಡನ್ ಬಿ.ಎಸ್. ಗೂಡಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ರಾತ್ರಿ 12 ಗಂಟೆಯಾದರೂ ಊಟವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಯಿತು. ಹಸಿವಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು ರಾತ್ರೋರಾತ್ರಿ ವಾರ್ಡನ್ ವಿರುದ್ಧ ಆಕ್ರೋಶಗೊಂಡಿದ್ದಾರೆ.

    ನಂತರ ವಸತಿ ಶಾಲೆಯ ಸಿಬ್ಬಂದಿ ಬೇರೆ ಅಡುಗೆ ಮಾಡಿ, ಊಟ ನೀಡಿದ್ದಾರೆ. ಅವ್ಯವಸ್ಥೆ ಸರಿ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ‌ ಅವರಿಗೂ ಮನವಿ ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್‌)

    ವಿಡಿಯೋ ಇಲ್ಲಿದೆ ನೋಡಿ:

    ರವಿ ಚನ್ನಣ್ಣನವರ್ ಸೇರಿದಂತೆ ಒಂಬತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

    ಪತ್ನಿನೇ ಡಿವೋರ್ಸ್‌ಗೆ ಅರ್ಜಿ ಹಾಕಿದ್ರೆ ಒಡವೆಗಳು ವಾಪಸ್‌ ಸಿಗಲ್ವಾ? ಆಕೆಗೆ ಪರಿಹಾರ ಸಿಗಲ್ಲ ಎನ್ನೋದು ನಿಜನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts